Posts

Showing posts from January, 2021

ನಲಿವು ಎಂದೂ ವ್ಯಕ್ತಿಗತ ; ನೋವು ಯಾವತ್ತಿಗೂ ಸಾಮುದಾಯಿಕ

Image
(ಕರ್ನಾಟಕ ಲೇಖಕಿಯರ ಸಂಘದ , ಸಾಹಿತ್ಯ ಸಂಚಯ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು)  *ಕಾನೂನು, ಮಹಿಳೆ ಮತ್ತು ಅರಿವು* ಎಲ್ಲರಿಗೂ ನಮಸ್ಕಾರ. ಇಂದಿನ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕಿ ಎನ್ನುವ ದೊಡ್ಡ ಪದ ಬಳಸಿದ್ದಾರೆ. ಆದರೆ ಉಪನ್ಯಾಸ ಮಾಡಲು ಆಳವಾದ ಅಧ್ಯಯನ ಇರಬೇಕು ಮತ್ತು ಉಪನ್ಯಾಸಕಿ ಆಗಲು ಅರ್ಹತೆ ಇರಬೇಕು. ಇವೆರಡು ನನ್ನ ಬಳಿ ಇಲ್ಲ. ಹಾಗಾಗಿ ಇದು ಉಪನ್ಯಾಸ ಅಲ್ಲ. ನಿಮ್ಮೆಲ್ಲರ ವಿನಾಕಾರಣ ವಿಶ್ವಾಸಕ್ಕೆ ಮಣಿದು ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ ಮತ್ತು ಅದರ ಮೂಲಕವೇ ಬೆಳೆಯಬೇಕು ಎನ್ನುವ ಆಸೆಯಿಂದ ಇಲ್ಲಿದ್ದೇನೆ. ಒಂದಷ್ಟು  ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಾನೂನು ತರಬೇತಿ ನೀಡಲು ಹೋಗಿದ್ದಾಗ, ಮಹಿಳಾ ಐಏಎಸ್ ಅಧಿಕಾರಿಯೊಬ್ಬರು ಮಹಿಳೆಯರೂ ಉಯಿಲು ಮಾಡಬಹುದು ಎನ್ನುವ ವಿಷಯವೇ ತಮಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಾಗ   ಮೊದಲ ಬಾರಿಗೆ ಒಬ್ಬ ಮಹಿಳೆಯಾಗಿ ನನ್ನ ಜವಾಬ್ದಾರಿಯ ಅರಿವಾಯ್ತು. ಅದಕ್ಕೂ ಮೊದಲಿನಿಂದಲೇ, ಅಸ್ತಿತ್ವ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದ ಮಹಿಳೆಯರು ಮತ್ತು ಮಕ್ಕಳು ಎನ್ನುತ್ತಾ ಕೆಲಸ ಮಾಡುತ್ತಿದ್ದರೂ, ಈ ಘಟನೆ ಮೊದಲ ಬಾರಿಗೆ ನನ್ನ ಜವಾಬ್ದಾರಿಯನ್ನು ಕೇಂದ್ರಿಕೃತಗೊಳಿಸಿಕೊಟ್ಟಿದ್ದು. ಇದರಿಂದ ನಾನು ಕಲಿತ ಪಾಠ ಅಂದರೆ ಕಲಿಯುವುದು ಎಷ್ಟು ಒಳ್ಳೆಯದೋ ಕಲಿತು ಸುಮ್ಮನಿರುವುದು ಅಷ್ಟೇ ಕೆಟ್ಟದು ಅಂತ. ನಮ್ಮ ಸಂವಿಧಾನದ ಮೂಲಭೂತ ಆಶಯವಾದ  “ಸಹಬಾಳ್ವೆ”

ಕರೋನ ತೋರಿದ ತವರು

Image
 ಇವತ್ತಿನ ಆಂದೋಲನ ಪತ್ರಿಕೆಯಲ್ಲಿ ಕರೋನ ತೋರಿಸಿದ ತವರೂರ ಸುಖ.... ಓದುತ್ತೀರಲ್ಲ 🙏🙏🙏 “ ಜೀವನದಲ್ಲಿ ಎದುರಿಸಲು ಆಗುವುದೇ ಇಲ್ಲ ಎನ್ನುವ ಕಷ್ಟ ಯಾವುದೂ ಇರವುದಿಲ್ಲ. ಯಾವ ನೋವೂ ತಾತ್ಕಾಲಿಕ. ಸಂತೋಷ ಪಡುವುದು ನಮ್ಮ ಕೈಯಲ್ಲಿಯೇ ಇದೆ” ಹೀಗೆಲ್ಲಾ ಇನ್ನೂ ತರಹಾವರಿ ವಾಕ್ಯಗಳನ್ನು ಬಲು ಮಧುರವಾದ ದನಿಯಲ್ಲಿ ಹರಿಯಬಿಡುತ್ತೇನೆ ಟೇಬಲ್‍ನ ಈಚೆ ಬದಿಯಿಂದ ಎದುರು ಕುಳಿತವರಿಗೆ. ಒಮ್ಮೆ ಹೀಗೇ ಭಾರೀಭಾರೀ ತೂಕದ ಮಾತುಗಳನ್ನು ಆಡಿ ಬೀಗುತ್ತಿದ್ದೆ.  ಕೇಳಿಸಿಕೊಂಡ ಒಬ್ಬಾಕೆ “ ಮೇಡಮ್, ನಿಮಗೆ ಬರೀ ಹೇಳಕ್ಕೆ ಬರತ್ತೆ ಅಷ್ಟೆ. ನಿಮಗೂ ಒಂದ್ಸರ್ತಿ ಈ ರೀತಿಯ ಕಷ್ಟ ಬಂದ್ರೆ ಗೊತ್ತಾಗತ್ತೆ, ಎಷ್ಟ್ ನೋವು ಅಂತ” ಎಂದು ಪಟ್ ಅಂತ ಹೇಳಿ ಟಪಕ್ ಅಂತ ಎದ್ದು ಹೋಗಿದ್ದಳು.  ಆಕೆಯ ಕಷ್ಟ ಏನಿತ್ತು ಅಂದರೆ ೮-೧೦ ತಿಂಗಳಿಂದ ಒಂದಲ್ಲ ಒಂದು ಕಾರಣಕ್ಕೆ ತಾಯಿ ಮನೆಗೆ ಹೋಗಲು ಆಗಿರಲಿಲ್ಲ. ಅದೇ ನೆಪಕ್ಕೆ ಗಂಡ ಹೆಂಡತಿಯರ ನಡುವೆ ರಾತ್ರಿ ಜಗಳಗಳು. ಅವನಿಗೆ ಸಿಟ್ಟು ಇವಳಿಗೆ ಸಿಡುಕು. ಓಹೋ, ಎಷ್ಟು ಬಾಲಿಶ ಇದು. ಸ್ವಲ್ಪವೂ ಪ್ರೌಢಿಮೆ ಇಲ್ಲದವಳು. ಎಂತಹಾ ಹೆಂಗಸಪ್ಪ ಇವಳು. ಹೀಗೆಲ್ಲಾ ಅಂದುಕೊಂಡಿದ್ದೆ. ಪಾದಕ್ಕೆ ನೀರು ತಾಕಿದರೆ ಮಾತ್ರ ಕೈ ಗೋವಿಂದನ ಭಂಗಿಗೆ ಹೋಗೋದು ಅಂತ ತಿಮ್ಮಪ್ಪನ ಭಕ್ತರೊಬ್ಬರು ಹೇಳಿದ್ದನ್ನು ಅರ್ಥವಾಗಿಸಿದ್ದು ಹಾಗೂ ಈ ಮೇಲಿನಾಕೆಯ ಶಾಪ ತಟ್ಟಿಸಿದ್ದು ಕರೋನ ಎನ್ನುವ ಏಳು ಕೊಂಡಲ ವಾಡ! ಅಬ್ಬಾ! ಎಷ್ಟೆಲ್ಲಾ ಬದಲಾಗಿ ಹೋಯಿತು. ನನ್ನ ಕಾಲಿನ ಚಕ್ರ