ನಿಮಗೆ ದಾನ ಮಾಡುವ ಮನಸ್ಸಿದ್ದರೆ ಹೀಗೆ ಮಾಡಿ ...

ಅನಾಥ , ಬಡ, ಗತಿಯಿಲ್ಲದ,ಮಕ್ಕಳು ಇವರ ಸೇವೆ  ಎನ್ನುವ ಹೆಸರಿನಲ್ಲಿ ಸಂಸ್ಥೆಗಳನ್ನು ನಡೆಸುವುದು ಒಂದು ಮಾಫಿಯಾದಂತೆ ಬೆಳೆಯುತ್ತಿದೆ.

ಇದರಲ್ಲಾದರೂ ಸಂಪೂರ್ಣ ಕೆಟ್ಟು ನಿರ್ನಾಮರಾಗುವ ಮೊದಲೇ ಎಚ್ಚೆತ್ತುಕೊಳ್ಳೋಣ.

ನಿಮಗೆ ದಾನ ಮಾಡುವ ಮನಸ್ಸಿದ್ದರೆ ಹೀಗೆ ಮಾಡಿ -
*ಆ ಸಂಸ್ಥೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಬಳಿ ನೋಂದಾವಣೆಯಾಗಿದೆಯೇ ಕೇಳಿ. *ಅನಾಥ ಮಕ್ಕಳು ಇದ್ದರೆ ಅವರನ್ನು ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳ ಬಳಿ ನೋಂದಾಯಿಸಲಾಗಿದೆಯೇ ಕೇಳಿ. *ಅಲ್ಲಿರುವ ಮಕ್ಕಳನ್ನು ಆಯಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರು ಪಡಿಸಿದ್ದಾರೆಯೇ ಕೇಳಿ.

ಇದು ಸಾಧ್ಯವಾಗದಿದ್ದರೆ ನಿಮಗೆ ದಾನ ಮಾಡಬೇಕು ಎನಿಸಿದಾಗ ಅಂತಹ ದಾನಕ್ಕೆ ಯಾವ ಸಂಸ್ಥೆ ಅರ್ಹ ಎಂದು ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿಗಳ ಕಚೇರಿಯಿಂದ ತಿಳಿದುಕೊಂಡು ಅಂತಹ ಸಂಸ್ಥೆಗೆ ಮಾತ್ರ ದಾನ ಮಾಡಿ.

ನೀವು ಕೊಡುವ ದವಸ ಧಾನ್ಯ ಆಟಿಕೆ ಹೊಸ ಬಟ್ಟೆ ಪುಸ್ತಕ ಎಲ್ಲವೂ ಲಾಭಕ್ಕಾಗಿ ಅಂಗಡಿ ಸೇರುವುದನ್ನು ತಪ್ಪಿಸಿ.
ಹಣ ದುರ್ಬಳಕೆ  ಆಗುವುದನ್ನು ತಡೆಗಟ್ಟಿ.
ಇದು ಸಾಧ್ಯವಾಗದಿದ್ದರೆ ಅನಾಥ ಮಕ್ಕಳಿಗೆ ನಾವೇ ಅಪ್ಪ ಅಮ್ಮ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ. ದಾನ ಮಾಡಬೇಡಿ.

ನಮ್ಮ  ದಾನಮಹಾತ್ಮೆಯ ಫೋಟೋ  ಫೇಸಬುಕ್ನಲ್ಲಿ ಖಂಡಿತಾ ಹಾಕದಿರೋಣ.  ಇರುವ ಸುಪ್ತ ಅಹಂ ಅನ್ನು ತಣಿಸಿಕೊಳ್ಳುವ ದಾನವರಾಗದಿರೋಣ.

ಮಕ್ಕಳ ಮನಸ್ಸು, ದೇಹ ಅವರ ಹಕ್ಕು
#ಮಕ್ಕಳಹಕ್ಕುಗಳಜಾಗೃತಿಸಪ್ತಾಹ
2 May 2019

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

Police Notice in ಪ್ರಜಾವಾಣಿ

ಸವಾಲು ದಾಟುವ ಸಂಭ್ರಮ in VK