BNS

 ತಮ್ಮಿಷ್ಟದ ನಾಯಕನ ಪರವಾಗಿ ನಿಲ್ಲಲು ಎಲ್ಲರೂ ಐವಾನ್ ಡಿಸೋಜಾ ತರಹ ಭಾರತವನ್ನು ಬಾಂಗ್ಲಾ ಮಾಡುತ್ತೇವೆ, ದಂಗೆ, ಮುತ್ತಿಗೆ ಹಾಕುತ್ತೇವೆ ಎನ್ನುವ ಮುನ್ನ; ಶರಟು ಪ್ಯಾಂಟು ಹರಿದುಕೊಂಡು ಚೀರುವ ಮುನ್ನ , ಸಾಮಾಜಿಕ ಜಾಲತಾಣದಲ್ಲಿ ಕತ್ತಿ ಝಳಪಿಸುವ ಮೊದಲು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಅನ್ನು ಒಮ್ಮೆ ಓದಿದರೆ ತಮ್ಮತಮ್ಮ ಸ್ಥಾನ ಎಲ್ಲಿ ಎಂದು ಗುರುತಿಸಿಕೊಳ್ಳಲು ಅನುಕೂಲ ಆದೀತು.


" ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ, ಮಾತುಗಳಿಂದ, ಬರಹದಿಂದ. ಚಿನ್ಹೆ, ಸಂಜ್ಞೆಗಳಿಂದ,ಅಥವಾ ಪ್ರತ್ಯಕ್ಷ ಪ್ರಾತಿನಿಧ್ಯದಿಂದ, ಅಥವಾ ಎಲೆಕ್ಟ್ರಾನಿಕ್ ಸಂವಹನದಿಂದ ಅಥವಾ ಹಣಕಾಸಿನ ಬಳಕೆಯಿಂದ ಅಥವಾ ಇತರ ಯಾವುದೇ ರೀತಿಯಿಂದ;

ಪ್ರಚೋದಿಸುವ ಅಥವಾ ಪ್ರಚೋದಿಸಲು ಯತ್ನಿಸಿದರೆ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು , ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸಿದರೆ;

ಅದರ ಮೂಲಕ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟಾದರೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡವನ್ನೂ ವಿಧಿಸಲಾಗುತ್ತದೆ." 

ಇದೊಂದು ಜಾಮೀನು ರಹಿತ ಅಪರಾಧವಾಗಿರುತ್ತದೆ.

#BNS

#BNSS #law #ಹೊಸಅಪರಾಧಕಾನೂನುಗಳು 


https://www.facebook.com/share/4ztJHpVyTPBKHQwT/?mibextid=xfxF2i



Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ