ಜೀವನಾಂಶ

’ನೀವು ಎಷ್ಟನೆಯ ಗಂಡ’ ಎಂದು ನ್ಯಾಯಾಧೀಶರು ಕೇಳುತ್ತಿದ್ದಾರೆ, ಆತನ ಪರ ವಕೀಲರು ಸಂಕೋಚದಿಂದಲೇ ಹೇಳುತ್ತಾರೆ ’ಏಳನೆಯವನು’ ಎಂದು. ನ್ಯಾಯಾಧೀಶರದ್ದು ಆಶ್ಚರ್ಯವನ್ನೂ ಮೀರಿದ ಉದ್ಗಾರ. ಹೌದು, ರಾಜ್ಯ ಉಚ್ಚನ್ಯಾಯಾಲವನ್ನೇ ಬವಳಿ ಬೀಳಿಸಿದ ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಸತತವಾಗಿ ಆರು ಮದುವೆಗಳನ್ನು ಮಾಡಿಕೊಂಡು ಪ್ರತೀ ಬಾರಿಯೂ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿ ಗಂಡನಿಂದ ಲಕ್ಷಾಂತರ ರೂಪಾಯಿಯ ಪರಿಹಾರ ಪಡೇದು ವಿಚ್ಚೆಧನ ನೀಡುವುದನ್ನು ಕಾಯಕ ಮಾಡಿಕೊಂಡು ಈಗ ಏಳನೆಯ ಗಂಡನ ಮೇಲೆ ಪ್ರಕರಣ ಹೂಡಿದ್ದರು. ನ್ಯಾಯಾಧೀಶರು ಇದೊಂದು ದುರುದ್ದೇಶಪೂರಿತ ಪ್ರಕರಣ ಎಂದು ದಾಖಲಿಸಿ ಆಕೆಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದರು. ಮತ್ತೊಬ್ಬಾಕೆ ತನ್ನ ಇಬ್ಬರು ಮಕ್ಕಳ ಶಾಲೆ, ಆಹಾರ, ಮನೆ ಬಾಡಿಗೆ ಇನ್ನೆತರೆ ಖರ್ಚನ್ನು ಬಿಟ್ಟು ತನ್ನ ಸ್ವಂತಕ್ಕೆ ಪ್ರತೀ ತಿಂಗಳೂ 6 ಲಕ್ಷದ 16 ಸಾವಿರ ರೂಪಾಯಿಗಳ ಜೀವನಾಂಶ ಕೋರಿ ಅರ್ಜಿ ಹಾಕಿದ್ದರು. ಯಾವುದೇ ಉತ್ಪ್ರೇಕ್ಷಿತ ಕಥೆ ಕಾದಂಬರಿಗಳಲ್ಲೂ ಸಿಗದ ಇಂತಹ ಪ್ರಕರಣಗಳು ನಿಜ ಜೀವನದಲ್ಲಿ ಒಮ್ಮೊಮ್ಮೆ ಘಟಿಸಿ ಎಲ್ಲರ ಉಸಿರು ತಡೆಹಿಡಿಯುವ ತಾತ್ಕಾಲಿಕ ಕೆಲಸ ಆಗುತ್ತಿರುತ್ತದೆ. ...