Law and Reproductive Health

ಮೊನ್ನೆ FBಯಲ್ಲಿಯೇ ಓದಿದೆ, ಆಗತಾನೆ ಹುಟ್ಟಿದ ಹಸುಗೂಸನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಕಷ್ಟ ಪಟ್ಟ ತಾಯಿಗೆ ಯಾರೋ ಒಂದಷ್ಟು ಜನ ಬಹಳವೇ ಕಷ್ಟಪಟ್ಟು ಮನೆ ಸೇರಿಸಿದೆವು ಎನ್ನುತ್ತಾ ಆ ಕೂಸು ಮತ್ತು ಹಸಿ ಬಾಣಂತಿಯ ಫೋಟೊ ಸಮೇತ ಬರೆದುಕೊಂಡಿದ್ದನ್ನು.

ಇವರು ಯಾಕೆ 1098 ಸಹಾಯವಾಣಿಗೆ ಕರೆಮಾಡಲಿಲ್ಲ ಎಂದುಕೊಂಡೆ. ಸಹಾಯ ಮಾಡಲು ಮುಂದಾಗುವ ಜನರ ಮೊದಲ ಗುಣಲಕ್ಷಣ ಸಂಘಟಿಸಿಕೊಳ್ಳುವುದು ಮತ್ತು  ಈಗಾಗಲೇ ಆ ನಿಟ್ಟಿನಲ್ಲಿ ಇರುವ ಸರ್ಕಾರಿ ಮತ್ತು ಸರ್ಕಾರೇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಸಂಪರ್ಕ ಇಟ್ಟುಕೊಳ್ಳುವುದು. ಇವುಗಳು ನಾನು ಕಲಿತಿರುವ ಪಾಠ.

ನಾ ಕಲಿತದ್ದನ್ನು ಅಷ್ಟು ಸುಲಭಕ್ಕೆ ಬೇರೆಯವರಿಗೆ ಕೊಡೋಲ್ಲ, ಸ್ವಾರ್ಥಿ ಹಾಗಾಗಿ ಅವರಿಗೆ ಏನೂ ಹೇಳಲಿಲ್ಲ. 😆😆😆

ಈವರೆಗೆ ಹೇಳಿದ್ದು ವೈಯಕ್ತಿಕ, ಈಗ ಇನ್ನು ಮುಂದಿನದು ಸಾರ್ವಜನಿಕ ದಾಖಲೆಯಲ್ಲಿ ಇರುವ ವಿಷಯ:
Reproductive Health ಎನ್ನುವುದು ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ರಲ್ಲಿ ನಮ್ಮ ಹಕ್ಕು.

ಹಾಗೆಯೇ Universal Declaration of Human Rights, Convention For Elimination of all All Forms of Violence  Against Women and Child Rights Coventionಗಳ ಪ್ರಕಾರ ಗರ್ಭವತಿ ಮತ್ತು ಬಾಣಂತಿ ಮತ್ತು ಕೂಸುಗಳಿಗೆ ಆರೋಗ್ಯಕರ ವಾತಾವರಣ, ಪೌಷ್ಠಿಕಾಂಶ, ಚಿಕಿತ್ಸೆಯ ಹಕ್ಕುಗಳು ಇವೆ.

ಇದರಲ್ಲಿ ಸಮಯ ಬಿದ್ದಾಗ ಅವರುಗಳನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಅಲ್ಲಿಂದ ಅವರ ವಾಸಸ್ಥಾನಕ್ಕೆ ತಲುಪಿಸಲು  ವ್ಯವಸ್ಥೆ ಮಾಡುವುದೂ ಸರ್ಕಾರದ ಜವಾಬ್ದಾರಿ ಆಗಿರುತ್ತದೆ.

FBನಲ್ಲಿ ನಾನು ಓದಿದೆ ಎಂದು ಮೇಲೆ ಹೇಳಿರುವ ಪ್ರಕರಣದಂತಹ ಒಂದು ಘಟನೆ ದೆಹಲಿಯಲ್ಲಿಯೂ ನಡೆದದ್ದನ್ನು ಗಮನಿಸಿದ ಅಲ್ಲಿನ ಉಚ್ಛ ನ್ಯಾಯಾಲಯವು :
"ಲಾಕ್ಡೌನ್ ಸಂದರ್ಭದಲ್ಲಿ ಬಸುರಿಯರ ಮತ್ತು ಬಾಣಂತಿಯರ ಅಗತ್ಯಕ್ಕೆ ಅನುಕೂಲವಾಗುವಂತೆ ಸಹಾಯವಾಣಿ ಒಂದನ್ನು ಈ ಕೂಡಲೆಯೇ ತೆರೆಯಬೇಕು" ಎಂದು ಆದೇಶ ನೀಡಿದೆ.

ನಮ್ಮ ಸರ್ಕಾರವೂ ಇದನ್ನು ಪಾಲಿಸಲು ಪರಿಶೀಲಿಸ ಬಹುದು.

ಹಾಗೆಯೇ ಇಂತಹ ಪ್ರಕರಣಗಳಲ್ಲಿ ಸಧ್ಯಕ್ಕೆ 1098 ಗೆ ಕರೆ ಮಾಡಿ ಹಸುಗೂಸುಗಳನ್ನು ಗರ್ಭದಿಂದಲೂ ರಕ್ಷಿಸುವ ಜವಾಬ್ದಾರಿ ಹೊತ್ತುಕೊಳ್ಳೋಣ.🙏

ಸಾಧ್ಯವಾದವರು FB ಯಲ್ಲಿ ಸರ್ಕಾರದ ಗಮನಕ್ಕೆ ತನ್ನಿ. ಮಾಧ್ಯಮದವರು ಸಹಕರಿಸಿ.

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್