Posts

Showing posts from April, 2024

ನೂರು ಮಕ್ಕಳು ನೂರು ಪುಸ್ತಕ

Image
  " ನೂರು ಮಕ್ಕಳು ನೂರು ಪುಸ್ತಕ" ಈ ಯೋಜನೆಯ ಬಗ್ಗೆ ಬಹಳಷ್ಟು ಜನರು ಆಸಕ್ತಿ ತೋರಿಸಿ ಹೆಚ್ಚಿನ ವಿವರ ಕೇಳುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಆಭಾರಿ. 🙏  ನೂರು ಮಕ್ಕಳು ನೂರು ಪುಸ್ತಕ ನನ್ನ ಸಂಸ್ಥೆ ಅಸ್ತಿತ್ವ ಲೀಗಲ್ ಟ್ರಸ್ಟ್ ನ ಯೋಜನೆಯಾಗಿದ್ದು ಡಿಸೆಂಬರ್ 2024ರ ಒಳಗೆ ನೂರು ಸ್ಥಳಗಳಲ್ಲಿ ನೂರು ಮಕ್ಕಳ ಕೈಯಲ್ಲಿ ನೂರು ಪುಸ್ತಕಗಳನ್ನು ಕೊಡಬೇಕು ಎನ್ನುವ ಆಸೆ ಇದೆ. ಈಗಾಗಲೇ ಆರು ಸ್ಥಳಗಳಲ್ಲಿ ಸುಮಾರು ಸಾವಿರದ ಇನ್ನೂರು ಮಕ್ಕಳನ್ನು ಪುಸ್ತಕ ಹಿಡಿದುಕೊಂಡು ಓದುವಂತೆ ಮಾಡಲಾಗಿದೆ. ಈ ಯೋಜನೆಯಲ್ಲಿ ತಾವುಗಳು ಭಾಗಿಯಾಗಿ ಪುಸ್ತಕಗಳನ್ನು ಕೊಡಿಸುವುದಾದರೆ ಅಥವಾ ಹಣ ಸಹಾಯ ಮಾಡುವುದಾದರೆ astitvalegal@gmail.com ಇಲ್ಲಿಗೆ email ಮಾಡಿ ವಿವರಗಳನ್ನು ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತು ಪುಸ್ತಕಗಳನ್ನು ಕೊಡಿಸಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು 🙏😊 ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ' ಕೈಗೆ ಪುಸ್ತಕ ಕೊಡೋಣ, ಮಕ್ಕಳನ್ನು ಮನುಷ್ಯರನ್ನಾಗಿ ಮಾಡೋಣ ' 16- April -2024

My body my choice - ವಿಜಯಕರ್ನಾಟಕ

Image
  ಕಲಾರಾಧನೆಯ ಕಣ್ಣಿನಿಂದ, ಸೌಂದರ್ಯದ ಆಸ್ವಾದನೆಯ ಮನಸ್ಸಿನಿಂದ ನೋಡಿದಾಗ ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ತಯಾರು ಮಾಡಿದವರೇ ಸಾರ್ವಜನಿಕವಾಗಿ ಹೇಳಿಕೊಂಡಂತೆ 'ಈ ವಿಡಿಯೋ ಮೂಲಕ ಮಹಿಳೆಯರಿಗೆ ಆಯ್ಕೆಯ ಹಕ್ಕು ಇದೆ ಎಂದು ಸಮಾಜಕ್ಕೆ ತಿಳಿಸುವುದಷ್ಟೇ ನಮ್ಮ ಉದ್ದೇಶ' ಎನ್ನುವ ಮಾತೂ ಬಹಳ ಆಕರ್ಷಣೀಯವಾಗಿದೆ. ಹಲವು ಕಾರಣಗಳಿಗೆ ವಿಡಿಯೋ ಗಂಭೀರವಾಗಿ ಗಮನ ಸೆಳೆದಿದೆ. ದೀಪಿಕಾ ಪಡುಕೋಣೆಯ ಬಗ್ಗೆ ಯಂತೂ ಬೆರಳು ತೋರಲು ಆಗುವುದೇ ಇಲ್ಲ. But... ಉದ್ದೇಶವನ್ನು ಸಾರಲು ಬಳಸಿಕೊಂಡಿರುವ ಪದಗಳು ಮನಸ್ಸಿರುವ ಮನುಷ್ಯ ರನ್ನು ಒಂದಷ್ಟರಮಟ್ಟಿಗೆ ಗೊಂದಲಕ್ಕೀಡು ಮಾಡುವುದಂತೂ ನಿಜ.  SEX ಎನ್ನುವ ಸುಂದರ ಮೂರಕ್ಷರದ ಪದವು ಇಲ್ಲಿ ಬಳಕೆಯಾಗಿರದಿದ್ದರೆ ಬಹುಶಃ ಇದಕ್ಕೆ ಈ ಪರಿಯ ಪ್ರಚಾರವೂ ದಕ್ಕುತ್ತಿರಲಿಲ್ಲವೇನೋ. ಮದುವೆಗೆ ಮೊದಲಿನ ಲೈಂಗಿಕ ಸಂಬಂಧ, ಮದುವೆಯಾಚೆಗಿನ ಸೆಕ್ಸ್, ಹೆಣ್ಣು ಹೆಣ್ಣನ್ನೇ ಕಾಮಿಸುವುದು, ಬೇಕಾಬಿಟ್ಟಿ ಮೈ ಬೆಳೆಸುವುದು, ಮನಸೋಯಿಚ್ಛೆ ಬಟ್ಟೆಧರಿಸುವುದು, ಮದುವೆ ಬೇಕೋ ಬೇಡವೋ, ಹೊತ್ತುಗೊತ್ತಿಗೆ ಗೂಡು ಸೇರುವುದೋ ಬೇಡವೋ, ಪ್ರೀತಿ ಸ್ಥಾಯಿಯಾಗಿರಬೇಕೋ ಜಂಗಮವಾಗಬೇಕೋ, ಹೀಗೆ ಇನ್ನೂ ಏನೇನನ್ನೋ 99 ಹೆಂಗಸರು 'ನನ್ನ ಆಯ್ಕೆ' ಎಂದು ಖಚಿತ ಧ್ವನಿಯಲ್ಲಿ ಸಾರಿ ಹೇಳುವಾಗ, ನನಗಂತೂ ತಪ್ಪು ಎನಿಸಲಿಲ್ಲ, ನಿಜ. ಹೆಣ್ಣಿಗೂ ಆಯ್ಕೆ ಎನ್ನುವ ಹಕ್ಕು ಇದೆ ಮತ್ತು ಅದು ಇತರರಿಗೆ ಇರುವಷ್ಟೇ ಸಮಾನವಾಗಿದೆ. ಎನ್ನುವುದನ್ನ