Constitution ಮತ್ತು ಮಹಿಳೆ

ಆ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತರಬೇತಿ ನಡೆಸಿದ್ದ ಮೂರನೆಯ ದಿನಕ್ಕೆ ಅಲ್ಲಿನ ಜೀವಶಾಸ್ತ್ರ ವಿಷಯದ ಅಧ್ಯಾಪಕಿ ಫೋನ್ ಮಾಡಿ ತಮ್ಮ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಷಯ ತಿಳಿಸಿ ಆ ಬಾಲಕಿಯನ್ನು ಕರೆದುಕೊಂಡು ಬಂದರು. ಅವಳೊಡನೆಯ ದೀರ್ಘ ಮಾತುಕತೆಯಿಂದ ತಿಳಿದು ಬಂದ ವಿಷಯ ತಂದೆಯಿಲ್ಲದ ಅವಳ ತಾಯಿಯ ಎರಡನೆಯ ಗಂಡ ( ಇಟ್ಟುಕೊಂಡವನು) ಕಳೆದ ಮೂರು ವರ್ಷಗಳಿಂದ ನಿತ್ಯವೂ ಇವಳ ಮೇಲೆರಗುತ್ತಿದ್ದಾನೆ. ಮಾಹಿತಿ ಶಿಬಿರದಲ್ಲಿ ಭಾಗವಹಿಸುವವರೆಗೂ ಈ ಹುಡುಗಿಗೆ ಅದು ತನ್ನ ಮೇಲೆ ನಡೆಯುತ್ತಿರುವ ಅಪರಾಧ ಎನ್ನುವುದೇ ತಿಳಿದಿರಲಿಲ್ಲ. ನ್ಯಾಯಾಲಯದಲ್ಲಿ ಗಂಡನೇ ಹಾಕಿರುವ ವಿಚ್ಚೇಧನ ಪ್ರಕರಣದಲ್ಲಿ ತನ್ನ ಮಗುವನ್ನು ತಾನು ಪಡೆದುಕೊಳ್ಳುವ ಹಾಗಿಲ್ಲ ಯಾಕೆಂದರೆ ತಂದೆಯೇ ಅದರ ಯಜಮಾನ ಎಂದು ವಕೀಲರು ಹೇಳಿಬಿಟ್ಟಿದ್ದಾರೆ. ಹಾಗಾಗಿ ಅವಳೀಗ ಮಾನಸಿಕ ರೋಗಕ್ಕೆ ತುತ್ತಾಗಿದ್ದಾಳೆ. ಹೆಣಗಾಡುತ್ತಿದ್ದಾಳೆ. ಹೀಗೆ ತಾವು ಅಸಮಾನ ಸಮಾಜದಲ್ಲಿ ಇದ್ದೇವೆ, ತಮ್ಮನ್ನು ಕನಿಷ್ಠ ಮನುಷ್ಯರನ್ನಾಗಿಯೂ ಕಾಣುತ್ತಿಲ್ಲ ಎನ್ನುವ ಅರಿವೂ ಇಲ್ಲದ ಸ್ವಾತಂತ್ರ್ಯ ಪೂರ್ವದ ಮಹಿಳೆಯರಲ್ಲಿ ಸಮಾನತೆ, ಮಾನವ ಹಕ್ಕುಗಳು ಎನ್ನುವ ಪ್ರಜ್ಞೆಯನ್ನು ಮೊದಲ ಬಾರಿಗೆ ಮೂಡಿಸಿದ್ದು ನಮ್ಮ ಸಂವಿಧಾನ. ಸೂಕ್ಷ್ಮತೆಯುಳ್ಳ ಕೆಲವೇ ಮಹಿಳೆಯರು ದನಿಯೆತ್ತುವಾಗ ಅವುಗಳು ಪುರುಷಮನದ ಸಮಾಜದಲ್ಲಿ ಉಡುಗಿ ಹೋಗದಂತೆ ಗಟ್ಟಿಸಿಕೊಳ್ಳಲು ...