Posts

Showing posts from May, 2020

ಮಕ್ಕಳ ಅನುಸರಣಾ ಸಂಸ್ಥೆಗಳು ಮತ್ತು ಮಕ್ಕಳ Family Rights ಹಾಗೂ. . .

Image
ಮ್ಕಕಳ ಅನುಸರಣಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಸುಧಾರಣೆಗಳು ಎಲ್ಲರಿಗೂ ನಮಸ್ಕಾರ! ನೀನಾ ನಾಯಕ್  ಮೇಡಮ್ ಅವರು ಹೇಳಿದಂತೆ ಬದುಕನ್ನು ಕಟ್ಟಕಡೆಯ ಮಗುವಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ನಾವುಗಳು ಈ ಕೆಲಸ ಮಾಡುವುದರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಲಕಿಯರಿಗಾಗಿ ಇರುವ ಮಕ್ಕಳ ಕಲ್ಯಾಣ ಸಮಿತಿಯ, ಅಂದರೆ ನನ್ನ ಸಮಿತಿಯ ಸದಸ್ಯರುಗಳಾದ ಆಶಿಕಾ ಶೆಟ್ಟಿ, ಬಿಂದಿಯಾ ಶಾಜಿಥ್, ಸರಿತಾ ವಾಜ಼, ಲಕ್ಷ್ಮೀಪ್ರಸನ್ನ ಇವರುಗಳ 24 ಗಂಟೆಗಳೂ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ಅವರುಗಳನ್ನು ಅಭಿನಂದಿಸುತ್ತೇನೆ. ನಾವುಗಳು ಎರಡ ದಿನಕ್ಕೊಮ್ಮೆ ಡಿಸಿಪಿಓ ಅವರೊಡನೆ, ಪಿಓಗಳೊಡನೆ ಹಾಗೂ ಸುಪರಿಡೆಂಟ್ ಅವರುಗಳೊಡನೆ ಪರಿಶೀಲಾನ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಈಗ ನಾನು ಮಾತನಾಡಲಿರುವ ವಿಷಯ ಮಕ್ಕಳ ಅನುಸರಣಾ ಸಂಸ್ಥೆಗಳ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಬದಲಾವಣೆಗಳು. ಮಕ್ಕಳ ವಿಷಯದಲ್ಲಿ ಯಾವ ವರ್ತಮಾನವೂ ಅಮುಖ್ಯವಲ್ಲ. ಹಾಗೆಯೇ ಯಾವ ಬದಲಾವಣೆಯೂ ಕೊನೆಯೂ ಅಲ್ಲ. ಮನುಷ್ಯನ ಮೂಲಭೂತ ಗುಣಲಕ್ಷಣಗಳು ಹಾಗೆಯೇ ಉಳಿದಿದ್ದರೂ ಜಾಗತೀಕರಣದ ಪ್ರಭಾವದಿಂದಾಗಿ, ಸಿಗುತ್ತಿರುವ ಎಕ್ಸ್ಪೋಷರ್ ನಿಂದಾಗಿ ಮಕ್ಕಳು ಬದಲಾಗುತ್ತಿದ್ದಾರೆ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಾವುಗಳು ಬೆಳೆಯದಿದ್ದರೆ ಮಕ್ಕಳ ಹಕ್ಕುಗಳ ರಚನೆಯ ಆಶಯವನ್ನೇ ಬುಡಮೇಲು ಮಾಡಿದಂತೆ ಆಗುತ್ತದೆ. ಅದಕ್ಕೇ ರಾಜ್ಯದ

ಮಕ್ಕಳು ಕಳೆದು ಹೋಗದಿರಲಿ

Image
ಇವತ್ತು ಕಳೆದುಹೋದ ಮಕ್ಕಳ ದಿನ. ಒಂದು ಸಂಜೆ ಮರೀನ್ ಡ್ರೈವ್ ನಲ್ಲಿ ಸುಮ್ಮನೆ ನಡೆಯುತ್ತಿದ್ದೆ....ಎದುರಿಂದ ೪-೫ ವರ್ಷದ ಮುದ್ದು ಮುದ್ದು ಮಗು ಅಳುತ್ತಾ ಬರ್ತಿತ್ತು. ಕೂಡಲೇ ಒಳಗಿನ ಅಮ್ಮನಿಗೆ ಅದು ತಪ್ಪಿಸಿಕೊಂಡಿದೆ ಅಂತ ಗೊತ್ತಾಯ್ತು. ಹತ್ತಿರ ಹೋಗಿ ಮಾತನಾಡಿಸಿ ಅಲ್ಲಿಯೇ  ಇದ್ದ ಪೊಲೀಸ್ ಗೆ ಹೇಳಿದೆ....ಆತ  ಸಮಾಧಾನ ಮಾಡಿ ಮಗು ಬರುತ್ತಿದ್ದ ವಿರುದ್ದ ದಿಕ್ಕಿಗೆ ಕರೆದುಕೊಂಡು ಹೊರಟ. "ಮುಂದೇನು ಮಾಡ್ತೀರಾ ? ನಾನು ನಿಮ್ಮ ಜೊತೆ ಬರ್ತೀನಿ" ಅಂದೆ. "ತೊಂದರೆ ಇಲ್ಲ ಮೇಡಂ. ಸಾಧಾರಣವಾಗಿ ತಪ್ಪಿಸಿಕೊಂಡ ಮಕ್ಕಳು ವಿರುದ್ಧ ದಿಕ್ಕಿಗೆ ಹೋಗ್ತಾರೆ. ಅಪ್ಪ ಅಮ್ಮ ಆ ಕಡೆ ಇರ್ತಾರೆ. ನಾ ಹುಡುಕಿ ಮಗೂನಾ ತಲುಪಿಸ್ತೀನಿ" ಎಂದ. ಅಲೆಗಳು ಏಳುತ್ತಿದ್ದವು....ನಾ ದಡದಂತೆ ಸುಮ್ಮನೆ ನಿಂತಿದ್ದೆ... "ತಪ್ಪಿಸಿಕೊಂಡ ಮಕ್ಕಳು ವಿರುದ್ಧ ದಿಕ್ಕಿಗೆ ಹೋಗ್ತಾರೆ" ಎನ್ನುವ ಆತನ ಮಾತಿನ ಮರಳು ಉಪ್ಪು ಹೊತ್ತು ಗಾಳಿಯಾಗುತ್ತಿತ್ತು ! ಆ ಮಗುವಿನ ಬೆನ್ನ ಹಿಂದೆಯೇ ಹೋದವಳ ಕಣ್ಣೆದುರೇ ಮಗು ಮನೆ ಸೇರಿತ್ತು. ಅದೆಷ್ಟು ನಿಜ!  ಕುಟುಂಬದವರಿಂದ ದೂರಾದ ಮಕ್ಕಳು, ಮೂಲಭೂತ ಮಾನವ ಹಕ್ಕುಗಳ ಕಣ್ಣಿನಿಂದ ಮರೆಯಾದ ಮಕ್ಕಳು , ಒಂದು  ಒಂದು ಮುಷ್ಠಿ ಪ್ರೀತಿ, ಒಂದು ಹಿಡಿ ಮಾರ್ಗದರ್ಶನ ಸಿಗದ ಮಕ್ಕಳು,   ಎಂದಿಗೂ ಸಮಾಜದ ಮುಖ್ಯವಾಹಿನಿಗೆ ವಿರುದ್ಧ ದಿಕ್ಕಿನಲ್ಲಿಯೇ ಬದುಕುತ್ತಿರುತ್ತಾರೆ. ನಮ್ಮ ಬೇಜವಾಬ್ದಾರಿ, ಹೀನಸುಳಿಗಳಲ್ಲ

ಗರ್ಭಕೋಶ ಮತ್ತು ಕಾನೂನು

Image
ಅಂಗಾಂಗಗಳ ದಾನದ ಬಗ್ಗೆ ಇರುವ ಪ್ರತ್ಯೇಕ ಕಾನೂನಿನ ರೀತಿಯಲ್ಲಿ, ಗರ್ಭಕೋಶ ಅಥವಾ ಗರ್ಭಾಶಯವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ ೨೧, ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ರ ಅನ್ವಯ ತೀರ್ಮಾನಿಸಲಾಗತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ  ಈಗಾಗಲೇ ರೂಪಿಸಿರುವ ನಿಯಮಾವಳಿಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಲಾಗುತ್ತದೆ. ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೭೨ ಮತ್ತು ೧೯೭೫ ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ  ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ ಆದರೆ ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಾದಗ, ಕೇವಲ ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲು ಸಾಧ್ಯವೇ

ಹೊಸ ಕಲಿಕೆ ಬದುಕಿನ Renewal!

Image
 Very satisfying to complete  7 weeks certificate course from The University of Geneva in CHILDREN'S HUMAN RIGHTS with 89.20% 😊

ಆತ್ಮನಿರ್ಭರಭಾರತ ಮತ್ತು Child Rights

Image
Lockdown ಸಂದರ್ಭ, ಕರೊನ ಕಾರಣ- ನಮ್ಮೊಳಗಿರುವ ಸಮಾಜಸೇವಕ ಜಾಗೃತ ಗೊಂಡಿದ್ದಾನೆ. ಊಟದ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಯಾರಿಗೆ ಅಂದರೆ ಅವರಿಗೆ ಹಂಚಿಹಂಚಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿಕೊಂಡು ದೇಶದ ಕರುಳುಕಿತ್ತು ಬರಿಸುತ್ತಿದ್ದೇವೆ. ಉಸಿರು ಉಳಿಯಲು ಮಾತ್ರ ತಿಂದರೆ ಬಸುರಿ, ಬಾಣಂತಿ ಮತ್ತು ಬೆಳೆಯುವ ಮಕ್ಕಳಿಗೆ ಸಾಕೇ? ಅವರುಗಳಿಗೆ ಪೌಷ್ಟಿಕತೆ ನೀಡದಿದ್ದರೆ ಭವಿಷ್ಯ ಭದ್ರವಾಗಲು ಸಾಧ್ಯವೇ? ಊಟ ಕೊಡೋದು ಸೇವೆ ಎಂದುಕೊಂಡು ಬೀಗೋಣ ಆದರೆ ಅವರುಗಳಿಗೆ ಪೌಷ್ಟಿಕಾಂಶ ನೀಡುವುದು ನಮ್ಮ 'ದೇಶಭಕ್ತಿ' ಎಂದುಕೊಂಡು ಜವಾಬ್ದಾರಿ ಹೊರೋಣ. ದುರ್ಬಲ ಮಕ್ಕಳಿಂದ #ಆತ್ಮನಿರ್ಭರಭಾರತ  ಸಾಧ್ಯವಿಲ್ಲ. "ಇಸ್ಕೂಲು ಮುಚ್ಚೈತೆ , ನಂಗ್ ದುಡಿಮೆ ಇಲ್ಲ ನಡೀ ನೀ ಕೆಲ್ಸಕ್ಕೆ" ಅಥವಾ "ನಿಂಗೆ ಮದ್ವೆ ಮಾಡ್ಬುಡ್ತೀನಿ" ಎನ್ನುವ ಪೋಷಕರ ಮನೋಸ್ಥಿತಿಯನ್ನು, ಅವರುಗಳ ಪರಿಸ್ಥಿತಿಯನ್ನು ಬದಲು ಮಾಡುವ ಕಡೆಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳುವ ವರೆಗೂ ಸಾಧ್ಯವಿಲ್ಲ #ಆತ್ಮನಿರ್ಭರಭಾರತ ಎರಡು ತಿಂಗಳಿಂದ ಪಿಂಚಣಿ/ಮಾಸಾಶನ ಬಾರದೆ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ತಿಳಿದು ಬಂದದ್ದು - ಸಧ್ಯಕ್ಕೆ ಪಿಂಚಣಿ ನೀಡಬಾರದು ಎನ್ನುವ ಸರ್ಕಾರೀ ಸುತ್ತೋಲೆ ಇದೆ ಎಂದು. ಹೀಗೆ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಸರ್ಕಾರ ನೀಡುತ್ತಿರುವ ಹಣಕಾಸು ಬೆಂಬಲವನ್ನು ಏಕಾಏಕಿ ನಿಲ್ಲಿಸಿ ಬಿಟ್

Child labour part-1

Image
ಆರೂವರೆ ನಿಮಿಷಗಳ ಅನುಭವ ಹಂಚಿಕೆಯಿಂದ ಬಾಲಕಾರ್ಮಿಕತೆಯ ಕರಾಳತೆ ಸಮಾಜಕ್ಕೆ ಅರ್ಥವಾಗುವುದೇ ?! ಮಕ್ಕಳಿಗಾಗಿ ನಾವು ಮಾಡುವ ಕಾಯಕವೇ ಕೈಲಾಸ. ಈ ಲಿಂಕ್ ಮೂಲಕ ನೀವೂ ಕೇಳಿ..... https://youtu.be/a2kbrWhcFSU ಈ ಪಟ ಸರ್ಕಾರಿ ಬಾಲಕಿಯರ ಮಂದಿರದ ಬಾಲಕಿಯರ ಕಲೆ.

Child Rights Week 2019 - ಬನ್ನಿ ಮನುಷ್ಯರಾಗೋಣ!

Image
ಇವತ್ತು ರಾಷ್ತ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯ ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ   ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ   ಮೂಡಿಸಲು ಹಲಾವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ ಮನೋರಂಜನೆಯ ಮೂಲಕ   ಅವರ ಹಕ್ಕುಗಳ ಅರಿವು ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು “ UNCRC30 “   ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’ GO BLUE ‘   ಈ ಘೋಷವಾಕ್ಯ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಕಚೇರಿಗಳನ್ನು, ಮನೆಗಳನ್ನು, ಸರ್ಕಾರಿ ಕಟ್ಟಟಗಳನ್ನ

Mental Health ಮತ್ತು ಲಾಕ್ ಡೌನ್

Image
ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಎನ್ನುವ ವಿಷಯದ ಬಗ್ಗೆ 90.4 ಸಾರಥಿ ಝಲಕ್ ರೇಡಿಯೊದಲ್ಲಿ ಮಾತನಾಡಿದ್ದೇನೆ. ಬಿಡುವು ಮಾಡಿಕೊಂಡು ಈ ಲಿಂಕ್ ಮೂಲಕ ಕೇಳಿ please 🙏 https://youtu.be/H2LWoFQ7IxY 30 March 2020