Posts

Showing posts from October, 2022

Surrogacy Law

Image
 ಅ ಕ್ಟೊಬರ್ 2021ರಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳುತ್ತಾರೆ “ಆಧುನಿಕ ಮಹಿಳೆ ಒಬ್ಬಳೇ ಇರಲು ಬಯಸುತ್ತಾಳೆ. ವಿವಾಹವಾದರೂ ಮಗು ಹೆರಲು ಇಷ್ಟ ಪಡುತ್ತಿಲ್ಲ, ಬಾಡಿಗೆ ತಾಯಿಯಿಂದ ಮಗು ಪಡೆಯಲು ಬಯಸುತ್ತಿದ್ದಾಳೆ” ಎಂದು.  ಒಬ್ಬ ಮಹಿಳೆ ಹೀಗೆ ತನ್ನಿಷ್ಟಕೆ ಅನುಗುಣವಾಗಿ ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯಬಹುದು ಎಂದರೆ ಒಟ್ಟು 19 ಪುಟಗಳ 54 ಮುಖ್ಯ ಸೆಕ್ಷನ್‍ಗಳ ಸ್ಯಾರೋಗೆಸಿ (ನಿರ್ವಹಣೆ) ಕಾನೂನು-2021 ಹಾಗೂ 69 ಪುಟಗಳ 35 ರೂಲ್ಸ್ ಜೊತೆಗೆ 19 ನಮೂನೆಗಳನ್ನು ಹೊಂದಿರುವ ಸ್ಯಾರೋಗೆಸಿ ನಿಬಂಧನೆಗಳು-2022 ಇವುಗಳನ್ನು ಜಾರಿಗೆ ತರುವ ಅವಶ್ಯಕತೆಯಾದರೂ ಏನಿತ್ತು?! ಮೊನ್ನೆಮೊನ್ನೆ ನಯನತಾರ ಎನ್ನುವ ಪ್ರಖ್ಯಾತ ನಟಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಾಗ ಕೆಲವು ಜನರು ಟೈಮ್ ಪಾಸ್ ಮಾತಿನಂತೆ ಹಗುರವಾಗಿ ಹೇಳಿದ್ದು “ಮದುವೆ ಮಾಡಿಕೊಂಡು ಲಕ್ಷಣವಾಗಿ ಮಕ್ಕಳು ಹೆರಕ್ಕೆ ಏನಂತೆ?” ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕೆಲವರ ಮಾತು “ಮಕ್ಕಳು ಮಾಡಿಕೊಂಡ ಮೇಲೆ ಮದುವೆ ಯಾಕೆ? ನಮ್ಮ ಸಂಸ್ಕೃತಿ ಹಾಳಾಗುತ್ತಿದೆ.”   ತಮ್ಮದೂ ಒಂದು ಮಾತಿರಲಿ ಎಂದುಕೊಳ್ಳುವ ಕೆಲವರು ಹೇಳಿದ್ದು “ಊರಲೆಲ್ಲಾ ಅನಾಥ ಮಕ್ಕಳು ಬಿದ್ದಲೆಯುತ್ತಿವೆ. ಅವುಗಳನ್ನು ದತ್ತು ತೆಗೆದುಕೊಂಡು ಸಾಕಬಾರದೇ?”. ಇನ್ನೂ ಒಂದಷ್ಟು ತಲೆಗಳು “ಹೆಂಗಸರಿಗೆ ತಮ್ಮ ಸೌಂದರ್ಯ ಉಳಿದರೆ ಸಾಕು, ಸಮಾಜ ಏನಾದರೇನಂತೆ?” ಎಂದವು. ಹೀಗೇ ಇನ್ನೂ ತರಹಾವರಿ ವಾಕ್ಯಗಳನ್ನು ಓದುವಾಗ, ಕೇಳುವಾಗ