Posts

Showing posts from June, 2023

Talk in News 1st TV

Image
 ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂದು ಬ್ರಹ್ಮಚಾರಿಗಳು ಬಯಸಿಯೂ ಹೆಣ್ಣು ಸಿಗದೆ ಒಂಟಿ ಕಣ್ಣಲ್ಲಿ ಅಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು News 1st TV ಯವರು ಮೊನ್ನೆ (18-06-2023) ಕೇಳಿದಾಗ ಇಷ್ಟು ಹೇಳಿದೆ. ಸಮಯ ಆದಾಗ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.  https://youtu.be/X8S5pnXQJDc

Special Markets of Chirapunji

Image
    ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು.   ಶಿಲ್ಲಾಂಗ್ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ.   ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ನಿಂತಿದ್ದೆ ಐವ್

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

Image
  ಎರಡನೆಯ ಬಾರಿಗೆ ಈ ಮಕ್ಕಳನ್ನು ರಸ್ತೆಯಲ್ಲಿ ಸಿಕ್ಕರು ಎನ್ನುವ ಕಾರಣಕ್ಕೆ ಪೋಲೀಸರು ತಂದು ನಿಲ್ಲಿಸಿದ್ದರು. ಕಂಕುಳಲ್ಲಿ ಒಣಗಿದ ಪಿಳ್ಳೆಯೊಂದನ್ನು ಎತ್ತಿಕೊಂಡು, ಸಿಂಬಳ ಸುರಿಸುತ್ತಾ ತಪ್ಪು ಹೆಜ್ಜೆ ಇಡುತ್ತಿದ್ದ ಇನ್ನೊಂದು ಮಗುವೊಂದನ್ನು ದರದರ ಎಳೆದುಕೊಂಡು ಅಳುತ್ತಾ ಬಂದು ನಿಂತಳು ತಾಯಿ. ಗಂಡನನ್ನು ಕರೆದುಕೊಂಡು ಬರಲು ತಾಕೀತು ಮಾಡಲಾಯಿತು. ಅದೇ ಸ್ಥಿತಿಯಲ್ಲಿ ಇಬ್ಬರೂ ಬಂದು ನಿಂತರು. ಹಿಂದಿನ ರಾತ್ರಿ ಅವನು ಮದ್ಯದಲ್ಲಿ ಮಿಂದೆದ್ದಿದ್ದ ಎನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಸಿಟ್ಟು ನೆತ್ತಿಗೇರಿತು. “ಸಾಕಲು ಯೋಗ್ಯತೆ ಇಲ್ಲದಿದ್ದ ಮೇಲೆ ಅದ್ಯಾಕೆ ಮಕ್ಕಳು ಮಾಡಿಕೊಳ್ಳುತ್ತೀರ? ಏನಮ್ಮ ನಿನಗೆ ನಾಚಿಕೆ ಆಗಲ್ಲ್ವಾ?” ಅಂತ ಜೋರು ದನಿ ಮಾಡಿದೆ. ಕೂಡಲೇ ಗೊಳೋ ಅಂತ ಅವಳ ದನಿ ನನ್ನದಕ್ಕಿಂತ ದುಪ್ಪಟ್ಟಾಯ್ತು. “ನಾಚಿಕೆ ಏನ್ ಮೇಡಂ ಜೀವನಾನೇ ಸಾಕಾಗಿದೆ. ಈ ಮಕ್ಕಳಿಗೆ ಅನ್ನಕ್ಕೆ ಒಂದು ದಾರಿ ಮಾಡಿ ಕೊಡಿ ನೀವು ಇವನನ್ನೂ ಬಿಟ್ಟು ಎಲ್ಲಾದರು ಹೋಗಿ, ದುಡ್ಕೊಂಡು ತಿನ್ನ್ಕೋತೀನಿ” ಎನ್ನುತ್ತಾ ಅಳು ಮುಂದುವರೆಸಿದಳು. ಆರು ವರ್ಷಗಳ ಹಿಂದೆ ಮದುವೆಯಾದವಳ ಗಂಡ ಕುಡುಕ. ಎರಡು ಹೆಣ್ಣು ಮಕ್ಕಳನ್ನು ಕೈಗಿತ್ತು ಅಪಘಾತದಲ್ಲಿ ಸತ್ತಿದ್ದ. “ಗಂಡು ದಿಕ್ಕಿಲ್ಲದೆ ಹೆಂಗೆ ಬಾಳ್ವೆ ಮಾಡೋದು ಮೇಡಂ” ಎಂದಳು. ಅದಕ್ಕೇ ಹೀಗೆ ಮುಂದೆ ನಿಂತಿದ್ದವನನ್ನು ಮದುವೆಯಾಗಿದ್ದಳು. “ ಇವನಿಗೆ ಅವರಪ್ಪ ಕೊಟ್ಟಿರೋ ಮನೆ ಇದೆ ಮೇಡಂ. ನೀನು ಮಕ್ಕಳನ್ನು ನೋಡಿಕೊಂಡು ಮನೆಯ