ಆಪ್ತಸಮಾಲೋಚನೆ ಮತ್ತು Mental Helath

ಆಪ್ತಸಮಾಲೋಚನೆ ಮಾಡುವುದು ಎಂದರೆ ಶಾರುಖ್ ಖಾನ್ ನ ಕೆನ್ನೆಯ ಗುಳಿಯಷ್ಟು ರೊಮ್ಯಾಂಟಿಕ್ ಅಲ್ಲ.... #DearZindagi  ಯೇ ಇಲ್ಲಿ ಕೇಳು.....

ತಮ್ಮ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೋದವರನ್ನು 3-6 ತಿಂಗಳ course ಎಂದು ಹೇಳಿ ಅದಕ್ಕೆ ಒಂದು certificate ಕೊಟ್ಟು ಕಳುಹಿಸಿ, ಇನ್ನು ಮುಂದೆ ಅವರುಗಳು ಆಪ್ತ ಸಮಾಲೋಚನೆ ಮಾಡಬಹುದು ಎನ್ನುವ ನಾಯಿಕೊಡೆಗಳನ್ನು ಹುಟ್ಟಿಸುತ್ತಿರುತ್ತಾರೆ ಕೆಲವು ಸಂಸ್ಥೆಗಳು ಮತ್ತು ವೈದ್ಯರೂ.

ಆದರೆ ಆಪ್ತಸಮಾಲೋಚನೆ ಸುಲಭ ಕ್ಷೇತ್ರ ವಲ್ಲ. ವರ್ಷಾನುಗಟ್ಟಲೆ ಅದೇ ವಿಷಯದಲ್ಲಿ ಅಧ್ಯಯನ ಮಾಡಿದವರೂ ಈ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಕೆಲಸ ಮಾಡುತ್ತಲೇ ಇದ್ದಾರೆ.

ಚೆನ್ನಾಗಿ ಮಾತನಾಡುವವರು, ತಾಳ್ಮೆಯಿಂದ ಕೇಳಿಸಿಕೊಳ್ಳುವವರು, ಅಯ್ಯೋ ಪಾಪ ಎನ್ನುವವರು ಇವರೆಲ್ಲರೂ ಉದ್ಭವ ಮೂರ್ತಿಗಳಂತೆ ಆಪ್ತ ಸಮಾಲೋಚಕರು ಆಗಲು ಸಾಧ್ಯವಿಲ್ಲ.

ಮುಖಾಮುಖಿ ಸಮಾಲೋಚನೆಗಿಂತ ಫೋನ್ ಮೂಲಕ online ಮೂಲಕ ಮಾಡಲು ಹೆಚ್ಚಿನ ಕಲಿಕೆ ಬೇಕಿರುತ್ತದೆ.

*ಅದರಲ್ಲೂ ಮಕ್ಕಳಿಗೆ ಹದಿಹರೆಯದವರಿಗೆ ಆಪ್ತ ಸಮಾಲೋಚನೆ ಮಾಡಲು*  ಎಷ್ಟು ಅನುಭವ, ಜ್ಞಾನ ಇದ್ದರೂ ಕಡಿಮೆಯೇ.

ಸಹಾಯ ಕೇಳುವವರು ಸಮಾಲೋಚಕರ ಮೇಲೆ ಮಾನಸಿಕವಾಗಿ ಎಷ್ಟರ ಮಟ್ಟಿಗೆ ಅವಲಂಬಿತ ಆಗಿರುತ್ತಾರೆ, ಅವರನ್ನು ನಮ್ಮ ಅಂತರಂಗದ ಹೊಸಿಲು ದಾಟದಂತೆ ಯಾವಾಗ ತಡೆಹಿಡಿಯಬೇಕು, ಅದರಿಂದ ಅವರ ಮೇಲೆ ಆಗುವ ಪರಿಣಾಮ ಏನು , ಅವುಗಳ ನಿಭಾವಣೆ ಹೇಗೆ ಎನ್ನುವ ಆರಿವು ಸಾಕಷ್ಟು ಅನುಭವದಿಂದ  ಮಾತ್ರ ಬರುತ್ತದೆ.

ಅಷ್ಟೇ ಅಲ್ಲ ಸಮಾಲೋಚಕರು ಸಹಾಯ ನೀಡುತ್ತಾ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲು.

#DearZindagi ಸಿನೆಮಾದಷ್ಟು  ವರ್ಣಮಯ ಅಲ್ಲ ಆಪ್ತಸಮಾಲೋಚನೆ ನೀಡುವುದು.

ಈ ಕಷ್ಟಕಾಲದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆಪ್ತ ಸಮಾಲೋಚನೆ ಎನ್ನುವ ವ್ಯಾಪಾರೀಕರಣಕ್ಕೆ ಬಲಿಯಾಗಿ ಮತ್ತಷ್ಟು ಕಷ್ಟಕ್ಕೆ  ಒಳಗಾಗುವುದು ಬೇಡ.

 ವಿದ್ಯೆ ಮತ್ತು ಅದರಿಂದ ಬರುವ ಅನುಭವಕ್ಕೆ ಬೆಲೆ ಕೊಟ್ಟಾಗಲೇ #LoveyouZindagi ಎಂದು ಹಾಡಲಾಗೋದು

#MentalHealth

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್