Posts

Showing posts from July, 2020

ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು...

Image
ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ.... ಅಮ್ಮನಿಗೆ "ಸೀರೆ" ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ..... ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ..... ನನ್ನಮ್ಮನ ಬಳಿ ನೂರು ಸೀರೆಗಳು ಎಲ್ಲವೂ ಇಸ್ತ್ರಿಗೊಂಡು ಸಪೂಟು ಕಪಾಟಿನಲಿ ಕೀಲಿಕೈ ಒಂದು ಸದಾ ಅವಳ ಸೊಂಟದಲ್ಲಿ ಬೂದು ಬಣ್ಣದಲ್ಲಿ ಅಪ್ಪನ ಜರಿ ಅಂಚು ಅವಳಪ್ಪ ಅವ್ವ ಹಚ್ಚೆಯಾಗಿಸಿದ್ದ ಹಸಿರು ಹೂವು ದೂರದೂರ ಗೆಳೆಯನ ನೋಟದ ಹಳದಿ ಬೂಟ ಶಿಫಾನ್, ಜಾರ್ಜೆಟ್ಟ್, ರೇಷ್ಮೆ, ಹತ್ತಿ ಉಸಿರ ಹೊತ್ತು ಮಡಿಕೆಗಳಾಗಿ ನಿಡಿದಾದ ಸೀರೆಗಳಾಗಿವೆ ಈಗ ಈಗಲೇ ದುಷ್ಯಂತ ಜಗ್ಗಿದ್ದ ತೋಳ್ಬಂಧಿ ಪಟ್ಟಾಭಿಷೇಕಕ್ಕೆ ತೊಡಲು ಮರೆತಿದ್ದ ಕಿರೀಟ ಸೀಮಂತದಲ್ಲಿ ಬಳೆಯಿಂದ ಜಾರಿ ಬಿದ್ದ ಹವಳ ಕೈತುತ್ತುಣಿಸುವಾಗ ಮೆತ್ತಿಕೊಂಡ ಅನ್ನದಗುಳು ಬೇಳೆ ಹೋಳಿಗೆಯ ಘಮ ಸಾರಿನ ಪುಡಿಯ ಘಾಟು ಕೀಟ ಬಾಧೆಗೆ ಬಚ್ಚಿಟ್ಟ ಸಂಪಿಗೆ ಎಸಳು ನುಡಿಸುವಾಗ ಕಿತ್ತುಕೊಂಡ ವೀಣೆಯ ಷಡ್ಜ ಶಾಯಿಗೊಂಡ ಬೆರಳುಗಳ ಅಚ್ಚು ಒಂದಷ್ಟು ಅಕ್ಷರಗಳ ಗೆಜ್ಜೆ ಒರಳಿನಿಂದ ಥಟಕ್ಕನೆ ಹಾರಿದ ದೋಸೆ ಹಿಟ್ಟಿನ ಬುರುಗು ಅತ್ತಿಗೆ ನಾದಿನಿ ಮಕ್ಕಳು ಮೈದುನರ

Online ದೌರ್ಜನ್ಯ ಮತ್ತು ವರ್ಕ್ from home

Image
ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾನೂನು  2013  ಇದರ ಅಡಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ರಕ್ಷಣೆ   ಇದೆಯೋ ಇಲ್ಲವೋ ಎನ್ನುವ ಬಹು ಮುಖ್ಯ ಪ್ರಶ್ನೆ ಈಗಿನ ದಿನಗಳಲ್ಲಿ ಚರ್ಚೆಗೆ ಬಂದಿದೆ. ಪ್ರಕೃತಿ ಒಡ್ಡುತ್ತಿರುವ ಸವಾಲುಗಳಿಗೆ ಮನುಷ್ಯ ಅದೆಷ್ಟು ಪ್ರಮಾಣದಲ್ಲಿ ಬದುಕುವ ವಿಧಾನವನ್ನು ಹುಡುಕಿ ಕೊಳ್ಳುತ್ತಿದ್ದಾನೋ ಅಷ್ಟೇ ಸಂಖ್ಯೆಯಲ್ಲಿ ದೌರ್ಜನ್ಯದ ಹೊಸ ಮುಖಗಳನ್ನೂ ಅವಿಷ್ಕರಿಸಿಕೊಳ್ಳುತ್ತಿದ್ದಾನೆ. ಅದಕ್ಕೆ ಹೊಸ ಸೇರ್ಪಡೆ ಆನ್ಲೈನ್‍ನಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ಆನ್ಲೈನ್‍ನಲ್ಲಿಯೇ  ದೌರ್ಜನ್ಯ. ಇಷ್ಟು ದಿನ ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಅದೆಷ್ಟೋ ಸಂಘರ್ಷದ ನಂತರ ಪರಿಹಾರ ರೂಪದಲ್ಲಿ ಕಾನೂನನ್ನು ರೂಪಿಸಿಕೊಂಡಿದ್ದೇವೆ. ಆದರೆ ಈಗ ಅಂತಹ ದೌರ್ಜನ್ಯ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿದೆ. ಕರೋನ ನಮ್ಮೊಳಗೆ ಬಂದು ಸೇರಿಕೊಳ್ಳಲು ಹೇಗೆ ಯಾವ ದಿಕ್ಕು ದೆಸೆಗಳ ಮಿತಿಯಿಲ್ಲವೋ ಹಾಗೇ ಮಹಿಳೆಯರ ಕುಲಕ್ಕೆ ಹಿಂಸೆ ಬಂದು ಎರಗಲು ಹೊತ್ತು, ಸ್ಥಳ ಯಾವುದರ ಸೀಮೆಯೂ  ಇಲ್ಲದಂತಾಗಿರುವುದು ನಾಗರೀಕತೆಯ ದೊಡ್ಡ ದುರಂತವೇ ಸರಿ. ಜಗತ್ತಿನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಸಾಕಷ್ಟು ಉದ್ಯೋಗ ದಾತರು ತಮ್ಮ ಕಚೇರಿಗಳನ್ನು, ಫ್ಯಾಕ್ಟರಿಗಳನ್ನು ಮುಚ್ಚಿರುವುದರಿಂದ ವಿದ್ಯಾವಂತ, ಅವಿದ್ಯಾವಂತ ಎನ್ನುವ ಬೇಧವಿಲ್

ನ್ಯಾಯ ನಿಯಮ ಇತ್ಯಾದಿ - International Justice Day

Image
ಇವತ್ತು ಅಂತಾರಾಷ್ಟ್ರೀಯ ನ್ಯಾಯ ದಿನ. ಎಲ್ಲರಿಗೂ ಒಂದೇ ನ್ಯಾಯ ಎನುವ ತತ್ವದ ಆಧಾರದ ಮೇಲೆ ಆರಂಭವಾದ ವ್ಯವಸ್ಥೆ ಈ ಹೊತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಎನ್ನುವಲ್ಲಿಗೆ ಬಂದು ನಿಂತಿದೆ. ಇದು ಹೌದೇ? ಇದರ ಬಗ್ಗೆ ಈ ದಿನದ ಮಾತುಕತೆ "ನ್ಯಾಯ, ನಿಯಮ ಇತ್ಯಾದಿ" ಯಲ್ಲಿ......ಇದು ಕಂಪನಾಂಕ ಟೆಲಿ ರೇಡಿಯೋ ಕೆಳುಗರಿಗಾಗಿ ರೂಪಿಸಿದ ಕಾರ್ಯಕ್ರಮ🙏 ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Online ಉದ್ಯೋಗಸ್ಥ ಮಹಿಳೆಯರಿಗೆ ಲೈಂಗಿಕ ಕಿರುಕುಳ

Image
ಅವಳೀಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾಳೆ....ದೌರ್ಜನ್ಯ online ರೂಪತಾಳಿ ಕಾಡುತ್ತಿದೆ....ಕಾನೂನು ಏನು ಹೇಳುತ್ತೆ....ಇವತ್ತು 14-07-2020 ಸಂಜೆ 7 ಗಂಟೆಗೆ ಜನಶಕ್ತಿ media ದಲ್ಲಿ ಮಾತಾಡಿದ್ದೀನಿ, ಕೇಳಿ, ತಿದ್ದಿ 🙏

FEMINISM and Social Justice

Image

ಅವಕಾಶವೇ ಒಂದು ಗೌರವ!

Image
ಹೀಗೆಲ್ಲಾ ಮಾತನಾಡಲು ಸಿಕ್ಕ ಅವಕಾಶವೇ ಒಂದು ಗೌರವ🙏

ಉಪ್ಪಿಟ್ಟು ಗೊಣಗಾಟ ಮತ್ತು performance

Image
ಕೌಸಲ್ಯ ಸುಪ್ರಜಾ ರಾಮ ಎನ್ನುವ ಹೊತ್ತಿನಲ್ಲೇ ಕಿಟಕಿಯಿಂದ ಅವರ ಮನೆಯ ಉಪ್ಪಿಟ್ಟಿನ ಘಮ Good Morning ಎಂತು. ನೆನ್ನೆ ಉಳಿದ್ದದ್ದು ತಿಂದಂತೆ ಎನ್ನುತ್ತಾ ಆ ಶಾಲಿನಿ ಜಗತ್ತಿನಲ್ಲಿ ಇಷ್ಟವಾಗದ ಮೊದಲ ಮೂರು ತಿಂಡಿಗಳಲ್ಲಿ ಉಪ್ಪಿಟ್ಟು ಇದ್ದೆ ಇರುತ್ತೆ ಎಂದು ಹೇಳಿದ್ದು ನೆನಪಾಯ್ತು. ಉಪ್ಪಿಟ್ಟು ಎಂದರೆ ಮೈಯೆಲ್ಲಾ ಬಾಯಾಗಿಸಿಕೊಳ್ಳುತ್ತಿದ್ದ ಸೋದರತ್ತೆಯ ಮಗ ಈಗ ವೃದ್ಧಾಶ್ರಮದಲ್ಲಿ ಇದ್ದಾನೆ . ಉಹುಂ, ಉಪ್ಪಿಟ್ಟು ಒತ್ತುಶಾವಿಗೆ ಯಾವುದರದ್ದೂ preperation ಕೇಳಲ್ಲ ಜಗತ್ತು ಮೂಗಿಗೆ ಬರುವ ಘಮದ performance ಮಾತ್ರ ನೋಡುತ್ತೆ ಎನಿಸಿದಾಗ..... ಕೆಳಗಿನ ಲಿಂಕ್ ಕ್ಲಿಕ್ ಮಾಡಿ🙏

ಪರೀಕ್ಷೆ ಬರೆಯಿರಿ

Image
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಬದುಕು ಎದುರಿಸಿ.