Posts

Showing posts from March, 2020

Obstructing a public servant is an offence

Image
ದೆಹಲಿಯಲ್ಲಿ ಮನೆ owner ಗಳು ತಮ್ಮ ಮನೆಯಲ್ಲಿ ಬಾಡಿಗೆ ಇರುವ ವೈದ್ಯರನ್ನು ಏಕಾಏಕಿ ಹೊರಹಾಕುತ್ತಿದ್ದಾರೆ. ಅದಕ್ಕೆ ದೆಹಲಿ ಸರ್ಕಾರ ಕೆಳಗಿನಂತೆ ಆದೇಶಿಸಿದೆ. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 186 ಮತ್ತು 353 ಪ್ರಕಾರ ಪೊಲೀಸ್, health officers, ವೈದ್ಯರು ಇವರುಗಳಿಗೆ ಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧ. ಜೈಲು ಶಿಕ್ಷೆಗೆ ಇರುತ್ತದೆ. ಜೀವಕ್ಕೆ ಬೆಲೆ ಕೊಡಬೇಕು ಎನ್ನುವ ಮನಸ್ಸು ಆಳಿದ ಮೇಲೆ, ಕಾನೂನನ್ನು ಗೌರವಿಸಬೇಕು ಎನ್ನುವ ನಾಗರೀಕತೆ ನಶಿಸಿ ಹೋದ ಮೇಲೆಯೇ ಕೊರೋನ ಹುಟ್ಟಿದ್ದು!
Image
ಮಹಿಳೆಯರ ಆಸ್ತಿ ಹಕ್ಕಿನ ಬಗ್ಗೆ ಹಿಂದೊಮ್ಮೆ... https://m.youtube.com/watch?v=wYIsBHEhaVs&feature=youtu.be https://m.youtube.com/watch?v=zuMNJmJZm6k&feature=youtu.be

ಗರ್ಭಾಶಯ ತೆಗೆಯುವುದು Removal of Uterus and Law

Image
ಅಂಗಾಂಗಗಳ ದಾನದ ಬಗ್ಗೆ ಇರುವ ಪ್ರತ್ಯೇಕ ಕಾನೂನಿನ ರೀತಿಯಲ್ಲಿ, ಗರ್ಭಕೋಶ ಅಥವಾ ಗರ್ಭಾಶಯವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ ೨೧, ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ರ ಅನ್ವಯ ತೀರ್ಮಾನಿಸಲಾಗತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ  ಈಗಾಗಲೇ ರೂಪಿಸಿರುವ ನಿಯಮಾವಳಿಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಲಾಗುತ್ತದೆ. ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೭೨ ಮತ್ತು ೧೯೭೫ ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ  ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ ಆದರೆ ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಾದಗ, ಕೇವಲ ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲು ಸಾಧ್ಯವೇ
Image
ನಿಮ್ಮ ಬಿಡುವಿನ ವೇಳೆಯಲ್ಲಿ ಕೇಳಿ, ಹೇಳಿ🙏 8th March 2020 ಸಾವಣ್ಣ ಪ್ರಕಾಶನದ ಏನೋ ಹೇಳುತ್ತಿದ್ದಾರೆ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಡಿದ ಮಾತುಗಳು    ಕೆಳಗಿನ Link ನಲ್ಲಿ ಇದೆ. https://youtu.be/Cg3_AUdaE0w
Image
11th April 2019 ಒಬ್ಬಳು ಹುಡುಗಿ. ಹದಿಹರೆಯ ಪ್ರೀತಿಯಲ್ಲಿ ಬಿದ್ದಳು. ಅವರಿಬ್ಬರೂ ಮದುವೆಯಾದರು. ಕೂಡಲೇ ಬಸುರಿಯಾದ ಹುಡುಗಿ ಪೊಲೀಸರ ಭಯದಿಂದ ಕಣ್ಣುತಪ್ಪಿಸುವ ಆಟದಲ್ಲಿ ಮತ್ತೊಂದು ರಾಜ್ಯದಲ್ಲಿ ಒಬ್ಬಳೇ ಬಂದು ನಿಂತಳು . 18 ವರ್ಷದ ಒಳಗಿನವಳು ತುಂಬು ಗರ್ಭಿಣಿ ಸರ್ಕಾರದ ಆಶ್ರಯಕ್ಕೆ ಬಂದಳು ಮಗುವಿಗೆ ಈಗ ಮೂರು ತಿಂಗಳು. ಇವಳನ್ನು ಹುಡುಕಿ ಪತ್ತೆ ಹಚ್ಚಿದ ಹುಡುಗ ಮತ್ತದೇ ಪೊಲೀಸ್ ಹೆದರಿಕೆಗೆ ಅವಳಿರುವಲ್ಲಿಗೆ ಬರುತ್ತಿಲ್ಲ. ಆದರೆ ಹುಡುಗಿ ಮತ್ತವರ ಮಗುವನ್ನು ಕರೆಯುತ್ತಿದ್ದಾನೆ. ಕಾನೂನಿನ ಪ್ರಕಾರ ಅವಳೀಗ ಈ ರಾಜ್ಯದ ಮಗಳು. 18 ತುಂಬದವಳನ್ನು ಅವಳ ರಾಜ್ಯದ ಮಗಳು ಮಾಡಬೇಕೆ ಹೊರತು ಸೊಸೆಯನ್ನಾಗಿಸಿ ಕಳುಹಿಸಿಕೊಡಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರದ ಕೆಲವು ನಿರ್ದಿಷ್ಟ  ಪ್ರಕ್ರಿಯೆ ಇದೆ ಮತ್ತು ಅದಕ್ಕೆ ನಿಗಧಿತ ಸಮಯವೂ ಇದೆ. ಹಾಗಾಗಿ ಕಾಯಲೇ ಬೇಕು. ಅಲ್ಲಿಯವರೆಗೂ ಆ ಮಗು ಮತ್ತದರ ಅಮ್ಮ ಕೌಟುಂಬಿಕ ಪರಿಸರದಿಂದ ವಂಚಿತರೇ. ಹಾಲ್ಕರೆಯ ತುಟಿಗಳ ಅ ಕೂಸಿನ ಎದುರು ಕುಳಿತು ಯೋಚಿಸುತ್ತೇನೆ “ನಿನ್ನ ಅಮ್ಮನಿಗೆ ಸ್ವಲ್ಪ ತಿಳುವಳಿಕೆ ಒಂದಿಷ್ಟು ಆತ್ಮವಿಶ್ವಾಸ ಇನ್ನೊಂದಿಷ್ಟು ಅಕ್ಷರ ಜ್ಞಾನ ಇದ್ದಿದ್ದರೆ ಕಂದ ನೀ ಕೂಡ ಸರಿಯಾದ ಸಮಯಕ್ಕೆ  ಭೂಮಿಗೆ ಬರುತ್ತಿದ್ದೆ ಮತ್ತು ಎತ್ತಾಡಿಸುವ ನಿನ್ನವರೊಡನೆಯೇ ಇರುತ್ತಿದ್ದೆ” ಎಂದು. ಗತ್ಯಂತರವಿಲ್ಲ ಮಗುವಿಗೆ ಮಗುವಾಗಿಯೇ ಉಳಿಯದೆ. ಆದರೆ ಮಗುವಿನ ಅಮ್ಮನಿಗೂ ಎಲ್ಲಾ ರೀತಿಯಿಂದಲೂ ಅಮ್ಮನಾಗುವ  ಸಾ
Image
ಸಂತಾನವನ್ನು ಹೊಂದುವುದು ಎಂದರೆ ನಮ್ಮದೇ ಅಂಡಾಣು ಮತ್ತು ವೀರ್ಯಾಣುವಿನ ನಿರಂತರತೆಯನ್ನು ಸ್ಧಾಪಿಸುವುದು ಎನ್ನುವ ಅರ್ಧವೇ? ಮಗು ಎಂದರೆ ವಂಶವೊಂದರ ಹಕ್ಕು ಸ್ಥಾಪಿಸುವ ವೇದಿಕೆಯಲ್ಲ. ಮಗು ಎಂದರೆ ನಮ್ಮ ರಕ್ತದ ಗುಂಪಿನ ಮೊಹರು ಹೊಡೆದುಕೊಂಡು  ಜಗತ್ತಿಗೆ ನಮ್ಮ ಇರುವಿಕೆಯನ್ನು ಸಾರಬೇಕಾದ ಅಂಚೆ ಪೆಟ್ಟಿಗೆಯಲ್ಲ.
Image
ಅವಳು ಈ ದಿನವೂ ಮನೆ ಕೆಲಸಕ್ಕೆ ಬರಲಿಲ್ಲ. "ಯಾವೊನ ಜೊತೆ ಆಡಕ್ಕೆ ಹೋಗಿದ್ದೆ?" "ಮಲಕೊಳಕ್ಕೆ ಹೋಗ್ತೀಯ" - ಇಂತಹ ಮಾತುಗಳು ಅವಳನ್ನು ರೇಜಿಗೆ  ಬೀಳಿಸುತ್ತವೆ. ವಾದ ಮಾಡ್ತಾಳೆ. ಜಗಳ ಆಡ್ತಾಳೆ. ಅವನು ಬಾಸುಂಡೆ ಬರುವ ಹಾಗೆ ಬಡೀತಾನೆ. ಇವಳು ರಕ್ತ ಒರೆಸಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಾ ಮೂಲೆ ಸೇರುತ್ತಾಳೆ. ಇದು ಆ ವೃತ್ತಿಯವರ ಬಗೆ ಮಾತ್ರವಲ್ಲ. ಹೆಂಗಸು ಲಾಯಾರ್ಗಳೂ ಗೋಳಿಡ್ತಾರೆ. ಕಾರ್ಪೊರೇಟ್ ವಲಯದ ಹೆಂಗಸರ ವಿಷಯ ಡೈವೋರ್ಸ್ ವರೆಗೂ ಹೋಗಿದೆ. ಬ್ಯಾಂಕ್ ಉದ್ಯೋಗಿಗಳು VRS ನಲ್ಲಿ ಕೊನೆಯಾಗಿಬಿಟ್ಟಿದ್ದಾರೆ. ಗಂಡಸರು ಯಾಕೆ ಹೀಗೆ ಎನ್ನುವುದಕ್ಕಿಂತ ನಾವ್ಯಾಕೆ ನಮ್ಮ charecter ಬಗ್ಗೆ ಅವರ validation ಬಯಸುತ್ತೇವೆ ಎನ್ನುವುದು ನನ್ನನ್ನು ಕಾಡುತ್ತೆ. "So Be It" ಎನ್ನುವವರೆಗೂ ನಮಗೆ ಉಳಿಗಾಲವಿಲ್ಲ. #FamilyCourtಕಲಿಕೆ
15th March 2019 ಗುಲ್ಜ಼ಾರ್‍ರ ಕವಿತೆಗಳನ್ನು ಓದುವುದೆಂದರೆ ಒಡೆದ ಕನ್ನಡಿಯ ಪ್ರತಿ ಚೂರಿನಲ್ಲೂ ನನ್ನದೇ ಪೂರ್ಣ ಬಿಂಬಗಳನ್ನು ನೋಡಿಕೊಂಡಂತಹ ಅನುಭವ. ಮೊನ್ನೆಯ ಓದಿನಲ್ಲಿ ಸಿಕ್ಕ ಸಾಲುಗಳು “ಎಂತಹ ಅಪರಿಚಿತ ಈ ಪರಿಚಯದಾಟ? ನೋವಿಗೂ ನೆರಳಿಗೂ ಇದ್ಯಾವ ಪರಿಯ ಕಣ್ಣುಮುಚ್ಚಾಲೆಯಾಟ” ಓದುತ್ತಿದ್ದಂತೆ ನನ್ನೊಳಗೂ ಹೊರಗೂ ಮೌನದ್ದೇ ಓಡಾಟ. ‘ಬಣ್ಣ ಶಕ್ತಿ ರುಚಿ’ ಮೂರು ಗುಣಗಳುಳ್ಳ ಚಹಾ ಎನ್ನುವ ತಲೆಬರಹ ಹೊತ್ತು ಬರುವ ಚಹಾದ ಜಾಹೀರಾತೊಂದು ನೆನಪಾಯ್ತು. ನಮಗೂ ಈ ಸಾಲಿಗೂ ಎಷ್ಟೊಂದು ಸಾಮ್ಯತೆ ಎನಿಸಿತು. ಈ ಜಗತ್ತಿನ ಪ್ರತೀ ಹೆಣ್ಣು ದೇಹವೂ ಈ ಮೂರು ಗುಣಗಳನ್ನು ಹೊತ್ತು ತಂದರೂ ತಮ್ಮತಮ್ಮಲ್ಲೇ ವಿಭಿನ್ನವಾಗಿ ನಿಲ್ಲುವ ಸೄಷ್ಟಿಯ ಸೋಜಿಗವೇ ಸರಿ. ಕೋಟ್ಯಾಂತರ ಸಂಖ್ಯೆಯಲ್ಲಿ ಭೂಮಂಡಲದ ಉದ್ದಗಲಕ್ಕೂ ಹಂಚಿಹೋಗಿದ್ದರೂ ಯಾರದ್ದೋ ಖುಷಿಯ ಒಂದು ನಗು ನಮ್ಮ ಮನಸ್ಸಿನಲ್ಲಿ ಅರಳುತ್ತೆ. ಮತ್ತ್ಯಾರದ್ದೋ ದೇಹಕ್ಕಾದ ಒಂದು ಗಾಯ ನಮ್ಮ ಮನಸ್ಸನ್ನು ಘಾಸಿಗೊಳಿಸುತ್ತೆ. ನಾವೆಲ್ಲರು ಅಪರಿಚಿತರು ಆದರೂ ಎಷ್ಟೊಂದು ಪರಿಚಿತರು ಎನ್ನಿಸುವ ಹೊತ್ತಿನಲ್ಲೇ ಒಂದಷ್ಟು ಅಪರಿಚಿತ ಹೆಂಗಸರ ಪಾಡು ನೆನಪಾಯ್ತು. ಅವಳಿಗೆ ಮೂವತ್ತಾಗಿದೆ. ಸಾಫ್ಟ್‍ವೇರ್ ತಂತ್ರಜ್ಞೆ. ಹೊತ್ತುಗೊತ್ತಿಲ್ಲದ ಕೆಲಸ. ಕಣ್ಣಿಗೆ ರಾಚುತ್ತಿರುವ ಆಕಾಂಕ್ಷೆ-ಗುರಿ, ಆದರೆ ಬಸಿರಾಗಬೇಕೆನ್ನುವ ಬಯಕೆ. ಸಂಸಾರವೋ? ಉದ್ಯೋಗವೋ? ಯಾವುದನ್ನು ಹೇಗೆ ಆಯ್ಕೆ ಮಾಡುವುದು ಎನ್ನುವ ಗೊಂದಲದಲ್ಲಿದ್ದಾಳೆ. ದಿನ ಕಳೆ
Image
ಕೊಂಡಿ ಕಳಚುವ ಮುನ್ನ.... ಅವಳು ಹಾಡುತ್ತಿದ್ದದ್ದು ಶುದ್ಧ ದೈವತವೇನು ಶೃತಿ ಪೆಟ್ಟಿಗೆ ಎಲ್ಲಿ ವೇದಿಕೆಯ ಮೇಲೆ ಓಹ್ ಇವಳು ತಂಬೂರಿ ಮೀಟಿದವಳಲ್ಲವೆ.... ಕೆಂಪಂಚಿನ ಸೀರೆಯಾಕೆ ದಿನಪತ್ರಿಕೆ ಓದಿದವರಂತೆ ಇವಳೇ ಅಲ್ಲವೇ ತಂಗಿ - ತಂಗೀ ಎಂದವಳು ಕಾಲು ಚಾಚದೆಯೇ ಅಕ್ಕನಾದವಳು..... ಮಡಿ ಹೆಂಗಸಿನ ಮನೆಯ ಸೊಸೆಯಾದವಳು ವರಳು ಕಲ್ಲಿನಲಿ ಗರಿ ದೋಸೆಯ ಹದ ಕಲಿತವಳು ಈಗ ಯಾರ ಮಾತೂ ಕೇಳದ ಬೀಗಿತ್ತಿಯ ಹಠದವಳು.... ಮುತ್ತೈದೆ ಸಾವಾಗಲಿ ಸಾಲಲ್ಲಿ ಗಂಡುಗಳ ಹೆರಲಿ ಅಲ್ಲುರಿಯುತ್ತಿರುವ ದೀಪಕ್ಕೆ ಮತ್ತೊಬ್ಬಳು ಹೂಬತ್ತಿ  ಹೊಸೆಯುತಿರಲಿ.... ಚಿತ್ರಮಂದಿರ ಭರ್ತಿಯಾಗಿದೆ ಬೋರ್ಡು ಸಿಕ್ಕಿಸಿಯಾರು ಧಾವಂತದಲ್ಲೇ ಸರತಿಯಲಿ ನಿಲ್ಲುವರು ಬರಿದಾದವರು ಸಿನೆಮಾ ನೂರು ದಿನ ಓಡಿಸುತ್ತಾರೇನು ಅವರು... ಮೈಭರ್ತಿ ಹೂವು ಹೊದ್ದವಳ ನೆತ್ತಿಯಲಿ ಬಿಳಿಕೂದಲ ಮುಷ್ಕರ ಇಂದು ಸದ್ದು - ಮೌನ ಇಬ್ಬರಿಗೂ  ಸಂಬಂಧಿಯಲ್ಲ ಅವಳಿಂದು.... ಅವಳು...ಅವಳು  ಸೋದರತ್ತೆ ಹೇಳುತ್ತಿದ್ದಾಳೆ ಕೊಂಡಿ ಕಳಚುವ ಮುನ್ನ ಕೊಂಚ ಮಾತಾಡಿ ಪ್ಲೀಸ್ ! #ಸೋದರತ್ತೆಏನೋಹೇಳುತ್ತಿದ್ದಾಳೆ 07 ಜನವರಿ 2020 10.20 ರಾತ್ರಿ Photo Taken at Athens, Greece
Image
ಇಂದಿನ ಆಂದೋಲನ ಪತ್ರಿಕೆಯಲ್ಲಿ .... 17th November  2019 #UNCRC30 ಗುಬ್ಬಚ್ಚಿ ದೇಹದ ಒಂಭತ್ತರ ಹರೆಯದ ಅವಳು ನನ್ನ ಮುಂದೆ ಕುಳಿತಾಗ ಆತಂಕದ ಮುಖದಲ್ಲಿ ಸಣ್ಣಗೆ ಅಳುತ್ತಿದ್ದಳು, ಭಯದಿಂದ ಸ್ವಲ್ಪವೇ ನಡುಗುತ್ತಿದ್ದಳು. ಏನಾಯ್ತು ಮಗು ಎನ್ನುತ್ತಾ  ಅವಳ ಹತ್ತಿರ ಹೋದಾಗ ಅವಳ ಉಸಿರು ನಿಲ್ಲುತ್ತದೆಯೇನೋ ಎನ್ನಿಸಿತು. ಅದು ಆ ದಿನದ ಮೊದಲ ಕೇಸ್. ಮಕ್ಕಳ ಸಹಾಯವಾಣಿಯವರು ತಮಗೆ ಬಂದ ಕರೆಯನ್ನು ಆಧರಿಸಿ ಯಾರದ್ದೋ ಮನೆಯಲ್ಲಿ ಮನೆಗೆಲಸಕ್ಕೆ ಇದ್ದ ಸಲ್ಮಾಳನ್ನು ರಕ್ಷಿಸಿ ಹೀಗೆ ಇಲ್ಲಿ ಕರೆತಂದಿದ್ದರು. ಅವಳ ಕತ್ತು ಹಣೆಯ ಮೇಲೆ ಬಾಯ್ದೆರೆದು ನಿಂತ್ತಿದ್ದ ಗಾಯಗಳಲ್ಲಿ ನನ್ನ ರಕ್ತ ಕುದಿಯುತಿತ್ತು. ಬಾಲ ಕಾರ್ಮಿಕ ನಿಷೇಧ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲು ವೈದ್ಯಕೀಯ ಪರೀಕ್ಷೆ ಮಾಡಿಸಬೇಕಿತ್ತು. ಸಲ್ಮಾಳನ್ನು ಸಮಾಧಾನ ಪಡಿಸಿ ವೈದ್ಯರ ಬಳಿ ಕಳುಹಿಸಿದ್ದಾಯ್ತು. ಹತ್ತೇ ನಿಮಿಷದಲ್ಲಿ ಮೊಬೈಲ್ ರಿಂಗುಣಿಸಿತು. ಅತ್ತ ಕಡೆಯಿಂದ ಡಾಕ್ಟರ್ ’ಏನು ಮೇಡಮ್ ಇದು, ಯಾವ ರಾಕ್ಷಸರ ಮನೆಯಲ್ಲಿ ಇತ್ತು ಈ ಮಗು? ಛೇ, ನನಗೇ ತಡೆದುಕೊಳ್ಳಲು ಆಗುತ್ತಿಲ್ಲ” ಎಂದು ಖಿನ್ನರಾಗಿದ್ದರು. “ನಮ್ಮ ವೃತ್ತಿಯಲ್ಲಿ ಇದೆಲ್ಲಾ ಸಾಮಾನ್ಯ ಅಲ್ಲ್ವಾ ಡಾಕ್ಟರ್, ಏನು ಮಾಡೋದು ಹೇಳಿ. ನೀವೊಂದು ರೆಪೋರ್ಟ್ ಮಾಡಿಕೊಟ್ಟರೆ ಈಗಲೇ FIR ಹಾಕಿಸಲಾಗುತ್ತೆ ’ ಎಂದೆ. ಅದಕ್ಕಾತ “ ಬರೀ ಕಂಪ್ಲೇಂಟ್ ಅಲ್ಲ ಮೇಡಮ್ ಅವರನ್ನು ನೇರವಾಗಿ ನೇಣುಗಂಭಕ್ಕೇ ಹಾಕಬೇಕು “ ಎಂದು ಉದ್ವ
Image
ಇವತ್ತು ಆಂದೋಲನ ಪತ್ರಿಕೆಯಲ್ಲಿ ...... ಜಗದಾಂಬ ನನ್ನಲ್ಲಿಗೆ ಬರಲಾರಂಭಿಸಿ ಮೂರು ವರ್ಷವಾಗಿತ್ತು.  ಸುಭದ್ರ ಸರ್ಕಾರಿ ಕೆಲಸ, ಬದುಕಲು ಬೇಕಾದಷ್ಟು ವಿದ್ಯ್, ಅನುಮಾನದ ಮನಸ್ಸುಗಳನ್ನು ಕಾಡಲಾರದ ವಯಸ್ಸು. ಲಕ್ಷಣವಾದಾಕೆ. ಅವಳಿಗೊಬ್ಬ ಗಂಡ. ವಕೀಲ. ಎಂಟು ಗಂಡಂದಿರು ಅಷ್ಟಪತ್ನಿಯರನ್ನು ಹಿಂಸಿಸುವಷ್ಟು ಇವನೊಬ್ಬನೇ ಅವಳನ್ನು ಕಾಡಿ ಪೀಡಿಸಿದ್ದಾನೆ. ಆಕೆ ಕಚೇರಿಯಿಂದ ಸಾಲ ಪಡೆದು ತೆಗೆದುಕೊಂಡ ಸೈಟು ಅದರಲ್ಲಿ ಕಟ್ಟಿದ ಮನೆ. ಅಲ್ಲೇ ವಾಸ. ಅವನು ರಾತ್ರೊರಾತ್ರಿ ಬೀರುವಿನಿಂದ ಮನೆಯ ದಾಖಲೆ ಪತ್ರಗಳನ್ನು ಲಪಟಾಯಿಸಿಕೊಂಡು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಮಾರಾಟ ಮಾಡಲು ಗಿರಾಕಿಯನ್ನು ಕರೆತಂದಾಗ ಈಕೆ ನನ್ನಲ್ಲಿಗೆ ಓಡಿ ಬಂದಳು. ಅದೊಂದು ದಿನ ಅವಳು ಬಂದಾಗ ಕೊರಳು, ಬೆನ್ನು, ಕೈ ಮೇಲೆಲ್ಲಾ ಯಾವ ಬ್ರಾಂಡಿನ ಸಿಗರೇಟು ಅಂತಲೂ ಹೇಳಬಹುದಾದಷ್ಟು ಕಿಡಿ ಗುರುತುಗಳು! ಅವಳ ಮುಖದಲ್ಲಿ ಸ್ವಲ್ಪವೂ ನೋವಿಲ್ಲ. ಇನ್ನೊಂದು ದಿನ ಇವಳಿಂದಲೇ ಅಲಂಕರಿಸಿಕೊಂಡ  ಮಂಚಕ್ಕೆ ಲಲನೆಯೊಡನೆ ಲಗ್ಗೆ ಇಟ್ಟಾಗ ಇವಳೇ ಕೋಣೆಯ  ಕದವಿರಿಸಿ  ಬಂದಿದ್ದಳು.  ನನ್ನ ಬಳಿ ಹೇಳುವಾಗ ಅವಳ ಧ್ವನಿಯಲ್ಲಿ ಯಾವ ಏರಿಳಿತವೂ ಕಾಣದು. ಅವನು ಕುಡಿದ ಅಮಲಿನಲ್ಲಿ ಎಲುಬಿಲ್ಲದ ನಾಲಿಗೆ ಹರಿಬಿಡುವಾಗ ಅಕ್ಕಪಕ್ಕದ ಮನೆಗಳ ಕಿಟಕಿ ತೆರೆ ಸರಿಯುವುದೇ ಇವಳಿಗೆ ಮಾನಭಂಗ. ಅದಕ್ಕೆ ನಾಗರಭಾವಿಗಿಂತಲೂ ಆಳವಾದ, ಜನ ಮುಟ್ಟದ ಏರಿಯಾದಲ್ಲಿ ಮನೆಮಾಡಿಕೊಂಡು ಅಲ್ಲಿಗೆ ವಾಸದ ಎತ್ತಂಗಡಿ ಇಬ್ಬರದ್ದೂ.
Image
Juvenile Justice Act ಮತ್ತು Rules ಅಡಿಯಲ್ಲಿ ಮಕ್ಕಳ ಅನುಸರಣ ಸಂಸ್ಥೆಗಳ ಪಾತ್ರ ಮತ್ತು ಜವಾಬ್ದಾರಿ ಏನು ಎನ್ನುವುದರ ಬಗ್ಗೆ ವಿವಿಧ ರಾಜ್ಯಗಳಿಂದ ಬಂದಿದ್ದ ಅಧಿಕಾರಿಗಳಿಗೆ ತಿಳಿದದ್ದು ಹೇಳಿ ಬಂದೆ. At NIPCCD, ಬೆಂಗಳೂರು 11 ಮಾರ್ಚ್ 2020

Dalai Lama a droplet of divinity!

Image
25/Oct/2015 ಊರಲೆಲ್ಲಾ ಬೊಂಬೆ ಹಬ್ಬದ ಸಡಗರ ಶುರುವಿಟ್ಟಿತ್ತು.  ಲಕ್ಷಣವಾಗಿ ಮೆಟ್ಟಿಲು ಮೆಟ್ಟಿಲಾಗಿ ಬೊಂಬೆಗಳನ್ನು ಕೂರಿಸಿ, ಕಲಶವಿಟ್ಟು ಸಂಭ್ರಮಿಸದೆ ‘ ನಿನ್ನ ಕೈಲಾಡೋ ಬೊಂಬೆ ನಾನಯ್ಯ. . .ತಾನೋ ತಂದಾನೋ ತಾನೊ. . .’ ಅಂತ ಊರು ಸುತ್ತಲು ಹೊರಟವಳನ್ನು ಈ ಬಾರಿ ಸ್ವಾಗತಿಸಿದ್ದು ಹಿಮಾಚಲಪ್ರದೇಶದಲ್ಲಿ ಇರುವ ಧರ್ಮಶಾಲ ಎನ್ನುವ ಪುಟ್ಟ ಗಿರಿಧಾಮ. ಇಲ್ಲಿನ ಜನ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನ್ನುವ ಕನಕೋಕ್ತಿಯನ್ನು ಅಕ್ಷರಶಃ ಬದುಕುತ್ತಿದ್ದಾರೆ. ನಾಳಿನ ಬಗ್ಗೆ ಆತಂಕ, ಹಿಂದಿನವನೊಡನೆ ಜಂಜಾಟ, ಮುಂದಿನವನೊಡನೆ ಕಾದಾಟ, ಏಣಿಯೇರುವ ಆಕಾಂಕ್ಷೆಗಳ ಭರಾಟೆ ಏನೊಂದೂ ಕಂಡುಬಾರದ ಇಲ್ಲಿನ ಜನರೊಳಗಿನ ಶಾಂತಿಯನ್ನು ಆಸ್ವಾದಿಸುತ್ತಲೇ ಒಂದು ಹದಿನೈದು ಕಿಲೋಮೀಟರ್ಗಳಷ್ಟು ಬೆಟ್ಟ ಹತ್ತಿ, ಕಣಿವೆಯೊಳಗೆ ತೂರಿ, ಹಸಿರು ಪ್ರಪಾತವನ್ನು ಕಂಡು ಪುಂಗಿ ನಾದದಂತೆ ಬಾಗಿದರೆ, ಹಾವಿನಂತೆ ಹೊರಳಿ ಬಿಟ್ಟರೆ ಸಿಗುತ್ತೆ ಮೆಕ್ಲಿಯಾಡ್ ಗಂಜ್ ಎನ್ನುವ ಪ್ರಶಾಂತಿ ಧಾಮ. ಅಲ್ಲಿಯೇ ಇದೆ ‘ನ್ಯಾಂಗಲ್ ಬೌದ್ಧ ಮಂದಿರ’. ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದಲೈ ಲ