Posts

Showing posts from May, 2025

ವೃತ್ತಿ ಬದುಕಿನ ಕಥಾನಕ Advocate Diary

Image
  ಮೊನ್ನೆ ಓದಿ ಮುಗಿಸಿದ ಪುಸ್ತಕ " ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ... " ಲೇಖಕರು : ಪ್ರಕಾಶ್ ವಸ್ತ್ರದ ವಕೀಲರು ವಕೀಲರು ಎಂದರೆ ಎಲ್ಲಕ್ಕೂ ವಾದ ಮಾಡುವವರು, ಸುಳ್ಳುಗಳನ್ನೇ ಸತ್ಯ ಎಂದಾಗಿಸುವವರು, ದುಡ್ಡು ಮಾಡುವವರು ಎನ್ನುವ ಋಣಾತ್ಮಕ ಅಭಿಪ್ರಾಯಗಳೇ ಜನಮಾನಸದಲ್ಲಿ ಪ್ರಚಲಿತವಾಗಿರುವಾಗ ವಕೀಲರುಗಳು ಬರೆದ ಕೃತಿಯನ್ನು ಓದುವಾಗ ಮಾತ್ರ ಇದು ಎಂತಹ ದೈವೀಕ ವೃತ್ತಿ ಎನ್ನುವ ಅರಿವು ಮೂಡುತ್ತದೆ. ನ್ಯಾಯ ಪಡೆದುಕೊಂಡವನ ಕಣ್ಣಲ್ಲಿ ತುಳುಕುವ ನೆಮ್ಮದಿಯನ್ನು ನೆನೆದಾಗ ವಕೀಲ ಎಲ್ಲಾ ವಿರೋಧಗಳನ್ನು ಎದುರಿಸಿ ಮತ್ತೆ ಮತ್ತೆ ನ್ಯಾಯದ ಪರವಾಗಿ ನಿಲ್ಲುತ್ತಿರುತ್ತಾನೆ.  ಈ ಪುಸ್ತಕದಲ್ಲಿ ಲೇಖಕರು ತಾವು ನಡೆಸಿದ, ನಿರ್ವಹಿಸಿದ, ಬಗೆಹರಿಸಿದ ಪ್ರಕರಣಗಳನ್ನು ಕಥೆಯ ರೂಪದಲ್ಲಿ, 30 ಅಧ್ಯಾಯಗಳಲ್ಲಿ, ಸಾಮಾನ್ಯ ಭಾಷೆಯಲ್ಲಿ ಬರೆದಿದ್ದಾರೆ. ನ್ಯಾಯಾಲಯಗಳು ಎಂದರೆ ವಾದಿ ಪ್ರತಿವಾದಗಳಿಗೆ ಇರುವ ವೇದಿಕೆಯಲ್ಲ. ಅಲ್ಲಿ ನೂರೆಂಟು ನೋವುಗಳು ಮೌನವಾಗಿರುತ್ತವೆ, ಹತ್ತಾರು ಸಂತೋಷಗಳು ಬಾಗಿಲಿನಿಂದ ಹೊರಬಂದಿರುತ್ತವೆ. ಇವುಗಳಿಗೆ ಅರ್ಥ ಏನು ಎಂದು ಹುಡುಕಹೊರಟವರು ಈ ಪುಸ್ತಕ ಮತ್ತು ಇಂತಹ ಪುಸ್ತಕಗಳನ್ನು ಓದಬೇಕು.

ಆಲ್ಬರ್ಟ್ ಐನ್ಸ್ಟೀನ್ Albert Einstein

Image
  ಪುಸ್ತಕದ ಶೀರ್ಷಿಕೆ: ಆಲ್ಬರ್ಟ್ ಐನ್ಸ್ಟೈನ್  ಲೇಖಕರು: ಜಿಟಿ ನಾರಾಯಣ ರಾವ್   ಒಟ್ಟು 74 ಅಧ್ಯಾಯಗಳಲ್ಲಿ ಈ ಪುಸ್ತಕದಲ್ಲಿ ಐನ್ಸ್ಟೀನ್ ಅವರ ಸಂಪೂರ್ಣ ಜೀವನ ಚರಿತ್ರೆ ಯನ್ನು ಲೇಖಕರು ವಿಷದವಾಗಿ ಕಟ್ಟಿಕೊಟ್ಟಿದ್ದಾರೆ. ಆಲ್ಬರ್ಟ್ ಐನ್ಸ್ಟೀನ್ ಒಬ್ಬ ವಿಜ್ಞಾನಿ ಮಾತ್ರವಲ್ಲ ಸಾಹಿತಿಯು ಹೌದು ಎನ್ನುವ ನಂಬಿಕೆ ಗಾಢವಾಗುತ್ತಾ ಹೋಗುತ್ತದೆ ಪುಸ್ತಕ ಓದುತ್ತಿರುವಾಗ, ನಡುನಡುವೆ ಐನ್ಸ್ಟೀನರು ತಮ್ಮ ಮನಸ್ಸಿನ ಭಾವನೆಯನ್ನು ನಾಲ್ಕಾರು ಪ್ರಾಸಬದ್ಧ ಸಾಲುಗಳಲ್ಲಿ ಹೊರ ಹಾಕುವಾಗ ಮತ್ತು ನಡು ನಡುವೆ ಉಮರ್ ಖಯಾಮನ ಪದ್ಯವನ್ನೋ  ಅಥವಾ ಮತ್ತಾರೋ ಕವಿಯ ಸಾಲುಗಳನ್ನು ಉದ್ದರಿಸುವಾಗ ಮೃದು ಮನಸ್ಸಿನ ಐನ್ಸ್ಟೈನ ಸಾಕಾರ ರೂಪ ಸಾಕಾರಗೊಳ್ಳುತ್ತದೆ.   " ವ್ಯಕ್ತಿಗಾಗಿ ರಾಷ್ಟ್ರ ನಿರ್ಮಿತವಾದದ್ದೇ ವಿನಹ ರಾಷ್ಟ್ರ ಕ್ಕಾಗಿ ವ್ಯಕ್ತಿ ಅಲ್ಲ. ಅಂದರೆ ರಾಷ್ಟ್ರ ನಮ್ಮ ಸೇವಕ ಆಗಿರತಕ್ಕದ್ದು ನಾವು ಅದರ ಗುಲಾಮರಾಗಿರುವುದಲ್ಲ" ಎನ್ನುವ ಐನ್ಸ್ಟೈನರ ಸಾಲುಗಳನ್ನು ಓದುವಾಗ ಅಂದೆಂದೋ ಅವರು ಹೇಳಿದ್ದು ಇಂದಿಗೂ ಎಷ್ಟು ಪ್ರಸ್ತುತ ಎನಿಸುತ್ತದೆ ಮತ್ತು ಆ ಸಾಲುಗಳ ಒಳಾರ್ಥದ ಮೇಲೆ ನಮ್ಮ ದೇಶವನ್ನು ಕಟ್ಟಿಕೊಳ್ಳುವ ಹುರುಪು ತುಂಬುತ್ತದೆ . ಸಾಪೇಕ್ಷ ಸಿದ್ದಾಂತದ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿರುವಾಗ ಐನ್ಸ್ಟೈನ್ ಹೇಳುತ್ತಾರೆ " ನನ್ನ ಸಾಪೇಕ್ಷತಾ ಸಿದ್ಧಾಂತ ನಿಜವಾದದೆಂದು ಸಾಧಿಸಲ್ಪಟ್ಟರೆ ಜರ್ಮನಿ ನನ್ನನ್ನು ಜರ್ಮನ್ ವ್ಯಕ್ತ...