ಹೊಸ ಅಪರಾಧ ಕಾನೂನುಗಳ Implementaion ವ್ಯಾಪ್ತಿ

 ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು 1 ಜುಲೈ 2024ರಿಂದ ಜಾರಿಗೆ ಬಂದಿರುವ ಅಪರಾಧ ಕಾನೂನುಗಳ ಪ್ರಕಾರ ಮತ್ತೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಬಹುಪಾಲು ಜನರಲ್ಲಿ ಸಹಜವಾಗಿ ಮೂಡಿದೆ.


ನಮ್ಮ ಸಂಪೂರ್ಣ ನ್ಯಾಯ ವ್ಯವಸ್ಥೆಯೇ ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಜಸ್ಟಿಸ್ ಎನ್ನುವ ಪರಿಕಲ್ಪನೆಯ ಆಧಾರಲ್ಲಿ ಇದೆ. ಇದರ ಅಡಿಯಲ್ಲಿ ಅಪರಾಧ ಕಾನೂನುಗಳಿಗೆ (ಖಚಿತವಾಗಿ ನಮೂದು ಮಾಡದ ಹೊರತು) ಜಾರಿಗೆ ಬರುವ ಮೊದಲಿನಿಂದಲೂ ಕಾರ್ಯ ನಿರ್ವಹಿಸುವ ಅಧಿಕಾರ ಮತ್ತು ವ್ಯಾಪ್ತಿ ಇರುವುದಿಲ್ಲ. 


ಹಾಗೆಯೇ ಒಂದೇ ಅಪರಾಧಕ್ಕೆ ಎರಡು ಬಾರಿ ಪ್ರಕ್ರಿಯೆ ನಡೆಸುವ ಹಾಗೂ ಇಲ್ಲ. ಈ ಹಿನ್ನಲೆಯಲ್ಲಿ 1 ಜುಲೈ 2024ರಿಂದ ಜಾರಿಗೆ ಬಂದಿರುವ ಕಾನೂನುಗಳು 30 ಜೂನ್ 2024 ರಾತ್ರಿ 12 ಗಂಟೆಯ ನಂತರ ಘಟಿಸುವ ಅಪರಾಧಗಳಿಗೆ ಮಾತ್ರ ಅನ್ವಯ ಆಗುತ್ತದೆ.


ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳು ಮೊದಲಿನ ಕಾನೂನುಗಳಾದ ಇಂಡಿಯನ್ ಪೀನಲ್ ಕೋಡ್, ಕ್ರಿಮಿನಲ್ ಪ್ರೊಸೀಜರ್ ಕೋಡ್ ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆ ಇವುಗಳ ಅಡಿಯಲ್ಲಿಯೇ ಮುಂದುವರೆಯುತ್ತದೆ. ತೀರ್ಪುಗಳು ಆ ಕಾನೂನುಗಳಲ್ಲಿ ನೀಡಿರುವ ನಿರ್ದೇಶನಕ್ಕೆ ಒಳಗಾಗಿಯೇ ಇರುತ್ತದೆ. 


ಹೊಸ ಕಾನೂನು ಜಾರಿಗೆ ಬಂದ ನಂತರದ ಸಮಯದಲ್ಲಿ ಘಟಿಸುವ ಅಪರಾಧವು ಈ ಅವದಿಯಲ್ಲಿಯೇ ಎಫ್ ಐ ಆರ್ ದಾಖಲಾಗುವುದರಿಂದ ಇದರಲ್ಲಿ ಯಾವುದೇ ದ್ವಂದ್ವ ಇರಲಾರದು. 


ಆದರೆ ಹಳೆಯ ಕಾನೂನುಗಳು ಜಾರಿಗೆಯಲ್ಲಿ ಇದ್ದಾಗ ಫಟಿಸಿದ ಅಪರಾಧ, ಹೊಸ ಕಾನೂನುಗಳು ಜಾರಿಗೆ ಬಂದ ನಂತರ ಗಮನಕ್ಕೆ ಬಂದು ಎಫ್ ಐ ಆರ್ ಹೊಸ ಕಾನೂನುಗಳು ಜಾರಿಯಾದ ನಂತರ ದಾಖಲಾದರೆ ಯಾವ ಕಾನೂನಿನ ಅಡಿಯಲ್ಲಿ ನ್ಯಾಯಾಲಯ ನಿರ್ವಹಿಸಲಿದೆ? 


ಭಾರತೀಯ ನ್ಯಾಯ ಸಂಹಿತೆ 2023 ಎನ್ನುವುದು (ಮೊದಲಿನ ಇಂಡಿಯನ್ ಪೀನಲ್ ಕೋಡ್) ಮೂಲ ಕಾನೂನು ಅಥವಾ ವಿಷಯನಿಷ್ಠ ಕಾನೂನು (Substantive Law). ಇದರಲ್ಲಿ ಏನು ಮಾಡಿದರೆ ಅಥವಾ ಮಾಡದಿದ್ದರೆ, ಯಾರು ಮಾಡಿದರೆ, ಹೇಗೆ ನಡೆದರೆ, ಯಾವಯಾವ ಕಾರ್ಯಗಳನ್ನು ಅಪರಾಧ ಎನ್ನಲಾಗುತ್ತದೆ ಅದರ ಪ್ರಕಾರ ಅವುಗಳಿಗೆ ಏನೇನು ಶಿಕ್ಷೆಯನ್ನು ನೀಡಬೇಕು ಎನ್ನುವುದನ್ನು ವ್ಯಾಖ್ಯಾನಿಸಿ ವಿವರಿಸಲಾಗಿದೆ.


 ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಇದು ಪ್ರಕ್ರಿಯಾ ಕಾನೂನು (Procedural Law). ಭಾರತೀಯ ನ್ಯಾಯ ಸಂಹಿತೆಯಲ್ಲಿ ಹೇಳಿರುವ ಅಂಶಗಳನ್ನು ಜಾರಿಗೆ ತರಲು ನಡೆಸಬೇಕಾದ ವಿಧಾನ (Method) ಗಳನ್ನು ಭಾರತೀಯ ನಾಗರೀಕ ಸುರಕ್ಷಾ ಕಾನೂನಿನಲ್ಲಿ ಹೇಳಲಾಗಿದೆ. 


ಈ ಹಿನ್ನಲೆಯಲ್ಲಿ 1 ಜುಲೈ 2024 ರ ಹಿಂದೆಯೇ ನಡೆದಿರುವ ಅಪರಾಧಕ್ಕೆ ಆ ದಿನದ ನಂತರ ಎಫ್ ಐ ಆರ್ ದಾಖಲಾದರೆ ಇಂಡಿಯನ್ ಪೀನಲ್ ಕೋಡ್‍ನಲ್ಲಿ ನೀಡಿರುವ ವ್ಯಾಕ್ಯಾನದ ಅಡಿಯಲ್ಲಿ ಅಪರಾಧವನ್ನು ವಿಂಗಡಿಸಿ/ಗುರುತಿಸಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಇದರ ಅಡಿಯಲ್ಲಿ ಪ್ರಕ್ರಿಯೆ ನಡೆಸಲಾಗುತ್ತದೆ.

#BNSS

#BNS




Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ