Posts

Showing posts from 2019

ನಿಮಗೆ ದಾನ ಮಾಡುವ ಮನಸ್ಸಿದ್ದರೆ ಹೀಗೆ ಮಾಡಿ ...

Image
ಅನಾಥ , ಬಡ, ಗತಿಯಿಲ್ಲದ,ಮಕ್ಕಳು ಇವರ ಸೇವೆ  ಎನ್ನುವ ಹೆಸರಿನಲ್ಲಿ ಸಂಸ್ಥೆಗಳನ್ನು ನಡೆಸುವುದು ಒಂದು ಮಾಫಿಯಾದಂತೆ ಬೆಳೆಯುತ್ತಿದೆ. ಇದರಲ್ಲಾದರೂ ಸಂಪೂರ್ಣ ಕೆಟ್ಟು ನಿರ್ನಾಮರಾಗುವ ಮೊದಲೇ ಎಚ್ಚೆತ್ತುಕೊಳ್ಳೋಣ. ನಿಮಗೆ ದಾನ ಮಾಡುವ ಮನಸ್ಸಿದ್ದರೆ ಹೀಗೆ ಮಾಡಿ - *ಆ ಸಂಸ್ಥೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಬಳಿ ನೋಂದಾವಣೆಯಾಗಿದೆಯೇ ಕೇಳಿ. *ಅನಾಥ ಮಕ್ಕಳು ಇದ್ದರೆ ಅವರನ್ನು ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳ ಬಳಿ ನೋಂದಾಯಿಸಲಾಗಿದೆಯೇ ಕೇಳಿ. *ಅಲ್ಲಿರುವ ಮಕ್ಕಳನ್ನು ಆಯಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರು ಪಡಿಸಿದ್ದಾರೆಯೇ ಕೇಳಿ. ಇದು ಸಾಧ್ಯವಾಗದಿದ್ದರೆ ನಿಮಗೆ ದಾನ ಮಾಡಬೇಕು ಎನಿಸಿದಾಗ ಅಂತಹ ದಾನಕ್ಕೆ ಯಾವ ಸಂಸ್ಥೆ ಅರ್ಹ ಎಂದು ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿಗಳ ಕಚೇರಿಯಿಂದ ತಿಳಿದುಕೊಂಡು ಅಂತಹ ಸಂಸ್ಥೆಗೆ ಮಾತ್ರ ದಾನ ಮಾಡಿ. ನೀವು ಕೊಡುವ ದವಸ ಧಾನ್ಯ ಆಟಿಕೆ ಹೊಸ ಬಟ್ಟೆ ಪುಸ್ತಕ ಎಲ್ಲವೂ ಲಾಭಕ್ಕಾಗಿ ಅಂಗಡಿ ಸೇರುವುದನ್ನು ತಪ್ಪಿಸಿ. ಹಣ ದುರ್ಬಳಕೆ  ಆಗುವುದನ್ನು ತಡೆಗಟ್ಟಿ. ಇದು ಸಾಧ್ಯವಾಗದಿದ್ದರೆ ಅನಾಥ ಮಕ್ಕಳಿಗೆ ನಾವೇ ಅಪ್ಪ ಅಮ್ಮ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ. ದಾನ ಮಾಡಬೇಡಿ. ನಮ್ಮ  ದಾನಮಹಾತ್ಮೆಯ ಫೋಟೋ  ಫೇಸಬುಕ್ನಲ್ಲಿ ಖಂಡಿತಾ ಹಾಕದಿರೋಣ.  ಇರುವ ಸುಪ್ತ ಅಹಂ ಅನ್ನು ತಣಿಸಿಕೊಳ್ಳುವ ದಾನವರಾಗದಿರೋಣ. ಮಕ್ಕಳ ಮನಸ್ಸು, ದೇಹ ಅವರ ಹಕ್ಕು #ಮಕ್ಕಳಹಕ್ಕುಗಳಜಾಗೃತಿಸಪ್ತಾಹ 2 M
Image
ಜಿಪುಣ ಅಂದ್ರೆ ಜಿಪುಣ ಈ ಕಾಲ ಅಂತ ರೇಗಿಕೊಳ್ಳುವಂತೆ ಮಾಡಿದ ಒಂದು ಸಂಜೆ... ವಿಜಯನಗರ ಬಿಂಬ ಸಂಸ್ಥೆಯ ಮಕ್ಕಳು ಮತ್ತು ಅವರ ತಾಯ್ತಂದೆಯರ ಜೊತೆ "ಮಕ್ಕಳು ಮತ್ತು ಸ್ವಾತಂತ್ರ್ಯ" ವಿಷಯದಲ್ಲಿ ಸಂವಾದ  20/April/2019

ಮತ ಹಾಕೋಣ ಬನ್ನಿ

Image
ಇವತ್ತು ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ..... ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮೊದಲ ಬಾ
Image
Consortium for Street Children ಜಗತ್ತಿನ 100ಕ್ಕೂ ಹೆಚ್ಚಿನ ದೇಶಗಳಲ್ಲಿ ಬೀದಿ ಮಕ್ಕಳ ಅಭಿವೃದ್ಧಿಗಾಗಿ ದಶಕಗಳಿಂದ  ಕೆಲಸ ಮಾಡುತ್ತಿರುವ Consortium for Street Children ಸಂಸ್ಥೆಯ ಅಧಿಕಾರಿ Jessica Clark ಮತ್ತು Stacy, Criminal Lawyer ಇವುಗಳಿಂದ ಕಲಿತದ್ದು ಅಪಾರ. Cambridge Heath Road, London 18th October 2018
Image
ಮಕ್ಕಳ ಸಂತೆ Children Fair at Freedom Park, Bangalore, Karnataka, India 18th March 2019

ಅಪರಿಚಿತ ಸಾವು- Dead body not claimed

15th April 2019 ಮೇಡಂ ಕಳೆದ ಹತ್ತು ವರ್ಷಗಳಿಂದ ನಮ್ಮ ಮನೆ ಎದುರುಗಡೆ ಒಬ್ಬ ವಾಚ್ಮನ್ ಕೆಲಸ ಮಾಡ್ತಿದ್ದ. ನೆನ್ನೆ ರಾತ್ರಿ ಅವನು ಸತ್ತು ಹೋಗಿದ್ದಾನೆ. ಅವನು ಯಾರು ಮನೆಯವರು ಯಾರು  ಒಂದೂ ಗೊತ್ತಿಲ್ಲಾ. ಹೆಣ ತೆಗೆದುಕೊಳ್ಳಲೂ ಯಾರೂ ಬಂದಿಲ್ಲ . ಯಾವುದಾದರೂ NGO ಅವನ ಕ್ರಿಯಾಕರ್ಮ ಮಾಡುತ್ತಾರಾ? ಕಾಂಟಾಕ್ಟ್ ನಂಬರ್ ಕೊಡಿ ಮೇಡಂ. ಹೀಗೆ ಗೊತ್ತು ಗುರಿ ಇಲ್ಲದ ಶವಗಳನ್ನು ಸಮಾಜ ಸೇವೆ ಹೆಸರಿನಲ್ಲಿ ಯಾರೋ ಕ್ರಿಯಾಕರ್ಮ ಮಾಡಿ ಮುಗಿಸುವುದು ಕ್ರಿಮಿನಲ್ ಅಪರಾಧ. ಪೊಲೀಸರಿಗೆ ತಿಳಿಸಬೇಕು ಮತ್ತು ತಿಳಿಸಲೇ ಬೇಕು. ಕಾರ್ಪೋರೇಶನ್ ವ್ಯಾನ್ ಅವರಿಗೆ ತಿಳಿಸಿದ್ದೇವೆ ಅವರು ಬಂದು ತೊಗೊಂಡು ಹೋಗ್ತಾರಂತೆ. ಉಹುಂ ಅದು ಕೂಡ ವಿಷಯ ತಿಳಿಸಿದವರನ್ನು ತೊಂದರೆಗೆ ಸಿಕ್ಕಿಸುತ್ತೆ. ಪೊಲೀಸ್ರಿಗೆ ತಿಳಿಸುವುದಕ್ಕಿಂದ ಬೇರೆ ಯಾವುದು "ಸನ್ಮಾರ್ಗ" ಇಲ್ಲ ನೆನಪಿರಲಿ.