Training at Commissioner's office
ಸಮವಸ್ತ್ರದಲ್ಲಿ ಇರುವ ಪೊಲೀಸರಿಗೆ ಪಾಠ ಮಾಡುವುದು ಎಂದರೆ ವಿನಮ್ರತೆಗೆ ಹೊಸ ವ್ಯಾಖ್ಯಾನ ಕಂಡುಕೊಂಡಂತೆ....
ವೈಯಕ್ತಿಕವಾಗಿ ಸಂತೋಷ ಮತ್ತು ಸಮಾಧಾನ ಕೊಡುವ ವಿಷಯ ಯಾಕೆಂದರೆ ...
ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪೋಲೀಸರ ಜೊತೆ ಮಾತನಾಡುವುದು, ಅವರನ್ನು ಗಮನಿಸುವುದು ನನ್ನ ಆಸಕ್ತಿ. ಅದರಲ್ಲಿನ ಸಣ್ಣ ಅನುಭವದಿಂದ ರೂಪಿತವಾದ ಚಿಕ್ಕ ಅಭಿಪ್ರಾಯ ಎಂದರೆ ನಮ್ಮ ದೇಶದ ಪೊಲೀಸರು ವಿಪರೀತ ಬುದ್ಧಿವಂತರು, unfortunately ಅದು ಅವರಿಗೆ ಗೊತ್ತಿದೆ ಮತ್ತು ಗೊತ್ತಿಲ್ಲ ಕೂಡ. ಹಾಗಾಗಿ ವೇದಿಕೆ ಮೇಲೆ ನಿಂತು ಅವರಿಗೆ ಏನೇ ಹೇಳಬೇಕಾದಾಗ ಹೆಚ್ಚಿನ ಓದು, ಸಂಶೋಧನೆ, ಕರಾರುವಾಕ್ ಅಂಕಿಅಂಶ ಬೇಕಾಗುತ್ತದೆ. ಇದೆಲ್ಲಾ ತಯಾರಿ ಮಾಡಿಕೊಳ್ಳುವಾಗ ಜೀವ ವಿನೀತವಾಗಲೇ ಬೇಕು.
ಇಲ್ಲಿನ ಫೋಟೋ ಹಿಂದೊಮ್ಮೆ ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಪೊಲೀಸರಿಗೆ ಕಾನೂನು ವಿಷಯದ ತರಬೇತಿ ತೆಗೆದು ಕೊಂಡಾಗಿನದ್ದು.
ಮಾಡು ಇಲ್ಲವೇ ನಡಿ ಎನ್ನುವ #FamilyCourtಕಲಿಕೆ
Comments
Post a Comment