Posts

Showing posts from 2026

ಮಕ್ಕಳಿಗೆ Summer vacation

Image
  ಈಗ ಮಕ್ಕಳಿಗೆ ಶಾಲಾ ರಜ. ಬೆಳಗಿನ ವಾಕಿಂಗ್ ಹೋದಾಗ ಬೀದಿಬದಿಯಲ್ಲಿ ಆಡುತ್ತಿರುವ ಹತ್ತಾರು ಮಕ್ಕಳು ಸಿಗುತ್ತಾರೆ, ಮುದ್ದಾಗಿರುತ್ತಾರೆ ಕೂಡ. ಅದರ ಅರ್ಥ ನಾವುಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳಬಹುದು ಅಂತಲ್ಲ! ಬೀದಿಯಲ್ಲಿ ಆಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರುಗಳು ಹೊಟ್ಟೆಗಿಲ್ಲದವರು, ದಿಕ್ಕೆಟ್ಟವರು, ಗತಿಯಿಲ್ಲದವರು ಎನ್ನುವ ಷರಾ ಬರೆಯಬಹುದು ಅಂತಲ್ಲ! ಯಾವ ಶಾಲೆ, ಎಷ್ಟನೇ ತರಗತಿ, ಹೆಸರು ಏನು, etc etc ಮಾತುಗಳನ್ನು ಅವರೊಂದಿಗೆ ಆಡಬೇಕು ಅಂತಲ್ಲ! ಮನೆಯಲ್ಲಿ ಉಳಿದ ಊಟ ಅಥವಾ ಅಲ್ಲೇ ಇರುವ ಕೈಗಾಡಿಯಲ್ಲಿ ಪಲಾವ್, ಚಾಕಲೇಟ್ ವಗೈರೆ ಕೊಡಿಸಿ ನಮ್ಮ ಅಹಂ ತಣಿಸಿಕೊಳ್ಳಬೇಕು ಅಂತಲ್ಲ! ಅವರ ತಲೆಸವರುವ, ಕೆನ್ನೆ ಹಿಂಡುವ ಹಿರಿತನ ನಮಗಿದೆ ಅಂತಲ್ಲ! ನಮಗೊಂದು ಒಳ್ಳೆಯ ಹಾಸ್ಟೆಲ್ ಗೊತ್ತು ಅಲ್ಲಿ ಒಳ್ಳೆಯ ಅನುಕೂಲಗಳಿವೆ ಸೇರಿಸುತ್ತೀವಿ ಎಂದು ತಂದೆತಾಯಿಗಳಿಗೆ ಆಮಿಷ ತೋರಿಸಬೇಕು ಅಂತಲ್ಲ!   ಹಾಗಾಗಿ ನೋಟವನ್ನು ಮಾತ್ರ ಆಸ್ವಾದಿಸಿ ಮುಂದಕ್ಕೆ ಹೋಗೋಣ. ಕಂಡ ಮಕ್ಕಳು ನಿಜಕ್ಕೂ ಅಸುರಕ್ಷಿತ, ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನಿಸಿದರೆ ಮಾತ್ರ 1098 ಅಥವಾ 112 ಗೆ ಕರೆ ಮಾಡಬೇಕು ಅಷ್ಟೇ.  ಈಗ ಮಕ್ಕಳ ಸುರಕ್ಷತೆಯ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚುರುಕಾಗಿದೆ. ಸರ್ಕಾರ ಹಲವಾರು ಯೋಜನೆಗಳಿಗೆ ಹಣವನ್ನೂ, ಸ್ಥಳವನ್ನೂ ನೀಡಿದೆ.  ಹಾಗಾಗಿ ನಾವುಗಳು ನಮ್ಮ ಪಾತ್ರವನ್ನು ನಿರ್ವಹಿಸಿದರೆ ಸಾಕು, ನಮ್...

ಅಲಹಾಬಾದ್ ಹೈಕೋರ್ಟ್ on Living Relationship

Image
  ಮದುವೆಯಾದ ಪುರುಷ livin relationship ನಲ್ಲಿ ಇದ್ದರೆ ಅಪರಾಧ ಅಲ್ಲ ಅಂತ ಅಲಹಾಬಾದ್ ಕೋರ್ಟ್ ಹೇಳಿದೆ ಎನ್ನುವ ಸುದ್ದಿ ಓದಿ ಲಿವ್ ಇನ್ ಸಂಬಂಧಗಳ ಬಗ್ಗೆ ರಮ್ಯ ಕಲ್ಪನೆ ಮಾಡಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಲ್ಲಿನ ಪ್ರಕರಣದ Facts ಬೇರೆ ಮತ್ತು ಪಾರ್ಟಿಗಳು ಕೇಳಿಕೊಂಡಿದ್ದ ಪರಿಹಾರಕ್ಕೆ ಅನುಗುಣವಾಗಿ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಕೋರ್ಟ್ ತೀರ್ಪು ಕೊಟ್ಟಿದೆ ಅಷ್ಟೇ. Livin relationship ಎನ್ನುವುದರ ಮೂಲಭೂತ ಗುಣಲಕ್ಷಣ ಇಬ್ಬರಿಗೂ ಅಸ್ತಿತ್ವದಲ್ಲಿ ಇರುವ ಮದುವೆ ಇರಬಾರದು ಎನ್ನುವುದೇ ಆಗಿದೆ. ಒಬ್ಬಾಕೆ ಸುಮಾರು 10 ವರ್ಷಗಳಿಂದ ಸಂಬಂಧದಲ್ಲಿದ್ದಳು. ಸಂಬಂಧಕ್ಕೆ ತನ್ನ ನಂಬಿಕೆ, ಸಮಯ, ಯೌವನ, ಭಾವನೆ, ದೇಹವನ್ನೂ ವ್ಯಯಿಸಿದ್ದಳು. ಏಕಾಏಕಿ ಒಂದು ದಿನ ಆತ ಖೇಲ್ ಖತಂ ಟಾಟಾ ಬೈ ಬೈ ಎಂದು ಹೊರನಡೆದು ಬಿಟ್ಟ. ಚೂರಾದ ಅವಳು ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಅವಳು ಭಾವಿಸಿದಂತೆ ಅವನು ಮಾಡಿದ ಗಂಭೀರ ದ್ರೋಹಕ್ಕೆ ಕಾನೂನು ಅವನಿಗೆ ಶಿಕ್ಷೆ ನೀಡಬೇಕೆಂದು ಅವಳು ಬಯಸಿದಳು. ಆದರೆ ಕಾನೂನು ಎಂದಿಗೂ ಭಾವನಾತ್ಮಕ ಗಾಯವನ್ನು ಅದಕ್ಕೆ ಪರ್ಯಾಯವಾಗಿ ಗುರುತಿಸುವಷ್ಟು ಸಮರ್ಥವಾಗಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಲಿವ್-ಇನ್ ಸಂಬಂಧವು ಸಬಲೀಕರಣದ ಸಂಬಂಧವಲ್ಲ, ಅದೊಂದು ಪರಸ್ಪರ ನಿರೀಕ್ಷೆಗಳ ಬಂಧವಾಗಿದೆ. ಸಾರ್ವಜನಿಕ ಪ್ರವಚನದಲ್ಲಿ, ಲಿವ್-ಇನ್ ಸಂಬಂಧಗಳನ್ನು ಸ್ವಾತಂತ್ರ್ಯ, ಆಯ್ಕೆ ಮತ್ತು ಆಧುನಿಕತೆ ಎಂದು ಬಿಂಬ...

Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ

Image
  ಒಮ್ಮೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವಿಷಯ ’ಮದುವೆಗೆ ಮುನ್ನ. . . ’ ಎಂದಿತ್ತು. ಹದಿಹರೆಯಕ್ಕೂ ಮೊದಲೇ ಪ್ರೀತಿ ಪ್ರೇಮ ಎನ್ನುವ ಭಾವ ಸ್ಫುರಣೆಯಿಂದ ಹಿಡಿದು ಐವತ್ತು ವರ್ಷಗಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೆಗೂ ಯುವಕ ಯುವತಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬಳು ಯುವತಿ ’ನೋಡಿ ಮೇಡಮ್ ಯಾವುದೇ ಮದುವೆ ಮುರಿದು ಬಿದ್ದರೂ ಸಾಮಾನ್ಯವಾಗಿ ಹುಡುಗಿಯದ್ದೇ ತಪ್ಪು ಎನ್ನುವ ಮಾತೇ ಕೇಳಿ ಬರುತ್ತದೆ. ಆದರೆ ವಾಸ್ತವದಲ್ಲಿ ಅದು ಲವ್ ಮ್ಯಾರೇಜ್ ಇರಲಿ ಅಥವಾ ಅರೇಂಜ್ಡ್ ಮದುವೆಯೇ ಆಗಿರಲಿ ಆ ಹುಡುಗ ಹುಡುಗಿಯ ಮಧ್ಯೆ ಏನು ನಡೆದಿರುತ್ತದೆ ಎನ್ನುವುದು ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಸ್ವಭಾವದಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದರೆ ಈಗೆಲ್ಲಾ ಆಪ್ತಸಮಾಲೋಚನೆ ಪಡೆಯುವ ಅನುಕೂಲ ಇದೆ ಹಾಗಾಗಿ ಸರಿಪಡಿಸಿಕೊಳ್ಳಬಹುದು. ಆದರೆ ದೈಹಿಕ ಹೊಂದಾಣಿಕೆ (Compatibility) ಇಲ್ಲದಿದ್ದರೆ ಯಾರಿಗೂ ಹೇಳಿಕೊಳ್ಳಲೂ ಆಗುವುದಿಲ್ಲ ಹಾಗಂತ ಜೀವನ ಪೂರ್ತೀ ಅನುಭವಿಸಲೂ ಆಗಲ್ಲ. ಅದಕ್ಕೆ ಮದುವೆಗೆ ಮುನ್ನ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇದ್ದು ನಂತರ ಮದುವೆ ಆಗುವುದೇ ಒಳ್ಳೆಯದು’ ಎಂದಳು. ಆಕೆಯ ಮಾತುಗಳನ್ನು ಕೇಳಿದಾರಭ್ಯ ಈ ಸಂಬಂಧವನ್ನು ಹೊಸದೊಂದು ಆಯಾಮದಿಂದ ಅರ್ಥೈಸಿಕೊಳ್ಳುವ ಅವಕಾಶ ಸಿಕ್ಕಿತು. ಮದುವೆ ಎನ್ನುವುದು ಜೀವನದ ಅಂತಿಮ ಗುರಿ ಎನ್ನುವ ಮನೋಭಾವದಿಂದ ಸಮಾಜವು ಅದೊಂದು ಆಯ್ಕೆ ಎನ್ನುವಲ್ಲಿಗ...

ಪಾದರಕ್ಷೆ ಒಂದು ಉಡುಗೊರೆ

Image
  ನಮ್ಮಾಫಿಸಿನ ಸೆಕ್ರೆಟರಿ ಯುವತಿ ಯಾವಾಗಲೂ ಬಹಳವೇ ಚಂದವಾಗಿ ಡ್ರೆಸ್ ಮಾಡಿಕೊಳ್ಳುತ್ತಾಳೆ. ಅವಳು ಎದುರು ಕಂಡಾಗಲೆಲ್ಲಾ ಎರಡು ನಿಮಿಷ ಅವಳನ್ನೇ ನೋಡಿ ಖುಷಿಗೊಳ್ಳುತ್ತೇನೆ. ಎಂತಹ ಪರಿಸ್ಥಿತಿಯಲ್ಲೂ ತಮ್ಮನ್ನು ತಾವು ಶಿಸ್ತಿನಿಂದ ತಯಾರು ಮಾಡಿಕೊಳ್ಳುವ ಹೆಣ್ಣುಗಳೆಂದರೆ ನನಗೆ ವಿಪರೀತ ಪ್ರೀತಿ ಅದಕ್ಕೂ ಒಂದು ತೂಕ ಹೆಚ್ಚಿನ ಗೌರವ. ಈಗ ಅದೇ ಹುಡುಗಿ ನನಗೆ ಸರ್ಪ್ರೈಸ್ ಉಡುಗೊರೆಯಾಗಿ ಕಾಲ್ಗವಚ ಕಳುಹಿಸಿದ್ದಾಳೆ. ಪ್ರೀತಿಗೆ ಅಳತೆ, ಆಕಾರ, ಬಣ್ಣ ಯಾವುದೂ ಇಲ್ಲ. ಅದು ಮನಸ್ಸಿನ ಚಲನೆಗೆ ಇರುವ ರಕ್ಷೆಯಂತೆ ಥೇಟ್ ಪಾದರಕ್ಷೆಯ ಹಾಗೆ! Thank you dear ಸೌಮ್ಯ 🙏 27-02-2026