ಮಕ್ಕಳು ಕಳೆದು ಹೋಗದಿರಲಿ

ಇವತ್ತು ಕಳೆದುಹೋದ ಮಕ್ಕಳ ದಿನ.

ಒಂದು ಸಂಜೆ ಮರೀನ್ ಡ್ರೈವ್ ನಲ್ಲಿ ಸುಮ್ಮನೆ ನಡೆಯುತ್ತಿದ್ದೆ....ಎದುರಿಂದ ೪-೫ ವರ್ಷದ ಮುದ್ದು ಮುದ್ದು ಮಗು ಅಳುತ್ತಾ ಬರ್ತಿತ್ತು. ಕೂಡಲೇ ಒಳಗಿನ ಅಮ್ಮನಿಗೆ ಅದು ತಪ್ಪಿಸಿಕೊಂಡಿದೆ ಅಂತ ಗೊತ್ತಾಯ್ತು. ಹತ್ತಿರ ಹೋಗಿ ಮಾತನಾಡಿಸಿ ಅಲ್ಲಿಯೇ  ಇದ್ದ ಪೊಲೀಸ್ ಗೆ ಹೇಳಿದೆ....ಆತ  ಸಮಾಧಾನ ಮಾಡಿ ಮಗು ಬರುತ್ತಿದ್ದ ವಿರುದ್ದ ದಿಕ್ಕಿಗೆ ಕರೆದುಕೊಂಡು ಹೊರಟ. "ಮುಂದೇನು ಮಾಡ್ತೀರಾ ? ನಾನು ನಿಮ್ಮ ಜೊತೆ ಬರ್ತೀನಿ" ಅಂದೆ. "ತೊಂದರೆ ಇಲ್ಲ ಮೇಡಂ. ಸಾಧಾರಣವಾಗಿ ತಪ್ಪಿಸಿಕೊಂಡ ಮಕ್ಕಳು ವಿರುದ್ಧ ದಿಕ್ಕಿಗೆ ಹೋಗ್ತಾರೆ. ಅಪ್ಪ ಅಮ್ಮ ಆ ಕಡೆ ಇರ್ತಾರೆ. ನಾ ಹುಡುಕಿ ಮಗೂನಾ ತಲುಪಿಸ್ತೀನಿ" ಎಂದ.

ಅಲೆಗಳು ಏಳುತ್ತಿದ್ದವು....ನಾ ದಡದಂತೆ ಸುಮ್ಮನೆ ನಿಂತಿದ್ದೆ... "ತಪ್ಪಿಸಿಕೊಂಡ ಮಕ್ಕಳು ವಿರುದ್ಧ ದಿಕ್ಕಿಗೆ ಹೋಗ್ತಾರೆ" ಎನ್ನುವ ಆತನ ಮಾತಿನ ಮರಳು ಉಪ್ಪು ಹೊತ್ತು ಗಾಳಿಯಾಗುತ್ತಿತ್ತು ! ಆ ಮಗುವಿನ ಬೆನ್ನ ಹಿಂದೆಯೇ ಹೋದವಳ ಕಣ್ಣೆದುರೇ ಮಗು ಮನೆ ಸೇರಿತ್ತು.

ಅದೆಷ್ಟು ನಿಜ!  ಕುಟುಂಬದವರಿಂದ ದೂರಾದ ಮಕ್ಕಳು, ಮೂಲಭೂತ ಮಾನವ ಹಕ್ಕುಗಳ ಕಣ್ಣಿನಿಂದ ಮರೆಯಾದ ಮಕ್ಕಳು , ಒಂದು 
ಒಂದು ಮುಷ್ಠಿ ಪ್ರೀತಿ, ಒಂದು ಹಿಡಿ ಮಾರ್ಗದರ್ಶನ ಸಿಗದ ಮಕ್ಕಳು,   ಎಂದಿಗೂ ಸಮಾಜದ ಮುಖ್ಯವಾಹಿನಿಗೆ ವಿರುದ್ಧ ದಿಕ್ಕಿನಲ್ಲಿಯೇ ಬದುಕುತ್ತಿರುತ್ತಾರೆ.

ನಮ್ಮ ಬೇಜವಾಬ್ದಾರಿ, ಹೀನಸುಳಿಗಳಲ್ಲಿ ಮಕ್ಕಳು ಕಳೆದು ಹೋಗದಿರಲಿ. ಭೂಮಿ ಬರಡಾಗದಿರಲಿ 🌻

25 ಮೇ 2020

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

Police Notice in ಪ್ರಜಾವಾಣಿ

ಸವಾಲು ದಾಟುವ ಸಂಭ್ರಮ in VK