Posts

Showing posts from February, 2026

ಪಾದರಕ್ಷೆ ಒಂದು ಉಡುಗೊರೆ

Image
  ನಮ್ಮಾಫಿಸಿನ ಸೆಕ್ರೆಟರಿ ಯುವತಿ ಯಾವಾಗಲೂ ಬಹಳವೇ ಚಂದವಾಗಿ ಡ್ರೆಸ್ ಮಾಡಿಕೊಳ್ಳುತ್ತಾಳೆ. ಅವಳು ಎದುರು ಕಂಡಾಗಲೆಲ್ಲಾ ಎರಡು ನಿಮಿಷ ಅವಳನ್ನೇ ನೋಡಿ ಖುಷಿಗೊಳ್ಳುತ್ತೇನೆ. ಎಂತಹ ಪರಿಸ್ಥಿತಿಯಲ್ಲೂ ತಮ್ಮನ್ನು ತಾವು ಶಿಸ್ತಿನಿಂದ ತಯಾರು ಮಾಡಿಕೊಳ್ಳುವ ಹೆಣ್ಣುಗಳೆಂದರೆ ನನಗೆ ವಿಪರೀತ ಪ್ರೀತಿ ಅದಕ್ಕೂ ಒಂದು ತೂಕ ಹೆಚ್ಚಿನ ಗೌರವ. ಈಗ ಅದೇ ಹುಡುಗಿ ನನಗೆ ಸರ್ಪ್ರೈಸ್ ಉಡುಗೊರೆಯಾಗಿ ಕಾಲ್ಗವಚ ಕಳುಹಿಸಿದ್ದಾಳೆ. ಪ್ರೀತಿಗೆ ಅಳತೆ, ಆಕಾರ, ಬಣ್ಣ ಯಾವುದೂ ಇಲ್ಲ. ಅದು ಮನಸ್ಸಿನ ಚಲನೆಗೆ ಇರುವ ರಕ್ಷೆಯಂತೆ ಥೇಟ್ ಪಾದರಕ್ಷೆಯ ಹಾಗೆ! Thank you dear ಸೌಮ್ಯ 🙏 27-02-2026