ಮಕ್ಕಳು ಮತ್ತು summer vacation
ಈಗ ಮಕ್ಕಳಿಗೆ ಶಾಲಾ ರಜ. ಬೆಳಗಿನ ವಾಕಿಂಗ್ ಹೋದಾಗ ಬೀದಿಬದಿಯಲ್ಲಿ ಆಡುತ್ತಿರುವ ಹತ್ತಾರು ಮಕ್ಕಳು ಸಿಗುತ್ತಾರೆ, ಮುದ್ದಾಗಿರುತ್ತಾರೆ ಕೂಡ. ಅದರ ಅರ್ಥ ನಾವುಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳಬಹುದು ಅಂತಲ್ಲ!
ಬೀದಿಯಲ್ಲಿ ಆಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರುಗಳು ಹೊಟ್ಟೆಗಿಲ್ಲದವರು, ದಿಕ್ಕೆಟ್ಟವರು, ಗತಿಯಿಲ್ಲದವರು ಎನ್ನುವ ಷರಾ ಬರೆಯಬಹುದು ಅಂತಲ್ಲ!
ಯಾವ ಶಾಲೆ, ಎಷ್ಟನೇ ತರಗತಿ, ಹೆಸರು ಏನು, etc etc ಮಾತುಗಳನ್ನು ಅವರೊಂದಿಗೆ ಆಡಬೇಕು ಅಂತಲ್ಲ!
ಮನೆಯಲ್ಲಿ ಉಳಿದ ಊಟ ಅಥವಾ ಅಲ್ಲೇ ಇರುವ ಕೈಗಾಡಿಯಲ್ಲಿ ಪಲಾವ್, ಚಾಕಲೇಟ್ ವಗೈರೆ ಕೊಡಿಸಿ ನಮ್ಮ ಅಹಂ ತಣಿಸಿಕೊಳ್ಳಬೇಕು ಅಂತಲ್ಲ!
ಅವರ ತಲೆಸವರುವ, ಕೆನ್ನೆ ಹಿಂಡುವ ಹಿರಿತನ ನಮಗಿದೆ ಅಂತಲ್ಲ!
ನಮಗೊಂದು ಒಳ್ಳೆಯ ಹಾಸ್ಟೆಲ್ ಗೊತ್ತು ಅಲ್ಲಿ ಒಳ್ಳೆಯ ಅನುಕೂಲಗಳಿವೆ ಸೇರಿಸುತ್ತೀವಿ ಎಂದು ತಂದೆತಾಯಿಗಳಿಗೆ ಆಮಿಷ ತೋರಿಸಬೇಕು ಅಂತಲ್ಲ!
ಹಾಗಾಗಿ ನೋಟವನ್ನು ಮಾತ್ರ ಆಸ್ವಾದಿಸಿ ಮುಂದಕ್ಕೆ ಹೋಗೋಣ. ಕಂಡ ಮಕ್ಕಳು ನಿಜಕ್ಕೂ ಅಸುರಕ್ಷಿತ, ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನಿಸಿದರೆ ಮಾತ್ರ 1098 ಅಥವಾ 112 ಗೆ ಕರೆ ಮಾಡಬೇಕು ಅಷ್ಟೇ.
ಈಗ ಮಕ್ಕಳ ಸುರಕ್ಷತೆಯ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚುರುಕಾಗಿದೆ. ಸರ್ಕಾರ ಹಲವಾರು ಯೋಜನೆಗಳಿಗೆ ಹಣವನ್ನೂ, ಸ್ಥಳವನ್ನೂ ನೀಡಿದೆ.
ಹಾಗಾಗಿ ನಾವುಗಳು ನಮ್ಮ ಪಾತ್ರವನ್ನು ನಿರ್ವಹಿಸಿದರೆ ಸಾಕು, ನಮ್ಮ ನಮ್ಮ ಇತಿಮಿತಿಯಲ್ಲಿ ಮಕ್ಕಳೆನ್ನುವ ಹೂವುಗಳನ್ನು ಬೇಸಿಗೆಯಲ್ಲೂ ಅರಳಿಸೋಣ.
#ಮಕ್ಕಳಹಕ್ಕುಗಳಸಪ್ತಾಹ
Google Image
Comments
Post a Comment