Surrogacy ಬಾಡಿಗೆ ತಾಯ್ತನ

ಬಾಡಿಗೆ ತಾಯ್ತನ (surrogacy) ನಮ್ಮ ದೇಶದಲ್ಲಿ shock waves ಹುಟ್ಟಿಸಿದ್ದ ಕಾಲದಲ್ಲಿ, ಅದು ಅಪರಾಧವೂ ಹೌದೋ ಅಲ್ಲವೋ ಎನ್ನುವುದು ಕಾನೂನಿಗೂ ತಿಳಿದಿರಲಿಲ್ಲ. ವೈದ್ಯರಲ್ಲೂ ಗುಸುಗುಸು ಮಾತ್ರ ಇತ್ತು. ಮೊದಲ ಬಾರಿಗೆ ಕನ್ನಡದಲ್ಲಿ ಬಾಡಿಗೆ ತಾಯ್ತನ ವಿಷಯದಲ್ಲಿ ಲೇಖನ ಪ್ರಕಟಿಸಿದ್ದು ಸುಧಾ ವಾರಪತ್ರಿಕೆ ನಂತರ ಪ್ರಜಾವಾಣಿ ಪತ್ರಿಕೆ. ಪತ್ರಕರ್ತೆ ಸಿ ಜಿ ಮಂಜುಳಾ ಅವರು ಲೇಖನವನ್ನು ನನ್ನಿಂದ ಬರೆಸಿದ್ದದ್ದು ಖುಷಿಯ ವಿಷಯ. ನಂತರ ಹತ್ತಾರು ಬದಲಾವಣೆಗಳು ಕಾನೂನು ಮತ್ತು ಮೆಡಿಕಲ್ ಕೌನ್ಸಿಲ್ ಗಳಲ್ಲಿ ಆಗಿವೆ, ಎಲ್ಲವನ್ನೂ ಗಮನಿಸುತ್ತಾ ಬರೆಯುತ್ತಾ ಬಂದಿದ್ದೇನೆ. ಈಗ ಬಾಡಿಗೆ ತಾಯ್ತನಕ್ಕೆ ಕಾನೂನು ಸಮ್ಮತಿ ಸಿಕ್ಕಿದೆ. ಇಬ್ಬರೂ ತಾಯಿಯರಿಗೆ ಉದ್ಯೋಗದಲ್ಲಿ ರಜೆಯ ಅನುಕೂಲವನ್ನೂ ನೀಡಲಾಗಿದೆ. ಇದರ ಬಗ್ಗೆ ಈ ದಿನದ ಪ್ರಜಾವಾಣಿಯಲ್ಲಿ ನನ್ನ ಅಭಿಪ್ರಾಯ ಪ್ರಕಟವಾಗಿದೆ. ದಯವಿಟ್ಟು ಓದಿ 🙏