Posts

Showing posts from 2022

1098 on School and Colleges' walls

Image
 ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಗಮನಿಸಿ ಮತ್ತು ಇಲ್ಲಿ ಓದುವವರು ಮಾಹಿತಿಯನ್ನು ಹಂಚಿಕೊಳ್ಳಿ. ಕಾಲೇಜಿನ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ವಿವರದೊಂದಿಗೆ ಕಡ್ಡಾಯವಾಗಿ ಬರೆಸಬೇಕು. ವಿದ್ಯಾರ್ಥಿಗಳ ನೋಟ್ ಬುಕ್ನಲ್ಲಿ ಪ್ರಿಂಟ್ ಹಾಕಿಸಬೇಕು. Assembly/ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಎಲ್ಲರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು ಎನ್ನುವ ಸರ್ಕಾರಿ ಸುತ್ತೋಲೆ ಇದೆ ಮತ್ತು ಅದು ಇಲ್ಲಿ ಇದೆ.

High court on Suicide/ಆತ್ಮಹತ್ಯೆ ಕಾನೂನು

Image
 ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ.....etc etc ಕಾರಣ ಕೊಟ್ಟು;  ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ - ಎನ್ನುವ ಬೆದರಿಕೆಗೆ ಬಗ್ಗಬೇಡಿ, ನಿಮ್ಮ ತಪ್ಪು ಇಲ್ಲದಿರುವಾಗ ಹೆದರಬೇಡಿ...ಸಾಯುವವನು ಸಾಯಲಿ !! ಹೀಗೆ ನಾನು ನೂರು ಬಾರಿ ಹೇಳುತಿರ್ತೀನಿ, ಒಂದಷ್ಟು ಬಾರಿ ಬರೆದಿದ್ದೀನಿ ಕೂಡ. ಈಗ ನೋಡಿ ಶಂಖದಿಂದ ಬಿದ್ದಿದೆ ತೀರ್ಥ. ಕರ್ನಾಟಕ ಉಚ್ಚನ್ಯಾಯಾಲಯವು, CRIMINAL PETITION No.7001/2019 Noushad Ahmed Vs State by  Cantonment Railway Police Station ಈ ಪ್ರಕರಣದಲ್ಲಿ;  ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ. ಇನ್ನೂ ಓದಿಗೆ ಈ ಲಿಂಕ್ ಒತ್ತಿ https://udayakala.news/how-to-handle-threat-of-suicide-be-addressed/ #FamilyCourtಕಲಿಕೆ

What was found in the bags of students

Image
 ಈ ಮೇಲಿನ YouTube link ನಲ್ಲಿ ಶೀರ್ಷಿಕೆಯ ವಿಷಯದ ಬಗ್ಗೆ ನನ್ನ ಮಾತಿದೆ. ಕೇಳಿ ಅಭಿಪ್ರಾಯ ತಿಳಿಸಿ.

Protection of Advocates

Image
 ಕೆಲವೇ ವಕೀಲರು AC ಚೇಂಬರ್ ನಲ್ಲಿ ಕೆಲಸ ಮಾಡುತ್ತಾರೆ, ಇನ್ನೂ ಕೆಲವೇ ಕೆಲವರು ಶ್ರಮಪಟ್ಟು ಆಸ್ತಿ ಪಾಸ್ತಿ ಮಾಡಿಕೊಳ್ಳುತ್ತಾರೆ, ಒಂದಷ್ಟೆ ವಕೀಲರು ಆಗೊಮ್ಮೆ ಈಗೊಮ್ಮೆ ವಿದೇಶ ಪ್ರವಾಸ ಮಾಡುತ್ತಾರೆ..... ಇವರೆಲ್ಲರ ಸಮಾಧಾನಕ್ಕೆ ಕಾರಣ ಇವತ್ತು ತಮ್ಮ ತಮ್ಮ ಖರ್ಚಿನಲ್ಲಿ ಬೆಳಗಾವಿಗೆ ತೆರಳಿ " ರಾಜ್ಯ ವಕೀಲರ ರಕ್ಷಣಾ ಕಾಯಿದೆ " ಜಾರಿಗೆ ತರಬೇಕು ಎಂದು ಪ್ರತಿಭಟನೆ ಮಾಡಿದಾರಲ್ಲ ಆ ನನ್ನ ವಕೀಲ ಸಹೋದರ, ಸಹೋದರಿಯರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ನಿಜ ಸ್ವರೂಪ ಇದು ಎಂದು ತೋರಿಸಿಕೊಟ್ಟಿದ್ದಾರೆ. ಕಂದಾಯ ಸಚಿವ ಅಶೋಕ್ ಅವರು bill ಮಂಡಿಸುವ ಭರವಸೆ ಕೊಟ್ಟಿದ್ದಾರೆ. ಪ್ರತಿಭಟನೆ ಮುಗಿದಿದೆ. ಎಲ್ಲಾ ವಕೀಲರುಗಳಿಗೆ ಒಂದು ಹೆಮ್ಮೆಯ salute!🙏 27-12-2022

Actor Abhinaya Imprisoned

Image
 ಇಪ್ಪತ್ತು ವರ್ಷಗಳು ನ್ಯಾಯಾಲಯದಲ್ಲಿ ನಡೆದ ಪ್ರಕರಣ. ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ ಆಗಿದೆ. ಆಕೆಯ ಅತ್ತಿಗೆ 2002ರಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ಕೊಟ್ಟಿದ್ದ ದೂರು. ಇದರ ಬಗ್ಗೆ ಈ ದಿನ ಪವರ್ ಟಿವಿ ಯಲ್ಲಿ 5-6 ನಿಮಿಷಗಳು ಮಾತನಾಡಿದ್ದು ಈ ವಿಡಿಯೋದಲ್ಲಿ ಇದೆ.  ಕೆಳನ್ಯಾಯಾಲಯ ಖುಲಾಸೆಗೊಳಿಸಿದ್ದ ಪ್ರಕರಣಕ್ಕೆ ಉಚ್ಚನ್ಯಾಯಾಲಯ ಶಿಕ್ಷೆ ನೀಡಿದೆ. ಅಚ್ಚರಿ ಹೌದು, ವಿಚಿತ್ರ ಅಲ್ಲ. ಆಸಕ್ತರು ವಿಡಿಯೋ ನೋಡಿ🙏

Department of Defence production, Ministry of Defence, Government of India

Image
 ದಿನಾಂಕ 28 ನವೆಂಬರ್ 2022ರಂದು Department of Defence production, Ministry of Defence, Government of India ಅವರು Elimination of Violence against women and Human Rights of Women and Children ಬಗ್ಗೆ ಮಾತನಾಡಲು ಅವಕಾಶ ಕೊಟ್ಟಿದ್ದರು. ದೇಶದೆಲ್ಲೆಡೆಯಿಂದ 137 ಅಫೀಸಿನಿಂದ ಅಧಿಕಾರಿಗಳು ಭಾಗವಹಿಸಿದ್ದರು. ಒಂದು ಗಂಟೆಯ ಕಾಲ ಮಾತನಾಡಿದೆ. ನನಗನಿಸಿದ ಮುಖ್ಯಾಂಶಗಳು ಹೀಗಿವೆ; * Eliminate the discrimination to eliminate the violence. * We shall have to walk an extra mile to become Human beings. * Feminism is not a claim to Equality but for equal existence. It is an awareness given to the society about Co-existence. * unless the subtleness of violence is understood, Society cannot be programed for its elimination. * I raise voice not expecting the justice would be done but to make the injustice known. ಇದು ನಿಜಕ್ಕೂ ನನಗೆ ಸಮಾಧಾನ ಕೊಟ್ಟ ಕಾರ್ಯಕ್ರಮ. ಅವಕಾಶಕ್ಕಾಗಿ Department of Defence production, Ministry of Defence, Government of India ಇವರಿಗೆ ಧನ್ಯವಾದಗಳು.

Human Trafficking Law - ಮಾನವ ಕಳ್ಳ ಸಾಗಾಣಿಕೆ

Image
 ದಿನಾಂಕ 30-06-2022 ರಂದು  'ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಜೀತ ಪದ್ಧತಿ ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವಿಕೆ"  ಕುರಿತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯವರು  ಏರ್ಪಡಿಸಿದ್ದ ಒಂದು ದಿನದ ಯೂಟ್ಯೂಬ್ ತರಬೇತಿಯಲ್ಲಿ; ಅಂಜಲಿ ರಾಮಣ್ಣ ಅಧ್ಯಕ್ಷರು ಮಕ್ಕಳ.ಕಲ್ಯಾಣ ಸಮಿತಿ ಬೆಂಗಳೂರು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

Surrogacy Law

Image
 ಅ ಕ್ಟೊಬರ್ 2021ರಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳುತ್ತಾರೆ “ಆಧುನಿಕ ಮಹಿಳೆ ಒಬ್ಬಳೇ ಇರಲು ಬಯಸುತ್ತಾಳೆ. ವಿವಾಹವಾದರೂ ಮಗು ಹೆರಲು ಇಷ್ಟ ಪಡುತ್ತಿಲ್ಲ, ಬಾಡಿಗೆ ತಾಯಿಯಿಂದ ಮಗು ಪಡೆಯಲು ಬಯಸುತ್ತಿದ್ದಾಳೆ” ಎಂದು.  ಒಬ್ಬ ಮಹಿಳೆ ಹೀಗೆ ತನ್ನಿಷ್ಟಕೆ ಅನುಗುಣವಾಗಿ ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯಬಹುದು ಎಂದರೆ ಒಟ್ಟು 19 ಪುಟಗಳ 54 ಮುಖ್ಯ ಸೆಕ್ಷನ್‍ಗಳ ಸ್ಯಾರೋಗೆಸಿ (ನಿರ್ವಹಣೆ) ಕಾನೂನು-2021 ಹಾಗೂ 69 ಪುಟಗಳ 35 ರೂಲ್ಸ್ ಜೊತೆಗೆ 19 ನಮೂನೆಗಳನ್ನು ಹೊಂದಿರುವ ಸ್ಯಾರೋಗೆಸಿ ನಿಬಂಧನೆಗಳು-2022 ಇವುಗಳನ್ನು ಜಾರಿಗೆ ತರುವ ಅವಶ್ಯಕತೆಯಾದರೂ ಏನಿತ್ತು?! ಮೊನ್ನೆಮೊನ್ನೆ ನಯನತಾರ ಎನ್ನುವ ಪ್ರಖ್ಯಾತ ನಟಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಾಗ ಕೆಲವು ಜನರು ಟೈಮ್ ಪಾಸ್ ಮಾತಿನಂತೆ ಹಗುರವಾಗಿ ಹೇಳಿದ್ದು “ಮದುವೆ ಮಾಡಿಕೊಂಡು ಲಕ್ಷಣವಾಗಿ ಮಕ್ಕಳು ಹೆರಕ್ಕೆ ಏನಂತೆ?” ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕೆಲವರ ಮಾತು “ಮಕ್ಕಳು ಮಾಡಿಕೊಂಡ ಮೇಲೆ ಮದುವೆ ಯಾಕೆ? ನಮ್ಮ ಸಂಸ್ಕೃತಿ ಹಾಳಾಗುತ್ತಿದೆ.”   ತಮ್ಮದೂ ಒಂದು ಮಾತಿರಲಿ ಎಂದುಕೊಳ್ಳುವ ಕೆಲವರು ಹೇಳಿದ್ದು “ಊರಲೆಲ್ಲಾ ಅನಾಥ ಮಕ್ಕಳು ಬಿದ್ದಲೆಯುತ್ತಿವೆ. ಅವುಗಳನ್ನು ದತ್ತು ತೆಗೆದುಕೊಂಡು ಸಾಕಬಾರದೇ?”. ಇನ್ನೂ ಒಂದಷ್ಟು ತಲೆಗಳು “ಹೆಂಗಸರಿಗೆ ತಮ್ಮ ಸೌಂದರ್ಯ ಉಳಿದರೆ ಸಾಕು, ಸಮಾಜ ಏನಾದರೇನಂತೆ?” ಎಂದವು. ಹೀಗೇ ಇನ್ನೂ ತರಹಾವರಿ ವಾಕ್ಯಗಳನ್ನು ಓದುವಾಗ, ಕೇಳುವಾಗ