Sakshigopala in VK

ಹಳ್ಳಿಯಲ್ಲೊಬ್ಬ ವೃದ್ಧನಿಗೆ ಮಥುರೆಯ ಕೃಷ್ಣನ ದರ್ಶನ ಮಾಡಬೇಕೆನ್ನುವ ಹೆಬ್ಬಯಕೆ. ಹೋಗಲು ಕೈಲಾಗುವುದಿಲ್ಲ. ಕೇರಿಯ ಯುವಕನೊಬ್ಬ ದರ್ಶನ ಮಾಡಿಸಿಕೊಂಡು ಬರುತ್ತೇನೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡೆನ್ನುತ್ತಾನೆ. ಹಿರಿಯ ಒಪ್ಪಿ ಭಾಷೆ ಕೊಡುತ್ತಾನೆ. ಯುವಕ ಆತನನ್ನು ಭುಜದಲ್ಲಿ ಹೊತ್ತು ಕಾಲ್ನಡಿಗೆಯಲ್ಲಿ ಒಡಿಶಾದ ಪುರಿಯಲ್ಲಿರುವ ಹಳ್ಳಿಯಿಂದ ಮಥುರೆಗೆ ಕರೆದುಕೊಂಡು ಹೋಗಿ ದೇವದರ್ಶನ ಮಾಡಿಸುತ್ತಾನೆ. ನಂತರ ವೃದ್ಧ ಮಗಳನ್ನು ಕೊಡಲು ನಿರಾಕರಿಸುತ್ತಾನೆ ತಾನು ಹಾಗೆ ಮಾತು ಕೊಟ್ಟಿದ್ದಕ್ಕೆ ಸಾಕ್ಷಿಯೇನಿದೆಯೆಂದು ಸವಾಲು ಹಾಕುತ್ತಾನೆ. ನೊಂದ ಯುವಕ ಸೀದಾ ಮಥುರೆಗೆ ಬಂದು ಕೃಷ್ಣ ನೀನೇ ತಾನೆ ನಮ್ಮ ನಡುವಿನ ಮಾತಿಗೆ ಸಾಕ್ಷಿಯಾಗಿದ್ದವನು ಈಗ ತನ್ನ ಹಳ್ಳಿಗೆ ಬಂದು ಸಾಕ್ಷಿ ನುಡಿಯೆನ್ನುತ್ತಾನೆ. ಯುವಕನ ಶ್ರದ್ಧಾ ಭಕ್ತಿಗೆ ಮೆಚ್ಚಿದ ಭಗವಂತ ನಿನ್ನ ಹಿಂದೆಯೇ ಬರುತ್ತಿರುತ್ತೇನೆ, ನೀನು ಹಿಂದಿರುಗಿ ನೋಡದೆ ಊರು ಸೇರಬೇಕು. ನಡುವಿನಲ್ಲಿ ಹಿಂದಿರುಗಿ ನೋಡಿದರೆ ನಾನಲ್ಲಿಯೇ ನಿಂತು ಬಿಡುತ್ತೇನೆ ಎನ್ನುವ ಷರತ್ತು ತೋರುತ್ತಾನೆ. ಗೋಪಾಲನ ಹೆಜ್ಜೆ ಸದ್ದನ್ನಾಲಿಸುತ್ತಾ ಯುವಕನ ಪಯಣ ಆರಂಭವಾಗುತ್ತದೆ. ಊರು ತಲುಪಲು ಒಂದಿಷ್ಟೇ ದೂರವಿದೆಯೆನ್ನುವಾಗ ಯುವಕ ಹಿಂದಿರುಗಿ ನೋಡುತ್ತಾನೆ. ಗೋಪಾಲಕೃಷ್ಣ ಅಲ್ಲಿಯೇ ಮೂರ್ತಿಯಾಗಿ ನಿಂತು ಬಿಡುತ್ತಾನೆ. ದು:ಖಿತನಾದ ಯುವಕ ಗ್ರಾಮಸ್ಥರಿಗೆ ಕಲ್ಲಾದ ದೇವರನ್ನು ತೋರಿದಾಗ ಅವನ ಸತ್ಯಸಂಧತೆಯನ್ನು ಒಪ್ಪಿ ವೃದ್ಧನ ಮಗ...