Posts

Showing posts from 2023

Solo Travel ವಿಜಯಕರ್ನಾಟದಲ್ಲಿ

Image
 ಒಬ್ಬಂಟಿ ಪ್ರಯಾಣವೇ ಅತ್ಯದ್ಭುತ ಶಿಕ್ಷಕ. ಅದರಲ್ಲೂ ಪ್ರಯಾಣವು ನಾವು ಬಯಸುವಂತಹ ಪ್ರವಾಸವಾದರೆ ಅನುಭವದ ಅಗಾಧತೆಗೆ ಮಿತಿ ಇಲ್ಲ. ಎಷ್ಟೋ ಬಾರಿ ಒಂಟಿಯಾಗಿ ಪ್ರಯಾಣ ಮಾಡಿದ್ದರೂ, ಸ್ನೇಹಿತರ ಮತ್ತು ಕುಟುಂಬದ ಜೊತೆ ಪ್ರವಾಸ ಹೋದಾಗಲೂ ಸಹ ನನಗಾಗಿ ಸ್ವಲ್ಪ ಸಮಯವನ್ನು ಎತ್ತಿಟ್ಟುಕೊಳ್ಳುತ್ತೇನೆ. ಎಲ್ಲರ ಅಭಿರುಚಿ, ಆಸಕ್ತಿಯು ಒಂದೇ ಆಗಿರುವುದಿಲ್ಲ ಹಾಗಾಗಿ ನನಗೆ ವೈಯಕ್ತಿಕವಾಗಿ ಆಸಕ್ತಿ ಇರುವ ಜಾಗಗಳನ್ನು ನೋಡಲು ವಿಷಯಗಳನ್ನು ತಿಳಿದುಕೊಳ್ಳಲು ಕುಟುಂಬದ ಜೊತೆಯೊಳಗೂ ಸೋಲೋ ಪ್ರವಾಸವೊಂದು ಇದ್ದೇ ಇರುತ್ತದೆ. ಇದಕ್ಕೆ ನಾನಿಟ್ಟ ಹೆಸರು "ಜೊತೆಯೊಳಗೂ ಒಂದು ಸೋಲೋ ಟೈಮ್" .ಇಂತಹ ಒಂದು ಪ್ರವಾಸದಲ್ಲಿ ಸಿಕ್ಕ ಮರೆಯಲಾರದ ನೆನಪು ಎಂದರೆ ಅಲೆಕ್ಸ್ ಎನ್ನುವ ಪೊಲೀಸ್ ಅಧಿಕಾರಿ. ಆತ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿ. ಮಕ್ಕಳ ಹಕ್ಕುಗಳ ಬಗ್ಗೆ ಪಿ.ಎಚ್‌ಡಿ ಕೂಡ ಮಾಡುತ್ತಿದ್ದರು. ಎಲ್ಲಿ ಹೋದರೂ ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದು ಅದರ ಬಗ್ಗೆ ಕೆಲಸ ಮಾಡಿದವರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವುದು, ವೃತ್ತ ಪತ್ರಿಕೆಗಳನ್ನು ಓದುವುದು, ಸ್ಥಳೀಯ ಜನರನ್ನು ಮಾತನಾಡಿಸುವುದು, ಪುಸ್ತಕದಂಗಡಿಗೆ ಹೋಗುವುದು ನನ್ನ ಇಷ್ಟದ ಹವ್ಯಾಸ. ಆ ದಿನ ಲಂಡನ್ನಿನ ಬೀದಿಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದೆ.

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

Image
  ಬಯಲು ಸೀಮೆಯ ಎಲ್ಲರ ಬಾಯಲ್ಲೂ ಕುಂದಾಪುರ ಹೆಸರು ಹೊರಳುವಂತೆ ಮಾಡಿದ್ದ ಚೈತ್ರ ಕುಂದಾಪುರ ಈಗ ವಂಚನೆ ಪ್ರಕರಣದಲ್ಲಿ ಆರೋಪಿ. ಆಕೆ ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲು ಸಮಯವಿದೆ. ಆದರೆ ಆಕೆಯ ಮಾತುಗಾರಿಕೆ ಮತ್ತು ಅದರ ವಿಷಯ ಎಲ್ಲವನ್ನೂ ಕಂಡ ಜನಮಾನಸ ಆಗಲೇ ಅವಳನ್ನು ಅಪರಾಧಿ ಸ್ಥಾನದಲ್ಲಿ ಅನಾಯಸವಾಗಿ ನೋಡುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಆಗಲೇ ನ್ಯಾಯಾಲಯಕ್ಕೆ ಸಡ್ಡು ಹೊಡೇದ ಪ್ರಕ್ರಿಯೆಯನ್ನು ಶುರು ಮಾಡಿವೆ. ಇವೆಲ್ಲದರ ನಡುವೆ ಚೈತ್ರ ಎನ್ನುವ ಹೆಣ್ಣು ಮಗಳು ಹಲವಾರು ಯುವತಿಯರಿಗೆ ಪಾಠದ ಹಾದಿ ತೋರಿದ್ದು ಮಾತ್ರ ಸುಳ್ಳಲ್ಲ. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಸಮಿತಿಯ ಟೇಬಲ್ ಮುಂದೆ ಬಂದು ನಿಂತ ಯುವತಿಗೆ ಇನ್ನೂ 18 ತುಂಬಬೇಕಿತ್ತು. ಕೈ ಪೂರ್ತೀ ಸಿಂಹದ ಮುಖವುಳ್ಳ ಹನುಮಂತನ ಚಿತ್ರದ ಹಚ್ಚೆ. ಸ್ಪಷ್ಟ, ಸುಲಲಿತ ಕನ್ನಡ ಮಾತು. ಧರ್ಮ ಸಂರಕ್ಷಣೆ ಎನ್ನುವ ಅಫೀಮು ಕುಡಿಸಿದ್ದು ಅವಳ ದೊಡ್ಡಪ್ಪನ ಮಗ. ಇವಳೂ ಎಲ್ಲರ ಜೊತೆ ಊರೂರು ಸುತ್ತಿದಳು. ಹುಡುಗರ ಜೊತೆ ಜೈಕಾರ ಕೂಗುತ್ತಿದ್ದವಳಿಗೆ ಹೊತ್ತುಗೊತ್ತು ಇಲ್ಲದ ಜೀವನ ಅಭ್ಯಾಸ ಆಯಿತು. ತಂದೆ ಇದನ್ನು ವಿರೋಧಿಸಿ 10ನೆಯ ತರಗತಿಯನ್ನಾದರೂ ಓದಲಿ ಎನ್ನುವ ಆಸೆಯಿಂದ ಕೋಣೆಯೊಳಗೆ ಕೂಡಿ ಹಾಕುತ್ತಿದ್ದ. ಇವಳ ಧರ್ಮದಮಲು ಇಳಿಯಲೊಲ್ಲದು, ಅದಕ್ಕೆ ಸಾಥ್ ಕೊಡುತ್ತಿದ್ದ ಹುಡುಗರು. ಪದೇಪದೇ ಮನೆ ಬಿಟ್ಟು ಅವರೊಡನೆ ಹೋಗುತ್ತಿದ್ದಳು. ಮನೆಯವರು ಸೇರಿಸಿಕೊಳ್ಳದಾದರು. ಪ್ರೀತಿ ಮಾ

Message me for the book

Image
  "ಕಂಡಷ್ಟೂ ಪ್ರಪಂಚ " ಇದು ದೇಶ ವಿದೇಶಗಳ ವಿವಿಧ ಭಾಗಗಳಿಗೆ ಭೇಟಿ ಇತ್ತ ನನ್ನ ಪ್ರವಾಸ ಅನುಭವ ಕಥನ. ನಿಮ್ಮ ಶಾಲಾ ಕಾಲೇಜಿನ ಗ್ರಂಥಾಲಯಗಳಿಗೆ ತರಿಸಲು ವಿಳಾಸ ಮೆಸೇಜ್ ಮಾಡಿ. ಪುಸ್ತಕದ ಬೆಲೆ 300/- ರೂ Kandashtoo Mancha" This is my travel experience story of visiting different parts India and many other countries, written in Kannada language  To place order for the library of your school and colleges please message me the address. The price of the book is Rs. 300/-

ಕಂಡಷ್ಟೂ ಪ್ರಪಂಚ release

Image
  ಜೇನ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ Dr. ಜಿತೇಂದ್ರ ಶಾ, ಪ್ರೊ.ಗೀತಾ ಮಧುಸೂದನ್ ಮತ್ತು ಪ್ರೊ. ರಾಜೇಶ್ವರಿ ವೈ ಎಂ ಅವರುಗಳು ನೂರು ವಿದ್ಯಾರ್ಥಿಗಳ ಎದುರು ನನ್ನ ಪುಸ್ತಕ ಕಂಡಷ್ಟೂ ಪ್ರಪಂಚ ಪುಸ್ತಕವನ್ನು ಬಿಡುಗಡೆ ಮಾಡಿದರು. (12-08-2023) ಖುಷಿಯ ವಿಷಯ ಎಂದರೆ ಡಾ.ಶಾ ಅವರು " ನನಗೆ ಕನ್ನಡ ಓದಲು ಇನ್ನೂ ಬರುವುದಿಲ್ಲ ಆದರೆ ಓದಬಲ್ಲ ನನ್ನ ಸ್ನೇಹಿತರಿಗಾಗಿ ಈ ಪುಸ್ತಕ ಕೊಳ್ಳುತ್ತೇನೆ" ಎಂದದ್ದು ಮತ್ತು Ragging ಕಾನೂನು ಬಗ್ಗೆಯ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪ್ರವಾಸದ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆ ನಾನೇ ಸಾಕು ಎಂದು ಹೊರಟು ಬರುವವರೆಗೂ ಚರ್ಚೆ ಮಾಡಿದ್ದು.😍 ನಿಮಗೆ ಪುಸ್ತಕ ಬೇಕಿದ್ದಲ್ಲಿ ನಿಮ್ಮ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ.300/-

ಕಂಡಷ್ಟೂ ಪ್ರಪಂಚ ಕಂಡ ಬಾಗೆ

Image
  ದಿಗ್ಗಜ ಸಾಹಿತಿ Dr. ಶಾಂತಾ ನಾಗರಾಜ್ ಅವರು " ಕಂಡಷ್ಟೂ ಪ್ರಪಂಚ " ಪುಸ್ತಕದ ಬಗ್ಗೆ 👇 ಹೀಗೆ ಬರೆದಿದ್ದಾರೆ. Feeling ಖುಷಿ ಖುಷಿ....ನಿಮ್ಮ ಪ್ರತಿಗಾಗಿ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ 300/- " - ‘ ಕಂಡಷ್ಟೂ ಪ್ರಪಂಚ ‘ ಸಕತ್ತಾಗಿಯೇ ಪ್ರಪಂಚ ದರ್ಶನ ಮಾಡಿಸಿತು. ಅದೆಷ್ಟೊಂದು ವಿಚಾರಗಳಲ್ಲಿ ಬೆರಗುಗೊಂಡೆನೆಂದರೆ , ಅದರ ಪಟ್ಟಿ ಮಾಡಬೇಕು.  ನಿಮ್ಮ ಜೀವನೋತ್ಸಾಹಕ್ಕೆ ನಿಮ್ಮ ಚಾಲನ ಮತ್ತು ಧಾರಣ ಶಕ್ತಿಗೆ ನಿಮಗಿರುವ ಅಮೋಘವಾದ ಕುತೂಹಲಗಳಿಗೆ ನಿಮ್ಮ ಬರವಣಿಗೆಯ ಚೆಂದದ ಶೈಲಿಗೆ ಅತ್ಯಂತ ಸಣ್ಣವಿಷಯವೆನಿಸುವುದನ್ನೂ ಸ್ವಾರಸ್ಯವಾಗಿ ವಿಸ್ತರಿಸುವ ನಿಮ್ಮ ಕಲ್ಪನಾ ಸಾಮರ್ಥ್ಯಕ್ಕೆ ಎಲ್ಲಕ್ಕೂ ನಮೋನಮಃ ಎನ್ನದೇ ಬೇರೆ ದಾರಿಯೇ ನನಗೆ ಕಾಣುತ್ತಿಲ್ಲ.  ನನ್ನ ಇನ್ನೊಂದು ಅನುಭವವನ್ನು ಇಲ್ಲಿ ಹೇಳಲೇ ಬೇಕು. ಒಂದು ಪ್ರಪಂಚದ ಮ್ಯಾಪ್ ಇಟ್ಟುಕೊಂಡು, ಈ ಪುಸ್ತಕದಲ್ಲಿನ ಅಧ್ಯಾಯಗಳ ಊರನ್ನು ಗುರುತಿಸುತ್ತಾ , ಒಂದಕ್ಕೊಂದು ಗೆರೆ ಎಳೆದು ಸೇರಿಸಿದರೆ , ಕೊನೆಯ ಅಧ್ಯಾಯ ಬರುವಹೊತ್ತಿಗೆ ಮ್ಯಾರಿನ ತುಂಬಾ ಗೀಚುಗಳಾಗಿ , ಅದರೊಳಗಿನಿಂದ ಸೈಕಲ್ ರಿಕ್ಷಾ ಹಿಡಿದ ಅಂಜಲಿ ರಾಮಣ್ಣ ನಸುನಗುತ್ತಿರುತ್ತಾರೆ ! ಇಡೀ ಪುಸ್ತಕ ಓದಿದ ಮೇಲೆ ರೋಲರ್ ಕೋಸ್ಟರ್ ನಲ್ಲಿ ಅಡ್ಡಡ್ಡ ಉದ್ದುದ್ದ ತಿರುಗಿದಂತಾಗಿ ತಲೆ ಸುತ್ತುವುದು ಖಂಡಿತಾ! ನಿಮ್ಮ ತುಂಟ ಮನ ಬೇಕೆಂದೇ ಚಾಪ್ಟರ್ ಗಳನ್ನು ಹೀಗೆ ಜೋಡಿಸಿರಬಹುದೆನ್ನುವ ಅನುಮಾನ ನನಗೆ.  ಅಭಿನಂದನೆಗಳು ಮತ್ತು ಪ್ರೀ

ಮತ್ತೊಮ್ಮೆ ಕಂಡಷ್ಟೂ ಪ್ರಪಂಚ ಬಗ್ಗೆ

Image
  ಲಿಮ್ಕಾ ದಾಖಲೆ ಹೊಂದಿರುವ ಸಾಹಿತಿಗಳ ಕುಟುಂಬದ ಉದಯ್ ಕುಮಾರ್ ಹಬ್ಬು ಅವರು ನನ್ನ ಕಂಡಷ್ಟೂ ಪ್ರಪಂಚ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.... "ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ವಕೀಲರು, ಅಂಲಣಕಾರರು ಮತ್ತು ಲೇಖಕರೂ ಆದ ಅಂಜಲಿ ರಾಮಣ್ಣ ಈ ವಿಶೇಷ್ಟವಾದ ಪ್ರವಾಸಿ ಕಥನ ಸಾಹಿತ್ಯ ಕೃತಿಯನ್ನು ಕಳಿಸಿದ್ದಾರೆ‌ ವಿಶೇಷ್ಟ ಯಾಕೆ ಎಂದರೆ ಇತರ ಪ್ರವಾಸಿ ಕಥನಗಳಂತೆ ಒಂದೇ ದೇಶದ ಪ್ರವಾಸ ಕಥನವಲ್ಲ. ಇಡೀ ಪ್ರಪಂಚಾದ್ಯಂತ ಇರುವ ವಿವಿಧ ದೇಶಗಳ ಹಾಗೂ ನಮ್ಮ‌ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗಿ ತನ್ನದೆ ರೀತಿಯಿಂದ ಆ ಸ್ತಳಗಳನ್ನು ವೀಕ್ಷಿಸಿ ಅಲ್ಲಿನ ವಿಶಿಷ್ಟತೆಗಳ ಕುರಿತು ತನ್ನದೆ ಅನುಭವದ ಮಾತುಗಳಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಿಸುವುದು. ಇದರಿಂದ ಓದುಗರಿಗೆ ಆಗುವ ಪ್ರಯೋಜನವೇನೆಂದರೆ ಆ ತಾಣಗಳಿಗೆ ಹೋಗಿನೋಡುವ ಪ್ರೇರಣೆ ನೀಡುತ್ತದೆ. ಅಷ್ಟೆಲ್ಲ ದೇಶಗಳಿಗೆ ನಮ್ಮದೆ ದೇಶದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಿಲ್ಲದಿರುವವರಿಗೆ  ಮನೆಯಲ್ಲೆ ಕುಳಿತು ಆ ಸ್ಥಳಗಳ ಸ್ವಾರಸ್ಯಕರ ಮಾಹಿತಿಗಳನ್ನು ಆಸ್ವಾದಿಸಿ ನಮ್ಮ ಜ್ಞಾನಸಿಂಧು ಕೋಶಕ್ಕೆ ಸೇರಿಕೊಂಡ ಧನ್ಯತೆ ನಮ್ಮದಾಗುತ್ತದೆ ಅಂಜಲಿಯು ಏಕಾಂಗಿಯಾಗಿ ತಾನು ಓದಿದ ಸ್ಥಳಗಳಿಗೆ  ಪ್ರವಾಸದ ಅಚ್ಚುಕಟ್ಟು ಯೋಜನೆಗಳೊಂದಿಗೆ ಹೊರಟುಬಿಡುತ್ತಾರೆ. ಅವರು ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ದೇಶ ವಿದೇಶಗಳಿಗೆ ಪ್ರವಾಸ ತಾಣಗಳಿಗೆ ಹೋಗುವವರಿಗೆ ಖಚಿತವಾದ ಮಾರ್ಗದರ್ಶಿ ಸಲಹೆಗಳನ್ನು ತಮ್ಮ ಪ್ರವಾಸಗಳ ಅನುಭವ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್

Image
 ಉದ್ಯೋಗಸ್ಥ ಮಹಿಳೆಯರಿಗಾಗಿ ಸರ್ಕಾರ ನಡೆಸುತ್ತಿರುವ ಹಾಸ್ಟೆಲ್ ಸೌಕರ್ಯದ ಬಗ್ಗೆ DD ಚಂದನದಲ್ಲಿ ದಿನಾಂಕ 07-08-2023 ರಂದು ಓ ಸಖಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಪೂರ್ಣ ಮಾಹಿತಿ ನೀಡಲಾಯಿತು. ವಿಷಯ ತಿಳಿಯಲು ಈ ವೀಡಿಯೋ ನೋಡಿ.  

Garden of caves -Meghalays

Image
  ಅದೊಂದು ದಟ್ಟ ಅರಣ್ಯ. ಅರಣ್ಯ ಎಂದಮೇಲೆ ನೂರೆಂಟು ರಹಸ್ಯವೂ ಜೊತೆಯಾಗಿತ್ತು. ಎಂಟು ಎಕರೆಗಳ ಜಾಗದಲ್ಲಿ ಪರ್ವತದಿಂದ ಇಳಿದು ಪ್ರಪಾತದಲ್ಲಿ ಪ್ರಕೃತಿ ಗುಹೆಯಾಗಿ ಮೈಚಾಚಿದ್ದಳು. ಗುಹೆ ಎಂದರೆ ಬರಿಯ ಗುಹೆಯಲ್ಲವೋ ಜಾಣ ಎನ್ನುತ್ತಾ ಒಳಗೆ ಹನ್ನೊಂದು ಜಲಪಾತಗಳಲ್ಲಿ ಹರಿಯುತ್ತಿದ್ದಳು. ಎಪ್ಪತ್ತೆರಡು ಬೆಟ್ಟೇಣುಗಳಲ್ಲಿ ಗುಟ್ಟಾಗಿದ್ದಳು. ಹತ್ತಾರು ತಾಮ್ರ ಬಣ್ಣದ ಮೂಲವೇ ಕಾಣದಂತೆ ನೇತಾಡುವ ಕಲ್ಪದರುಗಳ ಜೋಕಾಲಿಯಾಗಿದ್ದಳು. ಪಕ್ಕದಲ್ಲಿ ಹಸಿರಾಗಿ ಹಬ್ಬಿದ್ದಳು. ಹಕ್ಕಿಯ ಕಲರವಕ್ಕೆ ತಾವು ನೀಡುತ್ತಾ ನಡುನಡುವೆ ಬೆಳಕಿನ ಕಿಂಡಿಯಾಗಿ ದೂರದ ಆಕಾಶ ತೋರುತ್ತಿದ್ದಳು. ನುಣುಪು ಚಿಕ್ಕ್ಬಂಡೆಯಲ್ಲಿ ತೂಕಡಿಸುತ್ತಾ ಹಾಸಿಗೆಯಾಗಿದ್ದಳು ಅದಕ್ಕೆ ಸಪೂಟಾದ ಕಲ್ಲನ್ನೇ ದಿಂಬಿನ ಆಕಾರದಲ್ಲಿ ಅರಳಿಸಿದ್ದಳು. ದುಂಬಿಗಾಗಿ ಹೂವಾಗಿದ್ದಳು. ಹೃದಯಾಕಾರದ ಹಾಸುಕಲ್ಲಿನಲ್ಲಿ ನೀರು ನಿಲ್ಲಿಸಿ ಕನ್ನಡಿಯಾಗಿದ್ದಳು. ಹೀಗೆಲ್ಲಾ ಇದ್ದ ಪ್ರಕೃತಿ ಸಿಕ್ಕಿದ್ದು ಖಸಿ ಪರ್ವತಶ್ರೇಣಿಯ ನಟ್ಟ ನಡುವಿನಲ್ಲಿ. ಚಿರಾಪುಂಜಿಯಿಂದ ಹತ್ತು ಕಿಲೋಮೀಟರ‍್ಗಳ ಅಂತರದಲ್ಲಿ. ಮೇಘಾಲಯದಲ್ಲಿ. ನೂರಕ್ಕೂ ಮಿಗಿಲಾದ ಗುಹೆಗಳನ್ನು ತನ್ನೊಳಗೆ ಇರಿಸಿಕೊಂಡಿರುವ ರಾಜ್ಯ ಮೇಘಾಲಯ. ಏಕಶಿಲಾ ಗುಹೆ ಅಂತ ಒಂದು ಜಾಗವನ್ನು ತೋರಿಸಿದ್ದ ಚಾಲಕ ಬುರಿತ್. ಯಾಕೋ ಪ್ರವಾಸಿಗರನ್ನು ಉತ್ಪ್ರೇಕ್ಷೆಯಲ್ಲಿಯೇ ಕರೆಯುತ್ತಿದೆ ಎನ್ನಿಸಿತು ಆ ಜಾಗ. “ಏನು ಬುರಿತ್ ಅಷ್ಟು ದೂರದಿಂದ ಬಂದವಳನ್ನು ಈ ಗುಹೆ ತೋರಿಸಿ ನಿರಾಸೆ ಮ

Talk in News 1st TV

Image
 ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂದು ಬ್ರಹ್ಮಚಾರಿಗಳು ಬಯಸಿಯೂ ಹೆಣ್ಣು ಸಿಗದೆ ಒಂಟಿ ಕಣ್ಣಲ್ಲಿ ಅಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು News 1st TV ಯವರು ಮೊನ್ನೆ (18-06-2023) ಕೇಳಿದಾಗ ಇಷ್ಟು ಹೇಳಿದೆ. ಸಮಯ ಆದಾಗ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.  https://youtu.be/X8S5pnXQJDc

Special Markets of Chirapunji

Image
    ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು.   ಶಿಲ್ಲಾಂಗ್ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ.   ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ನಿಂತಿದ್ದೆ ಐವ್

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

Image
  ಎರಡನೆಯ ಬಾರಿಗೆ ಈ ಮಕ್ಕಳನ್ನು ರಸ್ತೆಯಲ್ಲಿ ಸಿಕ್ಕರು ಎನ್ನುವ ಕಾರಣಕ್ಕೆ ಪೋಲೀಸರು ತಂದು ನಿಲ್ಲಿಸಿದ್ದರು. ಕಂಕುಳಲ್ಲಿ ಒಣಗಿದ ಪಿಳ್ಳೆಯೊಂದನ್ನು ಎತ್ತಿಕೊಂಡು, ಸಿಂಬಳ ಸುರಿಸುತ್ತಾ ತಪ್ಪು ಹೆಜ್ಜೆ ಇಡುತ್ತಿದ್ದ ಇನ್ನೊಂದು ಮಗುವೊಂದನ್ನು ದರದರ ಎಳೆದುಕೊಂಡು ಅಳುತ್ತಾ ಬಂದು ನಿಂತಳು ತಾಯಿ. ಗಂಡನನ್ನು ಕರೆದುಕೊಂಡು ಬರಲು ತಾಕೀತು ಮಾಡಲಾಯಿತು. ಅದೇ ಸ್ಥಿತಿಯಲ್ಲಿ ಇಬ್ಬರೂ ಬಂದು ನಿಂತರು. ಹಿಂದಿನ ರಾತ್ರಿ ಅವನು ಮದ್ಯದಲ್ಲಿ ಮಿಂದೆದ್ದಿದ್ದ ಎನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಸಿಟ್ಟು ನೆತ್ತಿಗೇರಿತು. “ಸಾಕಲು ಯೋಗ್ಯತೆ ಇಲ್ಲದಿದ್ದ ಮೇಲೆ ಅದ್ಯಾಕೆ ಮಕ್ಕಳು ಮಾಡಿಕೊಳ್ಳುತ್ತೀರ? ಏನಮ್ಮ ನಿನಗೆ ನಾಚಿಕೆ ಆಗಲ್ಲ್ವಾ?” ಅಂತ ಜೋರು ದನಿ ಮಾಡಿದೆ. ಕೂಡಲೇ ಗೊಳೋ ಅಂತ ಅವಳ ದನಿ ನನ್ನದಕ್ಕಿಂತ ದುಪ್ಪಟ್ಟಾಯ್ತು. “ನಾಚಿಕೆ ಏನ್ ಮೇಡಂ ಜೀವನಾನೇ ಸಾಕಾಗಿದೆ. ಈ ಮಕ್ಕಳಿಗೆ ಅನ್ನಕ್ಕೆ ಒಂದು ದಾರಿ ಮಾಡಿ ಕೊಡಿ ನೀವು ಇವನನ್ನೂ ಬಿಟ್ಟು ಎಲ್ಲಾದರು ಹೋಗಿ, ದುಡ್ಕೊಂಡು ತಿನ್ನ್ಕೋತೀನಿ” ಎನ್ನುತ್ತಾ ಅಳು ಮುಂದುವರೆಸಿದಳು. ಆರು ವರ್ಷಗಳ ಹಿಂದೆ ಮದುವೆಯಾದವಳ ಗಂಡ ಕುಡುಕ. ಎರಡು ಹೆಣ್ಣು ಮಕ್ಕಳನ್ನು ಕೈಗಿತ್ತು ಅಪಘಾತದಲ್ಲಿ ಸತ್ತಿದ್ದ. “ಗಂಡು ದಿಕ್ಕಿಲ್ಲದೆ ಹೆಂಗೆ ಬಾಳ್ವೆ ಮಾಡೋದು ಮೇಡಂ” ಎಂದಳು. ಅದಕ್ಕೇ ಹೀಗೆ ಮುಂದೆ ನಿಂತಿದ್ದವನನ್ನು ಮದುವೆಯಾಗಿದ್ದಳು. “ ಇವನಿಗೆ ಅವರಪ್ಪ ಕೊಟ್ಟಿರೋ ಮನೆ ಇದೆ ಮೇಡಂ. ನೀನು ಮಕ್ಕಳನ್ನು ನೋಡಿಕೊಂಡು ಮನೆಯ

ಮಹಿಳೆ - Woman as leader in ವಿಜಯಕರ್ನಾಟಕ

Image

ಹಂದಿಜೋಗಿ ರಾಮಕ್ಕ ಭೇಟಿ - Meet with Handijogi Ramakka

Image
 ನಮ್ಮ ಭೇಟಿಯಲ್ಲಿ ಹಂದಿ ಜೋಗಿ ರಾಮಕ್ಕ ಹೇಳಿದ್ದು ಹಾಡಿದ್ದು.... ಆಕೆಯ ಕೈಯಲ್ಲಿ ಇರುವುದು ಅವರ ದೇವರಂತೆ. ಬೆಳ್ಳಿ ನಾಣ್ಯದ ಮೇಲೆ ಬೋಳು ತಲೆಯಂತಹ ಆಕೃತಿ. ಅವರುಗಳು ನಮ್ಮ ಹಾಗೆ ಬೇರೆ ವಿಗ್ರಹಗಳ ಆರಾಧಕರಲ್ಲ. (ಈಗ ಬಹಳ ಬದಲಾಗಿದ್ದಾರೆ). ಅವರ ದೇವರುಗಳು ಯಾವಾಗಲೂ ಪೆಟ್ಟಿಗೆಯಲ್ಲಿ ಭದ್ರ. ವರ್ಷಕ್ಕೊಮ್ಮೆ ಯುಗಾದಿಯ ದಿನ ಹೊರ ತೆಗೆದು ಪೂಜಿಸುತ್ತಾರೆ. ಪ್ರತೀ ಮದುವೆಯಲ್ಲೂ ಮನೆತನದ ಆಸ್ತಿಯಾಗಿ ಇದನ್ನು ಮುಂದಿನವರಿಗೆ ಕೊಡುತ್ತಾರಂತೆ. ಇವರುಗಳು ಹಂದಿಗಳಿಗಾಗಿ ಜೀವ ಕೊಡುತ್ತಾರೆ. ಒಟ್ಟಿಗೆ ಮಲಗುತ್ತಾರೆ, ಒಂದೇ ತಾಟಿನಲ್ಲಿ ಉಣ್ಣುತ್ತಾರೆ. ಕಳೆದ ಅದೆಷ್ಟೋ ತಲೆಮಾರುಗಳಿಂದ ಖಾಯಿಲೆಯಿಂದ ಯಾರೂ ಸತ್ತಿಲ್ಲ ಅವರ community ಯಲ್ಲಿ, ಅದಕ್ಕೆ ಹಂದಿಯೆ ಕಾರಣ ಎಂದು ನಂಬುತ್ತಾರೆ. ಈಕೆಯOತೂ ತನ್ನ ಹಂದಿಗಳನ್ನು ಶುಚಿತ್ವ ಆರೋಗ್ಯ ಅಂತೆಲ್ಲಾ ಕಾರ್ಪೊರೇಷನ್ ಅವರು ಹೊಡೆದುಕೊಂಡು ಹೋದಾಗ್ಲಿಂದ ಇಡೀ communityಗಾಗಿ ಹೋರಾಟ ಮಾಡುತ್ತಿದ್ದಾರೆ. ಒಂದು ಹಂದಿ ಎಷ್ಟು ಬೆಲೆ ಬಾಳುತ್ತದೆ, ಹೀಗೆ ವಕ್ಕಲೆಬ್ಬಿಸುವ ಹಿಂದೆ ಇರುವ ರಾಜಕೀಯ ಎಲ್ಲವನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಇವರ ಮಕ್ಕಳುಗಳನ್ನು ಶಾಲೆಗೆ ತರಲು ಕಾರ್ಯಕರ್ತರು ಹರಸಾಹಸ ಪಟ್ಟಿದ್ದಾರೆ. ಬಾಣಂತಿಗೆ ಗುಡಿಸಲಿನಿಂದ ಹೊರಗೆ ಗುಡ್ಲು ಹಾಕುವುದು ಸೇರಿ ಇನ್ನೂ ಕೆಲವು ವಿದ್ಯಾವಂತರಿಗೆ ಒಗ್ಗದ ಸಂಪ್ರದಾಯಗಳು ಈಗಲೂ ಮುಂದುವರೆಯುತ್ತಿವೆ. ನಾನು ಹೋದಾಗ ಒಂದು ಗುಡ್ಲಿನ ಮುಂದೆ ಮೂರು ದಿನದ ಕೂಸ

On Jeans Talk book

Image
 ವಿಜಯಕರ್ನಾಟಕ ಪತ್ರಿಕೆಯಲ್ಲಿ ಸತತವಾಗಿ 180 ವಾರಗಳು ಬರೆದ ಅಂಕಣ " ಜೀನ್ಸ್ ಟಾಕ್ "  ಮೊದಲ 40 ಅಂಕಣಗಳ ಪುಸ್ತಕದ ಬಗ್ಗೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಡಾ ನಾ ಸೋಮೇಶ್ವರ ಅವರು ವಿವರವಾಗಿ 4 ನಿಮಿಷಗಳ ಅಭಿಪ್ರಾಯ ತಿಳಿಸಿದ್ದಾರೆ. ದಯವಿಟ್ಟು ಕೇಳಿ. ಪುಸ್ತಕ ಬೇಕಿದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.🙏

Award for Travelogue ಬೆಳಕಿನ ಸೆರಗು

Image
  ಅರುಣಾಚಲ ಪ್ರದೇಶದ ಬಗ್ಗೆ ಪ್ರವಾಸಕಥನ " ಬೆಳಕಿನ ಸೆರಗು" ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದಿಂದ ನೀಡಿದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನದ ಸಂದರ್ಭ.

About Sandipani ashram

Image
ಇವತ್ತಿನ ಆಂದೋಲನ ಪತ್ರಿಕೆಯಲ್ಲಿ...ಓದಿ ಅಭಿಪ್ರಾಯ ತಿಳಿಸಿ 🙏  ’ಊಟಾ ಊಟಾ’ ಎಂದು ಹಪಹಪಿಸುತ್ತಿದ್ದವಳನ್ನು ಚಾಲಕ ಪವನ್ “ಏನ್ಮೇಡಂ ನಿಮ್ಮಂಥವರು ಜ್ಞಾನದ ಭೂಕ್ (ಹಸಿವು) ಅನ್ನಬೇಕು ಅದು ಬಿಟ್ಟು ಹೀಗೆ ಊಟಾ ಊಟಾ ಅನ್ನುತ್ತಿದ್ದಿರಲ್ಲ” ಎಂದು ರೇಗಿಸುತ್ತಾ ಗಾಡಿಯನ್ನು ರೋಂಯ್ ಅಂತ ನಿಲ್ಲಿಸಿ, ಇಳಿಯಲು ಹೇಳಿದ. ಪಕ್ಕದ ಕಾಂಪೌಂಡಿನ ದೊಡ್ಡ ಕಮಾನಿನ ಮೇಲೆ ಬರೆದಿತ್ತು ’ಮಹರ್ಷಿ ಸಾಂದಿಪನಿ ಆಶ್ರಮ್”. ಕೃಷ್ಣ, ಬಲರಾಮ, ಸುಧಾಮ ಓದಿದ ಗುರುಕುಲ. ನಾನೋದಿದ ಮೈಸೂರಿನ ಶಾಲೆ ಅವಿಲಾ ಕಾನ್ವೆಂಟಿನ ಮುಖ್ಯ ಗೇಟಿನ ಕಮಾನೂ ಹೀಗೇ ಇತ್ತು. ಎಲ್ಲಾ ಶಿಕ್ಷಕರೂ ನಿಸ್ಪೃಹವಾಗಿ ನನ್ನನ್ನೂ ಕೃಷ್ಣನ ಅರ್ಧದಷ್ಟಾದರೂ ಜಾಣೆ ಮಾಡಬೇಕೆನ್ನುವ ಪ್ರಯತ್ನ ನಡೆಸಿ ಸೋತಿದ್ದನ್ನು ನೆನೆಸಿಕೊಂಡೇ ಒಳಹೊಕ್ಕೆ. ಉಜ್ಜನಿಯ ಸಾಂದಿಪನಿ ಆಶ್ರಮದಲ್ಲಿ ಆ ದಿನ ಹೆಚ್ಚಿನ ಜನರಿರಲಿಲ್ಲ.  ಕುಟಿರಾಕಾರದ ಸಿಮೆಂಟಿನ ಅಂಗಳದೊಳಗಿನ ಗೋಡೇಗಳ ಮೇಲೆಲ್ಲಾ ಕೃಷ್ಣ ಕಲಿತ ಹದಿನಾಲ್ಕು ವಿದ್ಯೆಗಳನ್ನು ಬಣ್ಣಬಣ್ಣದಲ್ಲಿ ರಚಿಸಿದ್ದಾರೆ. ಗಾಢ ಬಣ್ಣಗಳು ಈಗಿನ ಆಧುನಿಕ ಶಾಲೆಗಳನ್ನು ಹೋಲುತ್ತಿದ್ದರೂ ಕೃಷ್ಣಭಾವ ಕೊಡುವುದರಲ್ಲಿ ಸೋಲುವುದಿಲ್ಲ. ಆ ಕೋಣೆಯ ದೊಡ್ಡ ಆಕರ್ಷಣೆ ಎಂದರೆ ಗಿರಿಧಾರಿ ಕಲಿತನೆನ್ನಲಾದ ಹದಿನಾಲ್ಕು ವಿದ್ಯೆಗಳು ಯಾವುವು ಎನ್ನುವ ಪಟ್ಟಿಯೊಂದನ್ನು ಬಾಗಿಲಿನ ಹಿಂದಿನ ಗೋಡೆಯ ಮೇಲೆ ತೂಗು ಹಾಕಿರುವುದು. ನಾಲ್ಕು ವೇದಗಳು, ಕಲ್ಪಗಳು, ತಂತ್ರಜ್ಞತೆ, ವ್ಯಾಕರಣ, ಪುರಾಣ, ಜ್ಯೋತಿಷ್ಯ, ಖಗೋ

Women's day at Samrakshana

Image
 ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಜೂಗನಹಳ್ಳಿ, ರಾಜಾಜಿನಗರ ಇಲ್ಲಿ ಸಂರಕ್ಷಣಾ ಸಂಸ್ಥೆಯವರು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಈ ದಿನ.... ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗ ಮಕ್ಕಳಿಗೆ ಒಂದು ಗಿಡ ಕೊಟ್ಟು ಇದನ್ನು ಚೆನ್ನಾಗಿ ಬೆಳೆಸಿ, ಬಂದು ನೋಡುತ್ತೇನೆ ಎಂದು ಹೇಳಿದ್ದೆ, ಮರೆತಿದ್ದೆ. ಈ ದಿನ ಚಿಲ್ಟಾರಿಗಳು ತಾವೇ ಕೈ ಹಿಡಿದು ಕರೆದುಕೊಂಡು ಹೋಗಿ ನಳನಳಿಸುತ್ತಿದ್ದ ಗಿಡ ತೋರಿಸಿ ಕುಣಿದರು. ಹೌದಲ್ಲ, ಅಕ್ಷರ ಗಿಡ ಎರಡೂ ಅಕ್ಕರೆ ತೋರಿದಷ್ಟೂ ನಮ್ಮವೇ ಆಗುತ್ತಾ ಹೋಗುವ ಪರಿ ಚಂದ, ಚಂದ ಥೇಟ್ ಮಕ್ಕಳಂತೆ. 12-03-2023 #FamilyCourtಕಲಿಕೆ

On Period leave

Image
  ಅವತ್ತು ಎವಿಡೆನ್ಸ್ ಆಕ್ಟ್ ನ ಅಂತಿಮ ಪರೀಕ್ಷೆ. ಈ ಬಾರಿ ಅವನಿಗಿಂತ ಎರಡಾದರೂ ಮಾರ್ಕ್ಸ್ ಹೆಚ್ಚು ತೆಗೆಯಲೇ ಬೇಕು ಎಂದುಕೊಂಡು ಓದಿದ್ದೆ. ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ವಿಸ್ಪರ್ ಧರಿಸಿಯೇ ಹೋಗಿದ್ದೆ. ಅದು ಶುರುವಾಗುವಷ್ಟರಲ್ಲಿ ಪರೀಕ್ಷೆ ಮುಗಿದಿರತ್ತೆ ಎನ್ನುವ ಹರೆಯದ ಹುಮ್ಮಸ್ಸಿನ ನಂಬಿಕೆ. ಬರೆಯಲು ಶುರು ಮಾಡಿ 20 ನಿಮಿಷವೂ ಇಲ್ಲ ಶುರುವಾಯ್ತು ಬೊಳಕ್ಬೊಳಕ್! ಆ ದಿನಗಳಲ್ಲಿ ಬಹಳ ಹೊಟ್ಟೆನೋವು ಬರುತ್ತಿತ್ತು, ಕಣ್ಣ್ಕತ್ತಲಿಡುತ್ತಿತ್ತು. ಕೈಕಾಲು ತಣ್ಣಗಾಗುತ್ತಿದ್ದವು, ಒದ್ದಾಡಿ ಒದ್ದಾಡಿ ಒದ್ದಾಡಿದ ನಂತರ ವಾಂತಿ ಆಗುತ್ತಿತ್ತು. ಕೂಡಲೇ ನಾನಾಗ ಪೊರೆ ಕಳಚಿದ ಹಾವು, ಸರಬರನೆ ನನ್ನ ಬಿಟ್ಟರೆ ಜಗತ್ತಿಲ್ಲ ಎಂದು ಎದ್ದು, ಕೂತು, ಓಡಿ ಹಾರಾಡುತ್ತಿದ್ದೆ. ಬರೆಯುತ್ತಿದ್ದ ಹಾಳೆ ಮೇಲೆ ಪೆನ್ನು ದಬಕ್ ಅಂತು. ಕಣ್ಣು ಮೇಲ್ಮೇಲಾಗುತ್ತಿದೆ. “ಸರ್, ನನಗೆ ಬ್ರೇಕ್ ಬೇಕು “ ಎಂದಿದ್ದಷ್ಟೇ ಧೊಪ್ಪ್ ಅಂತ ಬಿದ್ದೆ. ಮುಂದಿನ ಕ್ಷಣದಲ್ಲಿ ಪಕ್ಕದಲ್ಲಿಯೇ ಇದ್ದ ಸ್ಟ್ಯಾಫ್ ರೂಮ್‍ನ ನೆಲದ ಮೇಲಿನ ಹಾಸಾಗಿದ್ದೆ. ಸಹಾಯಕ ಪ್ರಭುಸ್ವಾಮಿ ನೀರು ಕೊಡುತ್ತಿದ್ದ. ಸಿದ್ದ್ಲಿಂಗು ಪಪ್ಪನಿಗೆ ಫೋನ್ ಮಾಡುತ್ತಿದ್ದ. ಪೊಲಿಟಿಕಲ್ ಸೈನ್ಸ್ ಅಧ್ಯಾಪಕ ರಾಜಣ್ಣ ಅವರು “ಈಗಿನ ಕಾಲದ ಹುಡುಗೀರು ಪೀರಿಯಡ್ಸ್ ಮುಂದೂಡಲು ಏನೇನೋ ಮಾತ್ರೆ ತೊಗೋತಾರೆ ಅದಕ್ಕೆ ನೋಡಿ ಹೀಗೆಲ್ಲಾ ಆಗತ್ತೆ” ಎಂದು ಹೇಳುತ್ತಿರೋದು ಕೇಳಿಸುತ್ತಿದೆ. “ಇಲ್ಲಾ ಇಲ್ಲಾ ಇಲ್ಲ ನಾನು ಮಾತ್ರೆ ಗ

Child Rights Trust

Image
 ಮಕ್ಕಳ ಹಕ್ಕುಗಳು ಎಂದರೆ ಅತ್ಯವಶ್ಯಕವಾಗಿ ಹಾಗೂ ಅನಿವಾರ್ಯವಾಗಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿಗೆ ಬರುವುದು ಸಿಆರ್‌ಟಿ Child Rights Trust - ಈ ಸಂಸ್ಥೆಯ ಒಡನಾಟವನ್ನು ಇಟ್ಟುಕೊಳ್ಳುತ್ತಾ, ಇದರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಆಸೆಗೂ ದುರಾಸೆಗೂ ನಡುವೆ ಇರುವ ತೆಳುವಾದ ಗೆರೆಯನ್ನು ಕಡೆಗಣಿಸಿ, " ಇಂತಹ ಒಂದು ಸಂಸ್ಥೆ ನನ್ನದಾಗಬೇಕು" ಎನ್ನುವ ಕನಸನ್ನು ಮೌನದಲ್ಲಿಯೆ ಕಂಡಿದ್ದೆ. ಬ್ರಹ್ಮಾಂಡಕ್ಕೆ ಕೇಳಿಸಿರಬೇಕು ಆ ಕನಸು. ಅದಕ್ಕೇ ಇರಬೇಕು ಈ ಕ್ಷೇತ್ರದಲ್ಲಿ ನನ್ನ ಗುರುಗಳು ಮಾರ್ಗದರ್ಶಕರು ಆದ ಡಾಕ್ಟರ್ ವಾಸುದೇವ ಶರ್ಮಾ ಅವರು ನನ್ನನ್ನು ಅತ್ಯಂತ ವಿಶ್ವಾಸದಿಂದ, ಕೆಲವು ತಿಂಗಳುಗಳ ಹಿಂದೆಯಿಂದ CRT ಯ ಟ್ರಸ್ಟೀ ಮಾಡಿಕೊಂಡಿದ್ದಾರೆ. ತಿಂದುಂಡ ಮನೆಗೆ ಧನ್ಯವಾದ ಹೇಳಲು ಪದಗಳದ್ದು ಅದೆಷ್ಟು ಕೃಪಣತೆ!   ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ತನ್ನನ್ನು ವಿಭಿನ್ನವಾಗಿ, ವಿಶೇಷವಾಗಿ ಗುರುತಿಸಿಕೊಂಡಿರುವ CRT "ಎಲ್ಲಾ ಮಕ್ಕಳಿಗೂ ಎಲ್ಲಾ ಹಕ್ಕುಗಳು" ಎನ್ನುವ ಧ್ಯೇಯದೊಂದಿಗೆ ಮಕ್ಕಳ ಹಕ್ಕುಗಳಿಗೆ ಕರ್ನಾಟಕದಲ್ಲಿ ತಂದೆಯ ಬೆಂಬಲ, ತಾಯಿಯ ಮಿಡಿತ ನೀಡುತ್ತಾ ಬಂದಿದೆ.  ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಯಿಂದ ಹೊರಗೆ ತರುವುದು, ಬಾಲ್ಯ ವಿವಾಹಕ್ಕೆ ಒಳಗಾದ ಹದಿಹರಿಯದ ಹೆಣ್ಣು ಮಕ್ಕಳ ಪೋಷಣೆ ಮತ್ತು ಪೌಷ್ಟಿಕಾಂಶ ಹಾಗೂ ಇತರೆ ಅಭಿವೃದ

March ಮತ್ತು ಮಹಿಳೆ

Image
 ಮಾರ್ಚ್ ಎಂದರೆ ಹೀಗೆ, ಬರಿ ಮಾತು ಪೂರ್ತೀ ತಿಂಗಳು.Hope this too would help someone , somewhere. ಮಹಿಳಾ ದಿನಾಚರಣೆಗೆ ಅರ್ಥ ಬರಲಿ, ಬಲ ತಾಗಲಿ 🌻

Legal awareness JJ Nagar

Image
 ಒಬ್ಬ ಪೊಲೀಸ್ ಅಧಿಕಾರಿ ತನ್ನ ವ್ಯಾಪ್ತಿ ಪ್ರದೇಶದ ಮುಖ್ಯ ಸಮಸ್ಯೆಯನ್ನು ಗುರುತಿಸಿ ಅದರ ಬಗ್ಗೆ ಅಲ್ಲಿನ ಹದಿಹರೆಯದವರಿಗೆ ಕಾನೂನು ಅರಿವು ಮೂಡಿಸುವಂತಹ ಕಾರ್ಯಕ್ರಮ ಏರ್ಪಡಿಸಲು, ಇಲಾಖೆ ಮಟ್ಟದಲ್ಲಿ, ಸಮುದಾಯದೊಡನೆ ಎಷ್ಟೆಲ್ಲಾ ಕೆಲಸ ಮಾಡಿರಬೇಕು ಮತ್ತು ನಿಜಾರ್ಥದಲ್ಲಿ ಸಮಾಜದ ಬಗ್ಗೆ ಅದೆಷ್ಟು ಕಾಳಜಿ ಇಟ್ಟುಕೊಂಡಿರಬೇಕು. JJ ನಗರ , ಬೆಂಗಳೂರು ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಇಂದಿಗೂ ಇರುವ ದೊಡ್ಡ ಸಮಸ್ಯೆ ಎನ್ನುವುದನ್ನು ಅನುಭವದ ಮೂಲಕ ಕಂಡುಕೊಂಡಿರುವ ಸಬ್ ಇನ್ಸ್ಪೆಕ್ಟರ್ ಲೋಕೇಶ್.ಕೆ ಇವರು ಈ ದಿನ 250ಕ್ಕೂ ಹೆಚ್ಚು ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು. ಇದು ತುರ್ತಾಗಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಆಗಬೇಕಾದ ಕೆಲಸ. ಸಬ್ ಇನ್ಸ್ಪೆಕ್ಟರ್ ಲೋಕೇಶ್. ಕೆ ಹಾಗೂ PSI ಹನುಮಂತಪ್ಪ ಇವರುಗಳಿಗೆ ಧನ್ಯವಾದ ಹೇಳಲೇಬೇಕು. ಇದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಮತ್ತೊಂದು ವಿಷಯ; ಸಯದ್ ಮೈಮೂನ ಎನ್ನುವ ಮಹಿಳೆಯೊಬ್ಬರು " ನಿಮ್ಮ ಬ್ಲಾಗ್ ಅನ್ನು ಎಲ್ಲಾ ಬರಹಗಳನ್ನು ನಾನು follow ಮಾಡ್ತೀನಿ. ಇವತ್ತಿನ ಲೇಖನವನ್ನೂ ಓದಿದೆ" ಎಂದು ಹೇಳಿದ್ದು. ಜನರ ನಡುವೆ ಇರುವುದು ನಿತ್ಯವಾದಷ್ಟೂ ಹೊಣೆಗಾರಿಕೆ ಮಾತ್ರ ಅಲ್ಲ ಮನುಷ್ಯ ಪ್ರೀತಿಯೂ ಹೆಚ್ಚಾಗುತ್ತದೆ ಎಂದು ತೋರಿಸಿಕೊಟ್ಟ ಇಂತಹ ದಿನಗಳು ಎಲ್ಲರ ಬದುಕಿನಲ್ಲೂ ಹೆಚ್ಚಾಗಬೇಕು. 27-02-2023