Posts

Showing posts from February, 2023

Legal awareness JJ Nagar

Image
 ಒಬ್ಬ ಪೊಲೀಸ್ ಅಧಿಕಾರಿ ತನ್ನ ವ್ಯಾಪ್ತಿ ಪ್ರದೇಶದ ಮುಖ್ಯ ಸಮಸ್ಯೆಯನ್ನು ಗುರುತಿಸಿ ಅದರ ಬಗ್ಗೆ ಅಲ್ಲಿನ ಹದಿಹರೆಯದವರಿಗೆ ಕಾನೂನು ಅರಿವು ಮೂಡಿಸುವಂತಹ ಕಾರ್ಯಕ್ರಮ ಏರ್ಪಡಿಸಲು, ಇಲಾಖೆ ಮಟ್ಟದಲ್ಲಿ, ಸಮುದಾಯದೊಡನೆ ಎಷ್ಟೆಲ್ಲಾ ಕೆಲಸ ಮಾಡಿರಬೇಕು ಮತ್ತು ನಿಜಾರ್ಥದಲ್ಲಿ ಸಮಾಜದ ಬಗ್ಗೆ ಅದೆಷ್ಟು ಕಾಳಜಿ ಇಟ್ಟುಕೊಂಡಿರಬೇಕು. JJ ನಗರ , ಬೆಂಗಳೂರು ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಇಂದಿಗೂ ಇರುವ ದೊಡ್ಡ ಸಮಸ್ಯೆ ಎನ್ನುವುದನ್ನು ಅನುಭವದ ಮೂಲಕ ಕಂಡುಕೊಂಡಿರುವ ಸಬ್ ಇನ್ಸ್ಪೆಕ್ಟರ್ ಲೋಕೇಶ್.ಕೆ ಇವರು ಈ ದಿನ 250ಕ್ಕೂ ಹೆಚ್ಚು ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು. ಇದು ತುರ್ತಾಗಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಆಗಬೇಕಾದ ಕೆಲಸ. ಸಬ್ ಇನ್ಸ್ಪೆಕ್ಟರ್ ಲೋಕೇಶ್. ಕೆ ಹಾಗೂ PSI ಹನುಮಂತಪ್ಪ ಇವರುಗಳಿಗೆ ಧನ್ಯವಾದ ಹೇಳಲೇಬೇಕು. ಇದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಮತ್ತೊಂದು ವಿಷಯ; ಸಯದ್ ಮೈಮೂನ ಎನ್ನುವ ಮಹಿಳೆಯೊಬ್ಬರು " ನಿಮ್ಮ ಬ್ಲಾಗ್ ಅನ್ನು ಎಲ್ಲಾ ಬರಹಗಳನ್ನು ನಾನು follow ಮಾಡ್ತೀನಿ. ಇವತ್ತಿನ ಲೇಖನವನ್ನೂ ಓದಿದೆ" ಎಂದು ಹೇಳಿದ್ದು. ಜನರ ನಡುವೆ ಇರುವುದು ನಿತ್ಯವಾದಷ್ಟೂ ಹೊಣೆಗಾರಿಕೆ ಮಾತ್ರ ಅಲ್ಲ ಮನುಷ್ಯ ಪ್ರೀತಿಯೂ ಹೆಚ್ಚಾಗುತ್ತದೆ ಎಂದು ತೋರಿಸಿಕೊಟ್ಟ ಇಂತಹ ದಿನಗಳು ಎಲ್ಲರ ಬದುಕಿನಲ್ಲೂ ಹೆಚ್ಚಾಗಬೇಕು. 27-02-2023

Gandhi in Gadag

Image
  ಇಳಿದುಕೊಂಡಿದ್ದ ಅತಿಥಿಗೃಹದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಹತ್ತಿರ ಹತ್ತಿರ ಒಂದೂವರೆ   ಕಿಲೋಮೀಟರ್ಗಳ ದೂರ. ಸುತ್ತಲೂ ಕೆಮ್ಮಣ್ಣಿನ ಒಣ ಬಯಲು, ನೆತ್ತಿಯ ಬೈತಲೆಯಂತೆ ಕಡೆದಿದ್ದ ಮಣ್ಣಿನ ಡೊಂಕು ಸಪೂಟು ರಸ್ತೆ.   ಹೆಜ್ಜೆಗಳು ನೀರೆತ್ತುವ ಏತದಂತೆ ಏರಬೇಕಿತ್ತು ಅಷ್ಟೇ. ಬೆಂಗಳೂರಿನಲ್ಲಿ ಆಗತಾನೆ ಹುಟ್ಟುತ್ತಿದ್ದ ಸೂರ್ಯ ಅಲ್ಲಾಗಲೇ ಶಾಖವಾಗಿಬಿಟ್ಟಿದ್ದ. ಸೆರಗ ಹೊದ್ದು ಸರಸರನೆ ನಡೆವಾಗ ಸಭಾಂಗಣಕ್ಕೆ ಇಪ್ಪತ್ತು ಹೆಜ್ಜೆ ಮೊದಲೇ ಕಂಡ ಬೋರ್ಡಿನಲ್ಲಿತ್ತು ’ಸಾಬರಮತಿ ಆಶ್ರಮ’. ಹೆತ್ತೂರಿಂದ ವಿದೇಶದವರೆಗೂ ಕಂಡಿದ್ದ ಪುಣ್ಯಾತ್ಮ ಇಲ್ಲೂ ಕಂಡಿದ್ದ. ಆಸಕ್ತಿ ಬಿಸಿಲಿನಂತೆಯೇ ಏರುತ್ತಿತ್ತು. ಕಾರ್ಯಕ್ರಮದ ಸಮಯ ಬಂದಿತ್ತು. ಹಿಂದಿರುಗುವ ಮೊದಲು ಇಲ್ಲಿನ ಗಾಂಧಿಯ ಭೇಟಿ ಆಗಲೇ ಬೇಕು ಎಂದುಕೊಂಡು ಮುಂದೆ ಹೋದೆ.          ಆ ದಿನ ಮಕ್ಕಳ ಹಕ್ಕುಗಳ ಗ್ರಾಮಸಭೆ, ಪರಿಣಾಮಕಾರಿ ಆಯೋಜನೆ ಮತ್ತು ಜಾರಿ ಕುರಿತು ಕರ್ನಾಟಕ   ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರು ಆಯೋಜಿಸಿದ್ದರು. ಉಪಸ್ಥಿತಿಗಾಗಿ ಹೋಗಿದ್ದೆ. ಮಾತುಕತೆಗಳಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್ ಚಟಪಲ್ಲಿ ಅವರು “ಬೆಳಗಿನ ಭಜನೆಗೆ ನೀವು ಬರುತ್ತೀರ ಎಂದುಕೊಂಡಿದ್ದೆ” ಎಂದಾಗ ಅಲ್ಲಿನ ಸಾಬರಮತಿಯ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಿತ್ತು. ವಿಷ್ಣುಕಾಂತ್ ಅವರು “ಮಹಾತ್ಮ ಗಾಂಧಿಯವರು ನಮ್ಮಲ

Child marriage prevention Lecture in Tumakur a report

Image
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು, ಇವರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ, ಬಾಲ್ಯವಿವಾಹ ನಿಷೇಧ ಕುರಿತು ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಬಳಿ 9ನೇ ತರಗತಿಯ ಇಬ್ಬರು ಬಾಲಕಿಯರು ಬಂದು " ನಿಮ್ಮ ಮಾತು ಕೇಳುತ್ತಿರುವಾಗ I went little emotional " ಎಂದು ಹೇಳಿದ್ದು ದಿನವನ್ನು ಸಾರ್ಥಕ ಗೊಳಿಸಿತ್ತು. ಪತ್ರಿಕಾ ವರದಿ ಇಲ್ಲಿದೆ. 25.02.2023

Reaction on state budget 2023

Image
             ಬಜೆಟ್ ಎಂದರೆ ಹಾಗೆ, ಬಾಯಿ ಹೊಲೆದು ಮೂಗಿಗೆ ತುಪ್ಪ ಸವರೋದು, ಕೈಬೆರಳುಗಳ ತುದಿಗೆ   ಚಾಕಲೇಟನ್ನೂ ಮೆತ್ತುವುದು. ಆದರಲ್ಲೂ ಚುನಾವಣೆ ಎನ್ನುವ ನರಸಿಂಹ ಹೊಸಲಿನ ನಡುವಲ್ಲಿ ಕುಳಿತಿರುವಾಗ ಮಂಡಿತವಾಗುವ   ಬಜೆಟ್ ಕಶ್ಯಪ ಬ್ರಹ್ಮನ ಸುಕುಮಾರನೇ ಸರಿ.    ಎಂದಿನಂತೆ, ಈ ವರ್ಷದ ರಾಜ್ಯ ಆಯವ್ಯಯದಲ್ಲೂ ಹೊಸಹೊಸ ಘೋಷಣೆಗಳಾಗಿವೆ. ಅದು ಎಷ್ಟರ ಮಟ್ಟಿಗೆ ಅನುಮೋದನೆ ಪಡೆದು ಸಮಯಕ್ಕೆ ಸರಿಯಾಗಿ ಜಾರಿಗೆ ಬರಲಿದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ. ಮೊನ್ನೆ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ಎಂದ ಧ್ವನಿ ಮುಗಿಯುವ ಮೊದಲೇ ಮುಖ್ಯಮಂತ್ರಿಗಳು 6 ಕೆಜಿ ಕೊಡಲು ಮುಂದಾಗಿದ್ದಾರೆ. ಆದರೆ ಕೊನೆ ಮನೆಯ ಒಲೆಯ ಮೇಲೆ ಅಕ್ಕಿ ನೆಮ್ಮದಿಯ ಕುದಿಯಾಗುವವರೆಗೂ ಇದು ರಾಜಕೀಯವಾಗಿ ಬೇಯುವ ಬೇಳೆಯೇ ಹೊರತು ನಿಜಾರ್ಥದ ಸಾಮಾಜಿಕ ನ್ಯಾಯ ಅಲ್ಲ. ಆಸ್ಪತ್ರೆಯಲ್ಲಿ ಮಗು ಹೆತ್ತು ತಮ್ಮತಮ್ಮ ಮನೆಗೆ ಹೋಗಲು ನಲುಗುವ ಬಾಣಂತಿ ಮಗುವಿಗೆ ’ನಗು ಮಗು ವಾಹನ’ ಎನ್ನುವ ಯೋಜನೆ ಅತ್ಯಾವಶ್ಯಕವಾದದ್ದು. ಇದಿಲ್ಲದೆ ಕರೋನಾ ಸಮಯದಲ್ಲಿ ಒದ್ದಾಡಿದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ~ಆಸಿಡ್ ಧಾಳಿಯಿಂದ ನೊಂದವರಿಗೆ 3 ಸಾವಿರ ಮಾಸಾಶನವನ್ನು 10 ಸಾವಿರಕ್ಕೆ ಏರಿಸಿರುವುದು ಸ್ವಾಗತಾರ್ಹ ಆದರೆ ಅವರುಗಳ ಶಸ್ತ್ರಚಿಕಿತ್ಸೆಗೆ ನೀಡುತ್ತಿರುವ ಹಣವನ್ನು ಪೂರ್ತೀ ಸರ್ಕಾರ ವಹಿಸಿಕೊಂಡಿದ್ದಿದ್ದರೆ ಈ ಏರಿಕೆಗೆ ಪರಿಹಾರ ಎನ್ನಬಹುದಿತ್ತು.

Traing to CMPOs of Tumkur and Bengaluru Urban

Image
  ದಿನಾಂಕ 6 ಜನವರಿ 2023 ರಂದು ತುಮಕುರು ಜಿಲ್ಲೆಯ ಬಾಲ್ಯವಿವಾಹ ತಡೆಗಟ್ಟುವಿಕೆ ಅಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಪ್ರಕ್ರಿಯೆ ಬಗ್ಗೆ ತರಬೇತಿ ಕೊಟ್ಟೆ. ಬಾಲ್ಯವಿವಾಹ 0% ಆದರೆ ನೀವುಗಳು ತೆಗೆದು ಕೊಳ್ಳುತ್ತಿರುವ ಸಂಬಳಕ್ಕಿಂತ ಒಂದುವರೆ ಪಟ್ಟು ಹೆಚ್ಚಿನ ಸಂಬಳ ಪಡೆಯಬಹುದು ಮತ್ತು ಅದಕ್ಕೆ ನೀವು ಅರ್ಹರಿದ್ದೀರ ಎಂದಾಗ ಅವರುಗಳು ಚಕಿತರಾಗಿದ್ದು ಸುಳ್ಳಲ್ಲ. ಬಾಲ್ಯವಿವಾಹ ಎಂದರೆ ಕೇವಲ ಹೆಣ್ಣು ಮಕ್ಕಳ ದೇಹಕ್ಕೆ ಸಂಬಂಧ ಪಟ್ಟ ವಿಷಯ ಅಲ್ಲ ಈ ದೇಶದ ಆರ್ಥಿಕತೆಗೂ ಸಂಬಂಧ ಪಟ್ಟಿದ್ದಾಗಿದೆ. ಬೆಂಗಳೂರು ನಗರ ಜಿಲ್ಲೆಯ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಕಾರ್ಯವಿಧಾನದ ತರಬೇತಿ ಕೊಡುವಾಗ ಹಾಜರಿದ್ದ ಯುವ ಪೊಲೀಸ್ ಒಬ್ಬರು ತರಬೇತಿಯ ಕೊನೆಯಲ್ಲಿ "ಮೇಡಮ್, ನಾನು ಪ್ರೊಬೇಷನರಿಯಲ್ಲಿ ಇದ್ದಾಗ ಒಮ್ಮೆ ನಿಮ್ಮ ಬಳಿ ಫೋನ್ ನಲ್ಲಿ ಮಾತನಾಡಬೇಕಾದ ಸಂದರ್ಭ ಬಂತು. ಆಗ ನಮ್ಮ ಇನ್ಸ್ಪೆಕ್ಟರ್ ಆ ಮೇಡಂ ಜೊತೆ ಎಚ್ಚರಿಕೆಯಿಂದ ಮಾತನಾಡು ಅಂತ ಹೇಳಿದ್ದರು. ಈಗಿನಂತೆ ಆಗಲೂ ನಿಮ್ಮ ಮಾತುಗಳು ನನಗೆ ತುಂಬಾ ಸಹಾಯ ಆಯ್ತು" ಎಂದಾಗ ...... ನಿರಾಸೆ ಎನ್ನುವ ಗಂಧ ಗಾಳಿಯಲ್ಲಿ ತೇಲಿ ಬಂದಾಗ ಇಂತಹ ಘಂ ಎನ್ನುವ ಮಾತುಗಳು ಉಚ್ಛ್ವಾಸ ಆಗಿ ಮತ್ತೆ ಮತ್ತೆ ’ರಸ್ತೆಗೆ’ ಇಳಿಸುತ್ತದೆ. ಮನದ ಭಾವಿಯಿಂದ ನೀರು ಸೇದಿಸುವ ಎಲ್ಲರಿಗೂ ಅದೆಷ್ಟು ಋಣವಿದೆ!

National Girl Child Day at Samrakshana CCi-28th Jan 2023

Image
ದಿನಾಂಕ 28 ಜನವರಿ 2023ರಂದು ಸಂರಕ್ಷಣಾ ಮಕ್ಕಳ ಪಾಲನಾ ಕೇಂದ್ರದ ಮಕ್ಕಳು ತಮ್ಮ ಅರಿವಿಗೆ ನಿಲುಕಿದಂತೆ ಬಾಲ್ಯವಿವಾಹ ಬೇಡ ಎನ್ನುವುದರ ಬಗ್ಗೆ ಒಂದು ಕಿರುನಾಟಕ ಮಾಡಿ ಹೆಣ್ಣು ಮಕ್ಕಳ ದಿನಾಚರಣೆ ಮಾಡಿದರು. ಶಕ್ತಿ ಸೋರಿಹೋಗದಂತೆ ತಡೆಯುವ ಬಿರಡೆಗಳು ಮಕ್ಕಳು.

ಆಂದೋಲನ ಪತ್ರಿಕೆಯಲ್ಲಿ

Image
              “ಹುಟ್ಟಿದ ಊರನು ಬಿಟ್ಟು ಬಂದಮೇಲೆ ಇನ್ನೇನು ಬಿಡುವುದು ಬಾಕಿ ಇದೆ. . .ಪರದೇಸಿ ಎದ್ದೇಳು ಕೊನೆ ಬಸ್ಸು ಟೈಮಾಗಿದೆ”  ಅಂತ ಹಾಡಾಗುತ್ತಿದ್ದ FM ಕೆಡಿಸಿಯೇ ಬಿಟ್ಟಿತು ತಲೆಯನ್ನು.  ಮೈಸೂರಿಗೆ ನಾನು ಹೋಗಿ ಒಂದು ತಿಂಗಳಾಯ್ತು ಅಂದರೆ ನನಗೆ ಕೊನೆ ಬಸ್ಸಿನ ಟೈಮ್ ಆಯ್ತೇ ಎನ್ನುವ ಆತಂಕದಿಂದಲೇ ಹಾಡನ್ನು ಪೂರ್ತೀ ಕೇಳಿದೆ. ಅಬ್ಬಬ್ಬಾ, ಭಾವನೆಗಳ ಹೊಟ್ಟೆಯನ್ನು ಹೇಗೆ ಕಿವುಚಿ ಬಿಟ್ಟಿದ್ದಾರೆ ಎಂದರೆ ಅಪ್ಪನ ಆಲದ ಮರಕ್ಕೆ ಜೋತು ಬೀಳದಿದ್ದರೆ ಭೂಮಿಗೆ ಬಂದಿದ್ದೇ ದಂಡ ಎನ್ನುವಂತೆ. ಅದಕ್ಕೇ ಇರಬೇಕು ಈಗ ಎಲ್ಲರೂ ಮರಳಿ ಮಣ್ಣಿಗೆ ಎನ್ನುವುದನ್ನು ಅಕ್ಷರಶಃ ಪಾಲಿಸಲು ಮುಂದಾಗುತ್ತಿರುವುದು ಮತ್ತು ಒಂದಷ್ಟು ಸೋಲುತ್ತಿರುವುದು ಕೂಡ.             ಪರಿಚಯದವನೊಬ್ಬ ತನ್ನ 20ನೆಯ ವಯಸ್ಸಿನಲ್ಲಿಯೇ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡು ಅಮೇರಿಕೆಯ ಪಾಲಾಗಿದ್ದ. ಮಾತನಾಡಿದಾಗಲೆಲ್ಲಾ ಮೈಸೂರಿನ ನೆನಪಿನಲ್ಲಿ ನರಳುತ್ತಿದ್ದ. ಇನ್ನು ತಡೆಯಲು ಆಗುತ್ತಿಲ್ಲ ಎನಿಸಿದಾಗ ಗಂಟುಮೂಟೆಯನ್ನು ಮೈಸೂರಿಗೆ ಪಾರ್ಸೆಲ್ ಮಾಡಿ ಮಂಡಿಮೊಹಲ್ಲದಲ್ಲಿ ಇರುವ ತನ್ನ ಹುಟ್ಟು ಮನೆಯನ್ನು ಕಸಮುಸರೆ ಮಾಡಿ, ಪಾಯಸದ ತಪ್ಪಲೆಯಂತಾಗಿಸಿ ಸೆಕೆಂಡ್ ಇನ್ನಿಂಗ್ಸ್ ಜೀವನ ಶುರು ಮಾಡಿಯೇ ಬಿಟ್ಟ. ನಿತ್ಯವೂ ಕುಕ್ಕರಳ್ಳಿ ಕೆರೆ ದಂಡೆಯ ವಾಕಿಂಗ್. ತನ್ನನ್ನು ಸಾಫ್ಟ್‍ವೇರ್ ಮಾಡಿ ಕಾಳಮ್ಮನಗುಡಿ ಬೀದಿಯಲ್ಲಿ ತಾವು ಹಾರ್ಡ್‍ವೇರ್ ಆಗಿಯೇ ಉಳಿದುಕೊಂಡಿದ್ದ ಬಾಲ್ಯದ ಸ್ನೇಹ