ನೂರು ಮಕ್ಕಳು ನೂರು ಪುಸ್ತಕ

 

" ನೂರು ಮಕ್ಕಳು ನೂರು ಪುಸ್ತಕ" ಈ ಯೋಜನೆಯ ಬಗ್ಗೆ ಬಹಳಷ್ಟು ಜನರು ಆಸಕ್ತಿ ತೋರಿಸಿ ಹೆಚ್ಚಿನ ವಿವರ ಕೇಳುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಆಭಾರಿ. 🙏

 ನೂರು ಮಕ್ಕಳು ನೂರು ಪುಸ್ತಕ ನನ್ನ ಸಂಸ್ಥೆ ಅಸ್ತಿತ್ವ ಲೀಗಲ್ ಟ್ರಸ್ಟ್ ನ ಯೋಜನೆಯಾಗಿದ್ದು ಡಿಸೆಂಬರ್ 2024ರ ಒಳಗೆ ನೂರು ಸ್ಥಳಗಳಲ್ಲಿ ನೂರು ಮಕ್ಕಳ ಕೈಯಲ್ಲಿ ನೂರು ಪುಸ್ತಕಗಳನ್ನು ಕೊಡಬೇಕು ಎನ್ನುವ ಆಸೆ ಇದೆ. ಈಗಾಗಲೇ ಆರು ಸ್ಥಳಗಳಲ್ಲಿ ಸುಮಾರು ಸಾವಿರದ ಇನ್ನೂರು ಮಕ್ಕಳನ್ನು ಪುಸ್ತಕ ಹಿಡಿದುಕೊಂಡು ಓದುವಂತೆ ಮಾಡಲಾಗಿದೆ. ಈ ಯೋಜನೆಯಲ್ಲಿ ತಾವುಗಳು ಭಾಗಿಯಾಗಿ ಪುಸ್ತಕಗಳನ್ನು ಕೊಡಿಸುವುದಾದರೆ ಅಥವಾ ಹಣ ಸಹಾಯ ಮಾಡುವುದಾದರೆ astitvalegal@gmail.com ಇಲ್ಲಿಗೆ email ಮಾಡಿ ವಿವರಗಳನ್ನು ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತು ಪುಸ್ತಕಗಳನ್ನು ಕೊಡಿಸಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು 🙏😊

ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

' ಕೈಗೆ ಪುಸ್ತಕ ಕೊಡೋಣ, ಮಕ್ಕಳನ್ನು ಮನುಷ್ಯರನ್ನಾಗಿ ಮಾಡೋಣ '

16- April -2024

Comments

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್