Livin' Relationship in Census ಸುಧಾ ಪತ್ರಿಕೆ
ಜನಗಣತಿಯಲ್ಲಿ ಲಿವ್ ಇನ್ ಸಂಬಂಧವನ್ನು ವಿವಾಹದ ಸಂಬಂಧದಂತೆ ಪರಿಗಣಿಸಲಾಗುವುದು ಎನ್ನುವ ಸರ್ಕಾರದ ನಿರ್ಧಾರದ ಬಗ್ಗೆ ಸುಧಾ ವಾರಪತ್ರಿಕೆಯಲ್ಲಿ ಹೀಗೆ ಬರೆದಿದ್ದೆ. *********** ಗಣತಿ ಆರಂಭವಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಮೊದಲ ಹಂತ ನಂತರ ನಿಯೋಜಿತ ಅಧಿಕಾರಿಗಳ ಭೇಟಿಯಲ್ಲಿ ಎರಡನೆಯ ಹಾಗೂ ಕೊನೆಯ ಹಂತದ ಜನಗಣತಿ ನಡೆಯಲಿದೆ ಎಂದು ಸರ್ಕಾರ ಹೇಳಿಯಾಗಿದೆ. ಈ ಬಾರಿ ಮತ್ತೊಂದು ವಿಷಯಕ್ಕೆ ನಾಂದಿ ಹಾಕಿದೆ ಈ ಜನಗಣತಿ. ಲಿವಿನ್ ಸಂಬಂಧದಲ್ಲಿ ವಾಸಿಸುತ್ತಿರುವ ಜೋಡಿಯು ಜನಗಣತಿಯ ಅರ್ಜಿಯಲ್ಲಿ ತಮ್ಮ ಸ್ಥಾನಮಾನವನ್ನು ಮದುವೆಯಾದ ದಂಪತಿಗಳು ಎಂದು ಘೋಷಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇಂತಹ ಸಂಬಂಧವನ್ನು ಘೋಷಿಸುವಾಗ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯ ಇರುವುದಿಲ್ಲ ಎಂದೂ ಹೇಳಲಾಗಿದೆ. ವ್ಯಕ್ತಿಗಳ ಸಂಬಂಧಗಳ ಮಾದರಿಯ ಬಗ್ಗೆ ವಿವರ ಸಿಕ್ಕರೆ ಸಾಮಾಜಿಕ ಅಭಿವೃದ್ಧಿಯ ಕಾರ್ಯಕ್ರಮಗಳನ್ನು, ಯೋಜನೆಗಳನ್ನೂ ಸರ್ಕಾರ ರೂಪಿಸಲು ಅನುಕೂಲವಾಗುತ್ತದೆ ಮತ್ತು ಹೆಚ್ಚು ಕರಾರುವಕ್ಕಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ. ಹಾಗೆಯೇ ಮುಖ್ಯವಾಗಿ ಶಹರಗಳಲ್ಲಿ ಸಂಬಂಧಗಳ ಸ್ವರೂಪ ಬದಲಾಗುತ್ತಿರುವುದರ ವೇಗ ಮತ್ತು ಬಗೆಯನ್ನು ಸರ್ಕಾರ ಅರಿತುಕೊಂಡರೆ ಸಮಾಜದ ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದಂತೆ ಆಗುತ್ತದೆ ಎನ್ನುವುದು ಈ ಬಾರಿಯ ಜನಗಣತಿಯಲ್ಲಿ ಲಿವಿನ್ ಸಂಬಂಧವನ್ನು ಸೇರಿಸಿರುವ ಉದ್ದೇಶವಾಗಿದೆ. ಜನಗಣತಿಯ ಅರ್ಜಿಯಲ್ಲಿ Stable ಲಿ...