ಆತ್ಮಹತ್ಯೆ ಬೆದರಿಕೆ - Law Point


 

ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನೂರಕ್ಕೂ ಹೆಚ್ಚು ಪುಟಗಳ ವಿವರ ಬರೆದಿಟ್ಟು ಅದರ ವೀಡಿಯೊ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಷಯ ಇನ್ನೂ ಮರೆಯಲಾಗಿಲ್ಲ. ಮೇಲ್ನೋಟಕ್ಕೆ ಆತನ ಪತ್ನಿ ಅಪರಾಧಿಯಂತೆ ಕಾಣುತ್ತಿದ್ದಾಳೆ ಹಾಗಾಗಿ ತನಿಖೆ ಆಗಬೇಕು ಎಂದು ಉಚ್ಚನ್ಯಾಯಾಲವೂ ಹೇಳಿತ್ತು. ಈಗ ಆಕೆಗೆ ಜಾಮೀನು ಸಿಕ್ಕಿದೆ.


ಈ ಘಟನೆಯ ನಂತರ ನೊಂದ ಗಂಡ ಎಂದು ಹೇಳಿಕೊಂಡು ಮತ್ತೊಂದು ಆತ್ಮಹತ್ಯೆಯೂ ಆಯಿತು. ವಿಷಾದವೆಂದರೆ ನಿನ್ನಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಯರನ್ನು ಬೆದರಿಸಲು ಗಂಡಂದಿರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.


ರೇವಮ್ಮನ ಅಣ್ಣನ ಮಗ ಜೈಲಿನಲ್ಲಿದ್ದಾನೆ. ಅವನ ಹೆಂಡತಿ ಜಾಮೀನು ಕೊಡಿಸಲು ಇವಳ ಹಿಂದೇರಿದ್ದಾಳೆ. ಆಗುವುದಿಲ್ಲ ಎಂದವಳಿಗೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಒತ್ತಡ ಹಾಕುತ್ತಿದ್ದಾಳೆ. ಹೆದರಿದ ರೇವಮ್ಮ ಆಳುತ್ತಾ ಆಫೀಸಿಗೆ ಬಂದಿದ್ದಳು. 


ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ, ಬಾಡಿಗೆಗೆ ಮನೆ ಬಿಡಿಸಿದರೆ, ಕೆಲಸ ಕೊಡದಿದ್ದರೆ ಹೀಗೆ ಯಾವುದೇ ಕಾರಣವನ್ನು ಕೊಟ್ಟು “ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ” ಎನ್ನುವ ಬೆದರಿಕೆಗೆ ಬಗ್ಗುವ, ಹೆದರುವ ಅವಶ್ಯಕತೆ ಇಲ್ಲ. ಕರ್ನಾಟಕ ಉಚ್ಚನ್ಯಾಯಾಲಯವು, ಕ್ರಿಮಿನಲ್ ಪಿಟಿಷನ್ ಸಂಖ್ಯೆ : 7001/2019 ನೌಷಾದ್ ಅಹಮದ್ Vs ಕರ್ನಾಟಕ ರಾಜ್ಯ ಕಂಟೋನ್ಮೆಂಟ್ ಪೊಲೀಸ್ ಠಾಣೆ ಈ ಪ್ರಕರಣದಲ್ಲಿ, ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ.


ಸರಿಸುಮಾರು ಇದೆ ಅಭಿಪ್ರಾಯವನ್ನು ಸರ್ವೋಚ್ಚನ್ಯಾಯಾಲಯವೂ ಕ್ರಿಮಿನಲ್ ಅಪೀಲ್ ಸಂಖ್ಯೆ: 1388/2014 ಪಟೇಲ್ ಬಾಬುಬಾಯ್ ಮನೋಹರದಾಸ್ Vs. ಗುಜರಾತ್ ಈ ಪ್ರಕರಣದಲ್ಲಿ ವ್ಯಕ್ತ ಪಡಿಸಿದೆ. ಹಾಗಾಗಿ ತಪ್ಪು ಮಾಡದೆಯೇ ಇದ್ದಾಗ, ಪ್ರಚೋದನೆಯನ್ನೂ ನೀಡದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಬೆದರಿಕೆಗೆ ಹೆದರುವ ಅವಶ್ಯಕತೆ ಇಲ್ಲ ಮತ್ತು ಹಾಗೇ ಒತ್ತಡ ಹೇರುವವರ ಮೇಲೆ ಭಾರತೀಯ ನ್ಯಾಯ ಸಂಹಿತೆ 2023 ಇದರಲ್ಲಿ ಸೆಕ್ಷನ್ 351ರ ಅಡಿಯಲ್ಲಿ FIR ಹಾಕಬಹುದಿರುತ್ತದೆ. ಈ ಅಪರಾಧಕ್ಕೆ 2 ರಿಂದ 7 ವರ್ಷಗಳ ಜೈಲು ಶಿಕ್ಷೆ ಇರುತ್ತದೆ.

Comments

  1. Ma'am I think this article needed a more detailed explanation, because I myself had been a victim to this for a long time. My husband would threaten to hang himself, drink poison or jump in river if I studied, worked outside home and many more things which he felt was insult to him. I held myself back out of fear and suffered a lot for many years until finally with encouragement from a teenager, I decided to face the consequences even if he committed suicide and took up my education. Today he is alive and enjoying my earnings. But, to imagine how long I held on the fear of the threat makes me shudder even now. ಮೇಡಂ, ಈ ಲೇಖನಕ್ಕೆ ಹೆಚ್ಚು ವಿವರವಾದ ವಿವರಣೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾನು ಬಹಳ ಸಮಯ ಇದಕ್ಕೆ ಬಲಿಯಾಗಿದ್ದೆ. ನನ್ನ ಗಂಡ ನಾನು ಓದಿದರೆ, ಮನೆಯ ಹೊರಗೆ ಕೆಲಸ ಮಾಡಿದರೆ ನೇಣು ಹಾಕಿಕೊಳ್ಳುತ್ತೇನೆ, ವಿಷ ಕುಡಿಯುತ್ತೇನೆ ಅಥವಾ ನದಿಗೆ ಹಾರುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದನು. ಭಯದಿಂದ ನಾನು ನನ್ನನ್ನು ತಡೆದುಕೊಂಡೆ ಮತ್ತು ಹಲವು ವರ್ಷಗಳ ಕಾಲ ಬಹಳಷ್ಟು ಬಳಲಿದೆ, ಅಂತಿಮವಾಗಿ ಅವನು ಆತ್ಮಹತ್ಯೆ ಅದರ ಪರಿಣಾಮ ಎದುರಿಸುತ್ತೇನೆ ಎಂದು ನನ್ನ ಶಿಕ್ಷಣವನ್ನು ಮುಂದುವರಿಸಿದೆ. ಪರಿಣಾಮಗಳನ್ನು ಎದುರಿಸಲು ನಿರ್ಧರಿಸಿದೆ. ಇಂದು ಅವನು ಜೀವಂತವಾಗಿದ್ದಾನೆ ಮತ್ತು ನನ್ನ ಗಳಿಕೆಯನ್ನು ಆನಂದಿಸುತ್ತಿದ್ದಾನೆ. ಆದರೆ, ಬೆದರಿಕೆಯ ಭಯವನ್ನು ನಾನು ಎಷ್ಟು ದಿನ ಸಹಿಸಿದೆ ಎಂದು ಊಹಿಸಿದರೆ ಈಗಲೂ ನನಗೆ ನಡುಕ ಬರುತ್ತದೆ.

    ReplyDelete
  2. I have seen many.men doing this in a domestic violence situation, Women have nefarious rounds of investigation, court hearing to get out of it and some struggle with guilt, this is ultimate and perpetual harassment by abuser

    ReplyDelete
  3. ಇಂತಹ ಗಂಡಸರು ಅನೇಕರು ಇದ್ದಾರೆ... ಈ ವಿಚಾರ ದಿಂದ ತಿಳಿದಿದ್ದು ಏನೆಂದರೆ ನಮ್ಮ ತಪ್ಪುಲ್ಲದೆ ಅವರೇ ತಪ್ಪು ಮಾಡಿ ಆತ್ಮಹತ್ಯೆ ಮಾಡಿ ಕೊಂಡರೆ ಅದಕ್ಕೆ ನಾವು ಹೊಣೆ ಅಲ್ಲ

    ReplyDelete

Post a Comment

Popular posts from this blog

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ