Posts

Showing posts from June, 2020

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

Image
       ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು.  ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕೆ ದಶಕಂಠ ಎಂದರಿವಿದ್ದವಳಿಗೆ ಅದು ಮುಖವಿಹ

Magna Carta ನೆನಪು

Image
22 December 2016 ಮೊತ್ತಮೊದಲ ಬಾರಿಗೆ  ಜನಗಳಿಂದ ಜನಗಳಿಗಾಗಿ ಕಾನೂನು ಹುಟ್ಟಿದ ಜಾಗ....ಜಗತ್ತಿನ ಎಲ್ಲಾ ಕಾನೂನು ವ್ಯವಸ್ಥೆಯೂ ಗರ್ಭ ಕಟ್ಟಿದ ಜಾಗ....Runnymede, London  Place where Magna Carta  was signed. #ಅಲೆದಾಟಕಲಿಸುವಪಾಠ Magna Carta is Latin for Great Charter, and is one of the most important documents in political history. Drawn up in Britain and signed on 15th June 1215, it outlines the rights of the common people and limits the powers of the monarchy. Since then it has been used as the basis for civil liberties around the World, advancing the cause of liberty, constitutionalism and parliamentarianism. June 15th Magna Carta Day

ಈ ವಿಷಯದಲ್ಲಿ ಎಲ್ಲರೂ ಒಂದೇ ಆದರೆ ......

Image
ಇಲ್ಲಿನ   ನೆನ್ನೆ ರಾತ್ರಿ 10 ಗಂಟೆಗೆ ಹಿಮಪಾತವಾಗುತ್ತಿದ್ದಾಗ ಲಂಡನ್‍ನ ರೋಮನ್ ಪಾರ್ಕ್ ನಲ್ಲಿ ಪ್ಲಾಸ್ಟಿಕ್ ಕವರ್ ಒಳಗೆ ಅಳುತ್ತಿದ್ದ ನವಜಾತ ಶಿಶು ಒಂದನ್ನು ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮಗ ರಕ್ಷಿಸಿ ಆಸ್ಪತ್ರೆಗೆ ನೀಡಿರುತ್ತಾರೆ ಮಗು ಆರೋಗ್ಯವಾಗಿದೆ ಅದಕ್ಕೆ ರೋಮನ್ ಎಂದು ಹೆಸರಿಡಲಾಗಿದೆ. ಎನ್ನುವ ಸುದ್ದಿಯನ್ನು ಓದುವಾಗ ಮನಸ್ಸು   ಬಿಕ್ಕುವುದರ ಜೊತೆಗೆ ಏರಿದ ಹುಬ್ಬು ಜೊತೆಯಾಗುತ್ತಾ ಅದು ಹೆಣ್ಣು ಮಗು ಎನ್ನುವುದನ್ನೂ ಗಮನಿಸಿತ್ತು.        ಇಲ್ಲಿನ ಸರ್ಕಾರ ಭೂಮಿಗೆ ಬರುವ ಎಲ್ಲಾ ಮಕ್ಕಳನ್ನು ಅಕ್ಷರಶಃ ತನ್ನ ಮಕ್ಕಳೆಂದೇ ಪರಿಗಣಿಸಿ ಕನಿಷ್ಠ ಮಟ್ಟದ ಮಾನವೀಯ ಬಾಳ್ವೆಗೆ ಸವಲತ್ತು ಒದಗಿಸಿದೆ. ಆದರೂ ಹೀಗೆ ಮಗುವನ್ನು ತಿಪ್ಪೆಗೆ ಹಾಕುವುದು ಎಂದರೆ.... ಎನ್ನುವ ಕೊರೆಯುವ ಪ್ರಶ್ನೆಯನ್ನು ಹಿಂಜುತ್ತಾ ಉಪಪ್ರಶ್ನೆಗಳೊಡನೆಯೇ ಮಾತಿಗಿಳಿದೆ ಪೊಲೀಸ್ ಇನ್ಸ್ಪೆಕ್ಟರ್ ಅಲೆಕ್ಸಾಂಡರ್ ಜೊತೆ. ಈಗ ಅಲೆಕ್ಸಾಂಡರ್ನ ಆಫೀಸ್ ರೂಮಿನಲ್ಲಿ ಇದ್ದೆ. ಹೊರಗೆ ತೆಳುವಾಗಿ ಹಿಮ ಸುರಿಯುತ್ತಿತ್ತು. ಒಳಗೆ ಹಿತವಾದ ಬಿಸಿ. ಅವನೋ ಯಾವುದೋ ಉಪನಯನ ಸಮಾರಂಭದ ಬಾಳೆಲೆ ಭೋಜನದ ನಡುವೆ ಚಿರೋಟಿ ಮೇಲೆ ಸುರುವಿಕೊಳ್ಳುವ ಹಾಲಿನಂತೆ ಕಾಣುತ್ತಿದ್ದ. ಮಕ್ಕಳ ಹಕ್ಕುಗಳ ಬಗ್ಗೆ ಅವರ ಭವಿಷ್ಯದ ಬಗ್ಗೆ ಮಾತು   ಮುಂದುವರಿಸಲೇ ಅಥವಾ ನನಗಿನ್ನೂ ಮಕ್ಕಳಾಗುವ ವಯಸ್ಸಿದೆ ಎಂದು ಹೇಳಿಬಿಡಲೇ ಎನ್ನಿಸುವಷ್ಟು ಆಕರ್ಷಣೆ ಆ ವಾತಾವರಣದಲ್ಲಿ!!! ನೆತ್ತಿ  

ಶಾಲೆಗಳ ಆರಂಭ, ಹೂಂ ಅಂತೀರಾ?!

Image
ಈ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಮಂಡಿಸುವ ದೃಷ್ಟಿಯಿಂದ ಕಳೆದ ಮೂರು ದಿನಗಳಿಂದ  ಬೆಂಗಳೂರಿನಲ್ಲಿ ಬೇರೆ ಬೇರೆ ತರಗತಿಗಳಲ್ಲಿ , ಬೇರೆ ಬೇರೆ ಸ್ತರದ ಪ್ರೈವೇಟ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 64 ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇನೆ. ಎಲ್ಲರ ಒಟ್ಟಾರೆ ಅಭಿಪ್ರಾಯ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಅನ್ನುವುದೇ ಆಗಿದೆ. ಇದಕ್ಕೆ ಅವರುಗಳು ನೀಡುವ ಕಾರಣ ಆನ್ ಲೈನ್ ಎಜುಕೇಷನ್ ಅನುಕೂಲವಾಗಿದೆ, ತಂದೆ ತಾಯಿಯರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದು ಹೀಗೆ ಕೆಲವಾರು. ಇನ್ನೊಂದು ಗಮನಿಸಬೇಕಾದ ವಿಷಯ ಎಂದರೆ ಬಹಪಾಲು ಮಕ್ಕಳು ಜೂನ್ ಒಂದನೆಯ ತಾರೀಖು ಹೊಸ ಸಮವಸ್ತ್ರ, ಹೊಸ ಪುಸ್ತಕ ಇವೆಲ್ಲವನ್ನು ತೆಗೆದುಕೊಂಡು ಶಾಲೆಗೆ ಹೋಗಬೇಕು ಎನ್ನುವ ಆಕರ್ಷಣೆಯನ್ನು ಹೊಂದಿಲ್ಲ. ಆದರೆ 10 ನೆಯ ತರಗತಿಯ ಮತ್ತು ಎರಡನೆಯ ಪಿಯೂಸಿ ಮಕ್ಕಳು ಪರೀಕ್ಷೆ ಮುಗಿಸಿ ಕಾಲೇಜಿಗೆ ಹೋಗಬೇಕು ಎನ್ನುವ ಉತ್ಸಾಹ ತೋರಿಸಿದ್ದಾರೆ. ದೇಶದಲ್ಲಿ ಈವರೆಗೂ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ವಿರಳ. ಆದರೆ ವಿಶ್ವಸಂಸ್ಥೆಯು ನೀಡಿರುವ ಒಂದು ಅಂಕಿಅಂಶದಲ್ಲಿ ಶಾಲೆಯನ್ನು ಪುನರಾರಂಭ ಮಾಡಿರುವ ಕೆಲವು ದೇಶಗಳಲ್ಲಿ ಮಕ್ಕಳಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಶಾಲೆಗಳ ಪುನರಾರಂಭ ಮಾಡಿದ ನಂತರ ಸೋಂಕಿತರ ಸಂಖ್ಯೆ ಹೆಚ್ಚಿಸಿಕೊಂ