Posts

Showing posts from April, 2023

ಹಂದಿಜೋಗಿ ರಾಮಕ್ಕ ಭೇಟಿ - Meet with Handijogi Ramakka

Image
 ನಮ್ಮ ಭೇಟಿಯಲ್ಲಿ ಹಂದಿ ಜೋಗಿ ರಾಮಕ್ಕ ಹೇಳಿದ್ದು ಹಾಡಿದ್ದು.... ಆಕೆಯ ಕೈಯಲ್ಲಿ ಇರುವುದು ಅವರ ದೇವರಂತೆ. ಬೆಳ್ಳಿ ನಾಣ್ಯದ ಮೇಲೆ ಬೋಳು ತಲೆಯಂತಹ ಆಕೃತಿ. ಅವರುಗಳು ನಮ್ಮ ಹಾಗೆ ಬೇರೆ ವಿಗ್ರಹಗಳ ಆರಾಧಕರಲ್ಲ. (ಈಗ ಬಹಳ ಬದಲಾಗಿದ್ದಾರೆ). ಅವರ ದೇವರುಗಳು ಯಾವಾಗಲೂ ಪೆಟ್ಟಿಗೆಯಲ್ಲಿ ಭದ್ರ. ವರ್ಷಕ್ಕೊಮ್ಮೆ ಯುಗಾದಿಯ ದಿನ ಹೊರ ತೆಗೆದು ಪೂಜಿಸುತ್ತಾರೆ. ಪ್ರತೀ ಮದುವೆಯಲ್ಲೂ ಮನೆತನದ ಆಸ್ತಿಯಾಗಿ ಇದನ್ನು ಮುಂದಿನವರಿಗೆ ಕೊಡುತ್ತಾರಂತೆ. ಇವರುಗಳು ಹಂದಿಗಳಿಗಾಗಿ ಜೀವ ಕೊಡುತ್ತಾರೆ. ಒಟ್ಟಿಗೆ ಮಲಗುತ್ತಾರೆ, ಒಂದೇ ತಾಟಿನಲ್ಲಿ ಉಣ್ಣುತ್ತಾರೆ. ಕಳೆದ ಅದೆಷ್ಟೋ ತಲೆಮಾರುಗಳಿಂದ ಖಾಯಿಲೆಯಿಂದ ಯಾರೂ ಸತ್ತಿಲ್ಲ ಅವರ community ಯಲ್ಲಿ, ಅದಕ್ಕೆ ಹಂದಿಯೆ ಕಾರಣ ಎಂದು ನಂಬುತ್ತಾರೆ. ಈಕೆಯOತೂ ತನ್ನ ಹಂದಿಗಳನ್ನು ಶುಚಿತ್ವ ಆರೋಗ್ಯ ಅಂತೆಲ್ಲಾ ಕಾರ್ಪೊರೇಷನ್ ಅವರು ಹೊಡೆದುಕೊಂಡು ಹೋದಾಗ್ಲಿಂದ ಇಡೀ communityಗಾಗಿ ಹೋರಾಟ ಮಾಡುತ್ತಿದ್ದಾರೆ. ಒಂದು ಹಂದಿ ಎಷ್ಟು ಬೆಲೆ ಬಾಳುತ್ತದೆ, ಹೀಗೆ ವಕ್ಕಲೆಬ್ಬಿಸುವ ಹಿಂದೆ ಇರುವ ರಾಜಕೀಯ ಎಲ್ಲವನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಇವರ ಮಕ್ಕಳುಗಳನ್ನು ಶಾಲೆಗೆ ತರಲು ಕಾರ್ಯಕರ್ತರು ಹರಸಾಹಸ ಪಟ್ಟಿದ್ದಾರೆ. ಬಾಣಂತಿಗೆ ಗುಡಿಸಲಿನಿಂದ ಹೊರಗೆ ಗುಡ್ಲು ಹಾಕುವುದು ಸೇರಿ ಇನ್ನೂ ಕೆಲವು ವಿದ್ಯಾವಂತರಿಗೆ ಒಗ್ಗದ ಸಂಪ್ರದಾಯಗಳು ಈಗಲೂ ಮುಂದುವರೆಯುತ್ತಿವೆ. ನಾನು ಹೋದಾಗ ಒಂದು ಗುಡ್ಲಿನ ಮುಂದೆ ಮೂರು ದಿನದ ಕೂಸ

On Jeans Talk book

Image
 ವಿಜಯಕರ್ನಾಟಕ ಪತ್ರಿಕೆಯಲ್ಲಿ ಸತತವಾಗಿ 180 ವಾರಗಳು ಬರೆದ ಅಂಕಣ " ಜೀನ್ಸ್ ಟಾಕ್ "  ಮೊದಲ 40 ಅಂಕಣಗಳ ಪುಸ್ತಕದ ಬಗ್ಗೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಡಾ ನಾ ಸೋಮೇಶ್ವರ ಅವರು ವಿವರವಾಗಿ 4 ನಿಮಿಷಗಳ ಅಭಿಪ್ರಾಯ ತಿಳಿಸಿದ್ದಾರೆ. ದಯವಿಟ್ಟು ಕೇಳಿ. ಪುಸ್ತಕ ಬೇಕಿದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.🙏

Award for Travelogue ಬೆಳಕಿನ ಸೆರಗು

Image
  ಅರುಣಾಚಲ ಪ್ರದೇಶದ ಬಗ್ಗೆ ಪ್ರವಾಸಕಥನ " ಬೆಳಕಿನ ಸೆರಗು" ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದಿಂದ ನೀಡಿದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನದ ಸಂದರ್ಭ.

About Sandipani ashram

Image
ಇವತ್ತಿನ ಆಂದೋಲನ ಪತ್ರಿಕೆಯಲ್ಲಿ...ಓದಿ ಅಭಿಪ್ರಾಯ ತಿಳಿಸಿ 🙏  ’ಊಟಾ ಊಟಾ’ ಎಂದು ಹಪಹಪಿಸುತ್ತಿದ್ದವಳನ್ನು ಚಾಲಕ ಪವನ್ “ಏನ್ಮೇಡಂ ನಿಮ್ಮಂಥವರು ಜ್ಞಾನದ ಭೂಕ್ (ಹಸಿವು) ಅನ್ನಬೇಕು ಅದು ಬಿಟ್ಟು ಹೀಗೆ ಊಟಾ ಊಟಾ ಅನ್ನುತ್ತಿದ್ದಿರಲ್ಲ” ಎಂದು ರೇಗಿಸುತ್ತಾ ಗಾಡಿಯನ್ನು ರೋಂಯ್ ಅಂತ ನಿಲ್ಲಿಸಿ, ಇಳಿಯಲು ಹೇಳಿದ. ಪಕ್ಕದ ಕಾಂಪೌಂಡಿನ ದೊಡ್ಡ ಕಮಾನಿನ ಮೇಲೆ ಬರೆದಿತ್ತು ’ಮಹರ್ಷಿ ಸಾಂದಿಪನಿ ಆಶ್ರಮ್”. ಕೃಷ್ಣ, ಬಲರಾಮ, ಸುಧಾಮ ಓದಿದ ಗುರುಕುಲ. ನಾನೋದಿದ ಮೈಸೂರಿನ ಶಾಲೆ ಅವಿಲಾ ಕಾನ್ವೆಂಟಿನ ಮುಖ್ಯ ಗೇಟಿನ ಕಮಾನೂ ಹೀಗೇ ಇತ್ತು. ಎಲ್ಲಾ ಶಿಕ್ಷಕರೂ ನಿಸ್ಪೃಹವಾಗಿ ನನ್ನನ್ನೂ ಕೃಷ್ಣನ ಅರ್ಧದಷ್ಟಾದರೂ ಜಾಣೆ ಮಾಡಬೇಕೆನ್ನುವ ಪ್ರಯತ್ನ ನಡೆಸಿ ಸೋತಿದ್ದನ್ನು ನೆನೆಸಿಕೊಂಡೇ ಒಳಹೊಕ್ಕೆ. ಉಜ್ಜನಿಯ ಸಾಂದಿಪನಿ ಆಶ್ರಮದಲ್ಲಿ ಆ ದಿನ ಹೆಚ್ಚಿನ ಜನರಿರಲಿಲ್ಲ.  ಕುಟಿರಾಕಾರದ ಸಿಮೆಂಟಿನ ಅಂಗಳದೊಳಗಿನ ಗೋಡೇಗಳ ಮೇಲೆಲ್ಲಾ ಕೃಷ್ಣ ಕಲಿತ ಹದಿನಾಲ್ಕು ವಿದ್ಯೆಗಳನ್ನು ಬಣ್ಣಬಣ್ಣದಲ್ಲಿ ರಚಿಸಿದ್ದಾರೆ. ಗಾಢ ಬಣ್ಣಗಳು ಈಗಿನ ಆಧುನಿಕ ಶಾಲೆಗಳನ್ನು ಹೋಲುತ್ತಿದ್ದರೂ ಕೃಷ್ಣಭಾವ ಕೊಡುವುದರಲ್ಲಿ ಸೋಲುವುದಿಲ್ಲ. ಆ ಕೋಣೆಯ ದೊಡ್ಡ ಆಕರ್ಷಣೆ ಎಂದರೆ ಗಿರಿಧಾರಿ ಕಲಿತನೆನ್ನಲಾದ ಹದಿನಾಲ್ಕು ವಿದ್ಯೆಗಳು ಯಾವುವು ಎನ್ನುವ ಪಟ್ಟಿಯೊಂದನ್ನು ಬಾಗಿಲಿನ ಹಿಂದಿನ ಗೋಡೆಯ ಮೇಲೆ ತೂಗು ಹಾಕಿರುವುದು. ನಾಲ್ಕು ವೇದಗಳು, ಕಲ್ಪಗಳು, ತಂತ್ರಜ್ಞತೆ, ವ್ಯಾಕರಣ, ಪುರಾಣ, ಜ್ಯೋತಿಷ್ಯ, ಖಗೋ