ಹಂದಿಜೋಗಿ ರಾಮಕ್ಕ ಭೇಟಿ - Meet with Handijogi Ramakka
ನಮ್ಮ ಭೇಟಿಯಲ್ಲಿ ಹಂದಿ ಜೋಗಿ ರಾಮಕ್ಕ ಹೇಳಿದ್ದು ಹಾಡಿದ್ದು.... ಆಕೆಯ ಕೈಯಲ್ಲಿ ಇರುವುದು ಅವರ ದೇವರಂತೆ. ಬೆಳ್ಳಿ ನಾಣ್ಯದ ಮೇಲೆ ಬೋಳು ತಲೆಯಂತಹ ಆಕೃತಿ. ಅವರುಗಳು ನಮ್ಮ ಹಾಗೆ ಬೇರೆ ವಿಗ್ರಹಗಳ ಆರಾಧಕರಲ್ಲ. (ಈಗ ಬಹಳ ಬದಲಾಗಿದ್ದಾರೆ). ಅವರ ದೇವರುಗಳು ಯಾವಾಗಲೂ ಪೆಟ್ಟಿಗೆಯಲ್ಲಿ ಭದ್ರ. ವರ್ಷಕ್ಕೊಮ್ಮೆ ಯುಗಾದಿಯ ದಿನ ಹೊರ ತೆಗೆದು ಪೂಜಿಸುತ್ತಾರೆ. ಪ್ರತೀ ಮದುವೆಯಲ್ಲೂ ಮನೆತನದ ಆಸ್ತಿಯಾಗಿ ಇದನ್ನು ಮುಂದಿನವರಿಗೆ ಕೊಡುತ್ತಾರಂತೆ. ಇವರುಗಳು ಹಂದಿಗಳಿಗಾಗಿ ಜೀವ ಕೊಡುತ್ತಾರೆ. ಒಟ್ಟಿಗೆ ಮಲಗುತ್ತಾರೆ, ಒಂದೇ ತಾಟಿನಲ್ಲಿ ಉಣ್ಣುತ್ತಾರೆ. ಕಳೆದ ಅದೆಷ್ಟೋ ತಲೆಮಾರುಗಳಿಂದ ಖಾಯಿಲೆಯಿಂದ ಯಾರೂ ಸತ್ತಿಲ್ಲ ಅವರ community ಯಲ್ಲಿ, ಅದಕ್ಕೆ ಹಂದಿಯೆ ಕಾರಣ ಎಂದು ನಂಬುತ್ತಾರೆ. ಈಕೆಯOತೂ ತನ್ನ ಹಂದಿಗಳನ್ನು ಶುಚಿತ್ವ ಆರೋಗ್ಯ ಅಂತೆಲ್ಲಾ ಕಾರ್ಪೊರೇಷನ್ ಅವರು ಹೊಡೆದುಕೊಂಡು ಹೋದಾಗ್ಲಿಂದ ಇಡೀ communityಗಾಗಿ ಹೋರಾಟ ಮಾಡುತ್ತಿದ್ದಾರೆ. ಒಂದು ಹಂದಿ ಎಷ್ಟು ಬೆಲೆ ಬಾಳುತ್ತದೆ, ಹೀಗೆ ವಕ್ಕಲೆಬ್ಬಿಸುವ ಹಿಂದೆ ಇರುವ ರಾಜಕೀಯ ಎಲ್ಲವನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಇವರ ಮಕ್ಕಳುಗಳನ್ನು ಶಾಲೆಗೆ ತರಲು ಕಾರ್ಯಕರ್ತರು ಹರಸಾಹಸ ಪಟ್ಟಿದ್ದಾರೆ. ಬಾಣಂತಿಗೆ ಗುಡಿಸಲಿನಿಂದ ಹೊರಗೆ ಗುಡ್ಲು ಹಾಕುವುದು ಸೇರಿ ಇನ್ನೂ ಕೆಲವು ವಿದ್ಯಾವಂತರಿಗೆ ಒಗ್ಗದ ಸಂಪ್ರದಾಯಗಳು ಈಗಲೂ ಮುಂದುವರೆಯುತ್ತಿವೆ. ನಾನು ಹೋದಾಗ ಒಂದು ಗುಡ್ಲಿನ ಮುಂದೆ ಮೂರು ದಿನದ...