Posts

Showing posts from April, 2020

ಬನ್ನಿ ಮನೆಗೆ ಹೋಗೋಣ. . . Lets Go Home !

Image
ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕಳಂತೆ

Prison visit

Image
ಸಂತಸಕ್ಕೊಂದು ಚಪ್ಪಾಳೆ ನೋವಿಗೆರಡು ಕಣ್ಣ ಹನಿ ಇಷ್ಟೇ ಸಾಮ್ಯ ಮನುಷ್ಯಧರ್ಮದಲ್ಲಿ...ಪ್ರತೀ ನೋವಿನ ಆಳ ಅಗಲ ಬಗೆ ಎಲ್ಲವೂ ಅದೆಷ್ಟು ಭಿನ್ನ! 29th April 2019 Central Prison,  Bengaluru  ಮತ್ತೊಮ್ಮೆ.

ಗ್ರಂಥಾಲಯ ಮತ್ತು ಮಕ್ಕಳ ಮನೋವಿಕಾಸ

Image

Quarantine ಮಕ್ಕಳ ಮನೋವಿಕಾಸ

Image
ಮಹಿಳಾ ಮತ್ತು ಮಕ್ಕಳ ಸಚಿವಾಲಯ, ಕರ್ನಾಟಕ ಸರ್ಕಾರ ಇವರ ಆದೇಶದ ಮೇರೆಗೆ, ಕೊರೋನ ಕಾರಣಕ್ಕಾಗಿ quarantine ನಲ್ಲಿ ಇರುವ ತಾಯ್ತಂದೆಯರ ಮಕ್ಕಳನ್ನು ಸಹ ಪ್ರತ್ಯೇಕವಾಗಿ ಇಡಬೇಕಿರುತ್ತದೆ. ಇಂತಹ ಮಕ್ಕಳಿಗೆ ಆಸ್ಪತ್ರೆಯಲ್ಲಿ ಮನೋರಂಜನೆಗಾಗಿ ಸಾಧನಗಳನ್ನು ಒದಗಿಸಿ ಕೊಡಬೇಕಾದ ಜವಾಬ್ದಾರಿಯನ್ನು ಅಸ್ತಿತ್ವ ನಿಭಾಯಿಸಿದ್ದು ಹೀಗೆ.
Image
ಅಸ್ತಿತ್ವ ಟ್ರಸ್ಟ್ ಮೂಲಕ ಇದು ಸಾಧ್ಯವಾಗಿಸಿದವರು ನೀವು. ಒಪ್ಪಿಸಿಕೊಳ್ಳಿ 🙏

ದೀಪಧಾರಿಣಿ Florance Nightingale

Image
ಮ್ಯೂಸಿಯಂ ಬಾಗಿಲು ಹಾಕಲು ಇನ್ನರ್ಧ ಗಂಟೆ ಮಾತ್ರ ಇತ್ತು. ದಡಬಡಗುಟ್ಟಿಕೊಂಡು ಹೋದೆ . ಪ್ರವೇಶ ದರ £೭ . ಸ್ವಾಗತಕಾರಿಣಿ ಅರ್ಧ ಗಂಟೆಕೋಸ್ಕರ ಪಷ್ಟು ದುಡ್ಡು ಕೊಡಬೇಡಿ ನಾಳೆ ಬನ್ನಿ ಎಂದಳು. ಉಹುಂ ನನಗೆ ನೋಡಲೇಬೇಕೆಂಬ ಹಠ ಬಂದಿತ್ತು. "ಇಲ್ಲಿಗೆ ಪ್ರವಾಸಿಗರು ಬರುವುದೇ ಇಲ್ಲ ಆದರೆ ನೀವು ಇಂಡಿಯಾ  ಅಷ್ಟು ದೂರದಿಂದ ಬಂದಿದ್ದೀರಿ ನಿಮಗಾಗಿ ಇನ್ನೂ ಅರ್ಧ ಗಂಟೆ ತೆರೆದಿರುತ್ತೀನಿ ಹೋಗಿ ನೋಡಿ" ಎಂದು ಟಿಕೆಟ್ ಹರಿದುಕೊಟ್ಟವಳ ಕೈಗೆ ಮುತ್ತಿಡುತ್ತಾ ಒಳ ಹೊಕ್ಕೆ. ಅಲ್ಲಿನ ಎಲ್ಲಾ ಮ್ಯೂಸಿಯಂಗಳಂತೆ ಇದನ್ನು ಬಲು ಒಪ್ಪವಾಗಿರಿಸಿದ್ದಾರೆ .ಆಕೆ ಹುಟ್ಟಿದಾಗಿನಿಂದ ಕೊನೆಯಾಗುವವರೆಗೂ ಮಾಡಿದ ಕೆಲಸ, ತೊಟ್ಟ ಬಟ್ಟೆ,  ಆಡಿದ ಮಾತು, ತೋರಿದ ಅಭಿರುಚಿ ಎಲ್ಲವನ್ನೂ ಲಭ್ಯತೆಗೆ ತಕ್ಕಂತೆ ಚಂದಗಾಣಿಸಿ ಇಟ್ಟಿದ್ದಾರೆ. ಈಕೆ ದೀಪಧಾರಿಣಿ ಫ್ಲೋರೆನ್ಸ್ ನೈಟಿಂಗೇಲ್ ಮಾತ್ರವಲ್ಲ ಕೈ ಬರಹದಲ್ಲೇ 200 ಪುಸ್ತಕ 1400 ಪತ್ರಗಳು ಅದೆಷ್ಟೋ ಕರಪತ್ರ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದಿರುವ ಸಾಹಿತಿಯೂ ಹೌದು ಎನ್ನುವ ಹೊಸ ವಿಷಯ ತಿಳಿದುಕೊಳ್ಳುತ್ತಾ, ನೋಡುತ್ತಾ, ಕ್ಯಾಮೆರಾದಲ್ಲೂ ಕಾಣುತ್ತಾ ಹೊರ ಬರುವಾಗ ಮನಸ್ಸಿನಲ್ಲಿ ನಿಂತದ್ದು ದಾದಿ ಫ್ಲೋರೆನ್ಸ್ ಳ ಈ ಮಾತು - "Now I know what it takes to love life !" ಇನ್ನೇನು ಹೊಸಿಲು ದಾಟುವವಳಿದ್ದೆ ಎನ್ನುವಾಗ ಹಿಂದಿನಿಂದ ಅಟ್ಟಿಸಿಕೊಂಡು ಬಂದ ಒಬ್ಬಾಕೆ ನನ್ನ ಕ್ಯಾಮೆರಾ ಕಡೆಗೆ ಕ

Law and Reproductive Health

Image
ಮೊನ್ನೆ FBಯಲ್ಲಿಯೇ ಓದಿದೆ, ಆಗತಾನೆ ಹುಟ್ಟಿದ ಹಸುಗೂಸನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಕಷ್ಟ ಪಟ್ಟ ತಾಯಿಗೆ ಯಾರೋ ಒಂದಷ್ಟು ಜನ ಬಹಳವೇ ಕಷ್ಟಪಟ್ಟು ಮನೆ ಸೇರಿಸಿದೆವು ಎನ್ನುತ್ತಾ ಆ ಕೂಸು ಮತ್ತು ಹಸಿ ಬಾಣಂತಿಯ ಫೋಟೊ ಸಮೇತ ಬರೆದುಕೊಂಡಿದ್ದನ್ನು. ಇವರು ಯಾಕೆ 1098 ಸಹಾಯವಾಣಿಗೆ ಕರೆಮಾಡಲಿಲ್ಲ ಎಂದುಕೊಂಡೆ. ಸಹಾಯ ಮಾಡಲು ಮುಂದಾಗುವ ಜನರ ಮೊದಲ ಗುಣಲಕ್ಷಣ ಸಂಘಟಿಸಿಕೊಳ್ಳುವುದು ಮತ್ತು  ಈಗಾಗಲೇ ಆ ನಿಟ್ಟಿನಲ್ಲಿ ಇರುವ ಸರ್ಕಾರಿ ಮತ್ತು ಸರ್ಕಾರೇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಸಂಪರ್ಕ ಇಟ್ಟುಕೊಳ್ಳುವುದು. ಇವುಗಳು ನಾನು ಕಲಿತಿರುವ ಪಾಠ. ನಾ ಕಲಿತದ್ದನ್ನು ಅಷ್ಟು ಸುಲಭಕ್ಕೆ ಬೇರೆಯವರಿಗೆ ಕೊಡೋಲ್ಲ, ಸ್ವಾರ್ಥಿ ಹಾಗಾಗಿ ಅವರಿಗೆ ಏನೂ ಹೇಳಲಿಲ್ಲ. 😆😆😆 ಈವರೆಗೆ ಹೇಳಿದ್ದು ವೈಯಕ್ತಿಕ, ಈಗ ಇನ್ನು ಮುಂದಿನದು ಸಾರ್ವಜನಿಕ ದಾಖಲೆಯಲ್ಲಿ ಇರುವ ವಿಷಯ: Reproductive Health ಎನ್ನುವುದು ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ರಲ್ಲಿ ನಮ್ಮ ಹಕ್ಕು. ಹಾಗೆಯೇ Universal Declaration of Human Rights, Convention For Elimination of all All Forms of Violence  Against Women and Child Rights Coventionಗಳ ಪ್ರಕಾರ ಗರ್ಭವತಿ ಮತ್ತು ಬಾಣಂತಿ ಮತ್ತು ಕೂಸುಗಳಿಗೆ ಆರೋಗ್ಯಕರ ವಾತಾವರಣ, ಪೌಷ್ಠಿಕಾಂಶ, ಚಿಕಿತ್ಸೆಯ ಹಕ್ಕುಗಳು ಇವೆ. ಇದರಲ್ಲಿ ಸಮಯ ಬಿದ್ದಾಗ ಅವರುಗಳನ್

ಆಪ್ತಸಮಾಲೋಚನೆ ಮತ್ತು Mental Helath

Image
ಆಪ್ತಸಮಾಲೋಚನೆ ಮಾಡುವುದು ಎಂದರೆ ಶಾರುಖ್ ಖಾನ್ ನ ಕೆನ್ನೆಯ ಗುಳಿಯಷ್ಟು ರೊಮ್ಯಾಂಟಿಕ್ ಅಲ್ಲ.... #DearZindagi  ಯೇ ಇಲ್ಲಿ ಕೇಳು..... ತಮ್ಮ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೋದವರನ್ನು 3-6 ತಿಂಗಳ course ಎಂದು ಹೇಳಿ ಅದಕ್ಕೆ ಒಂದು certificate ಕೊಟ್ಟು ಕಳುಹಿಸಿ, ಇನ್ನು ಮುಂದೆ ಅವರುಗಳು ಆಪ್ತ ಸಮಾಲೋಚನೆ ಮಾಡಬಹುದು ಎನ್ನುವ ನಾಯಿಕೊಡೆಗಳನ್ನು ಹುಟ್ಟಿಸುತ್ತಿರುತ್ತಾರೆ ಕೆಲವು ಸಂಸ್ಥೆಗಳು ಮತ್ತು ವೈದ್ಯರೂ. ಆದರೆ ಆಪ್ತಸಮಾಲೋಚನೆ ಸುಲಭ ಕ್ಷೇತ್ರ ವಲ್ಲ. ವರ್ಷಾನುಗಟ್ಟಲೆ ಅದೇ ವಿಷಯದಲ್ಲಿ ಅಧ್ಯಯನ ಮಾಡಿದವರೂ ಈ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಕೆಲಸ ಮಾಡುತ್ತಲೇ ಇದ್ದಾರೆ. ಚೆನ್ನಾಗಿ ಮಾತನಾಡುವವರು, ತಾಳ್ಮೆಯಿಂದ ಕೇಳಿಸಿಕೊಳ್ಳುವವರು, ಅಯ್ಯೋ ಪಾಪ ಎನ್ನುವವರು ಇವರೆಲ್ಲರೂ ಉದ್ಭವ ಮೂರ್ತಿಗಳಂತೆ ಆಪ್ತ ಸಮಾಲೋಚಕರು ಆಗಲು ಸಾಧ್ಯವಿಲ್ಲ. ಮುಖಾಮುಖಿ ಸಮಾಲೋಚನೆಗಿಂತ ಫೋನ್ ಮೂಲಕ online ಮೂಲಕ ಮಾಡಲು ಹೆಚ್ಚಿನ ಕಲಿಕೆ ಬೇಕಿರುತ್ತದೆ. *ಅದರಲ್ಲೂ ಮಕ್ಕಳಿಗೆ ಹದಿಹರೆಯದವರಿಗೆ ಆಪ್ತ ಸಮಾಲೋಚನೆ ಮಾಡಲು*  ಎಷ್ಟು ಅನುಭವ, ಜ್ಞಾನ ಇದ್ದರೂ ಕಡಿಮೆಯೇ. ಸಹಾಯ ಕೇಳುವವರು ಸಮಾಲೋಚಕರ ಮೇಲೆ ಮಾನಸಿಕವಾಗಿ ಎಷ್ಟರ ಮಟ್ಟಿಗೆ ಅವಲಂಬಿತ ಆಗಿರುತ್ತಾರೆ, ಅವರನ್ನು ನಮ್ಮ ಅಂತರಂಗದ ಹೊಸಿಲು ದಾಟದಂತೆ ಯಾವಾಗ ತಡೆಹಿಡಿಯಬೇಕು, ಅದರಿಂದ ಅವರ ಮೇಲೆ ಆಗುವ ಪರಿಣಾಮ ಏನು , ಅವುಗಳ ನಿಭಾವಣೆ ಹೇಗೆ ಎನ್ನುವ ಆರಿವು ಸಾಕಷ್ಟು ಅನುಭ