ಪುಸ್ತಕ ಬೇಕೇ ಸಂದೇಶ ಕಳಿಸಿ



ಒಮ್ಮೆ 6 ನೆಯ ತರಗತಿಯ ಹುಡುಗ ಅಪ್ಪನ ಜೊತೆ ಒಬ್ಬರ ಮನೆಗೆ ಹೋಗಿದ್ದಾಗ, ಅವರ ಮನೆಯ ಟೀಪಾಯ್ ಮೇಲೆ ಎಕನಾಮಿಕ್ಸ್ ವಿಷಯಕ್ಕೆ ಸಂಬಂಧಿಸಿದ ದೊಡ್ಡ ಪುಸ್ತಕ ಇಟ್ಟಿದ್ದರು. ಆ ಬಾಲಕ ಕುತೂಹಲದಿಂದ ಆ ಪುಸ್ತಕವನ್ನು ಕೈಗೆ  ತೆಗೆದುಕೊಂಡು, ನೋಡಲು ಮೊದಲನೆಯ ಪುಟ ತಿರುವಿದ ಕೂಡಲೇ ಅವನ ಬಹಳ ವಿದ್ಯಾವಂತ ಅಪ್ಪ " ಏಯ್ ನಿನಗೇನು ಗೊತ್ತಾಗತ್ತೆ, ಸುಮ್ಮನೆ ಇಡು ಅಲ್ಲಿ " ಅಂತ ಗಡುಸಾಗಿ ಹೇಳಿ ಅಲ್ಲಿಗೆ ಆ ಹುಡುಗನ  ಪುಸ್ತಕ ಯಾನ ನಿಲ್ಲಿಸಿದರು!!!

ಇದು ಮಕ್ಕಳ ಪುಸ್ತಕ ಇದು ದೊಡ್ಡವರದ್ದು ಎನ್ನುವ ವರ್ಗೀಕರಣವನ್ನು ಎಂದೂ ಒಪ್ಪದ ನನಗೆ ಈ ಘಟನೆ ನೆನಪಾದಾಗಲೆಲ್ಲಾ  ಬೇಜಾರಾಗುತ್ತದೆ.

ಈಗಲೂ ಅದೇ ನಂಬಿಕೆಯ ನಾನು #ಪುಸ್ತಕಬೇಕೇಸಂದೇಶಕಳಿಸಿ  ಅಂತ ಶುರು ಮಾಡಿರುವ ಅಭಿಯಾನದಲ್ಲಿ ನನ್ನ ವೈಯಕ್ತಿಕ ಗ್ರಂಥಾಲಯವನ್ನು ಕಿರಿದು ಗೊಳಿಸಿಕೊಳ್ಳುವಾಗ 119 ಪುಸ್ತಕಗಳನ್ನು ಈ ಮಕ್ಕಳಿಗೆ ಕಳಿಸಿಕೊಟ್ಟೆ. ಪಿ ಲಂಕೇಶ್, ಅನಂತಮೂರ್ತಿ ಅವರುಗಳಿಂದ ಹಿಡಿದು ಬೇರೆ ಸಾಹಿತ್ಯಕ್ಕೆ, ರಾಜಕೀಯಕ್ಕೆ, ಬದುಕಿಗೆ ಸಂಬಂಧಪಟ್ಟ ಎಲ್ಲಾ ಪುಸ್ತಕಗಳ  ಕಾಂಬಿನೇಷನ್ ಈಗ ಇವರ ಕೈಯಲ್ಲಿ ಇದೆ. ಖುಷಿ ನನ್ನದಾಗಿದೆ. 🤗🤗💕🌻

#ನೂರುಪುಸ್ತಕನೂರುಮಕ್ಕಳು

 

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ