ಆತ್ಮನಿರ್ಭರಭಾರತ ಮತ್ತು Child Rights

Lockdown ಸಂದರ್ಭ, ಕರೊನ ಕಾರಣ-

ನಮ್ಮೊಳಗಿರುವ ಸಮಾಜಸೇವಕ ಜಾಗೃತ ಗೊಂಡಿದ್ದಾನೆ. ಊಟದ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಯಾರಿಗೆ ಅಂದರೆ ಅವರಿಗೆ ಹಂಚಿಹಂಚಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿಕೊಂಡು ದೇಶದ ಕರುಳುಕಿತ್ತು ಬರಿಸುತ್ತಿದ್ದೇವೆ.

ಉಸಿರು ಉಳಿಯಲು ಮಾತ್ರ ತಿಂದರೆ ಬಸುರಿ, ಬಾಣಂತಿ ಮತ್ತು ಬೆಳೆಯುವ ಮಕ್ಕಳಿಗೆ ಸಾಕೇ? ಅವರುಗಳಿಗೆ ಪೌಷ್ಟಿಕತೆ ನೀಡದಿದ್ದರೆ ಭವಿಷ್ಯ ಭದ್ರವಾಗಲು ಸಾಧ್ಯವೇ?

ಊಟ ಕೊಡೋದು ಸೇವೆ ಎಂದುಕೊಂಡು ಬೀಗೋಣ ಆದರೆ ಅವರುಗಳಿಗೆ ಪೌಷ್ಟಿಕಾಂಶ ನೀಡುವುದು ನಮ್ಮ 'ದೇಶಭಕ್ತಿ' ಎಂದುಕೊಂಡು ಜವಾಬ್ದಾರಿ ಹೊರೋಣ.
ದುರ್ಬಲ ಮಕ್ಕಳಿಂದ #ಆತ್ಮನಿರ್ಭರಭಾರತ  ಸಾಧ್ಯವಿಲ್ಲ.
"ಇಸ್ಕೂಲು ಮುಚ್ಚೈತೆ , ನಂಗ್ ದುಡಿಮೆ ಇಲ್ಲ
ನಡೀ ನೀ ಕೆಲ್ಸಕ್ಕೆ"
ಅಥವಾ
"ನಿಂಗೆ ಮದ್ವೆ ಮಾಡ್ಬುಡ್ತೀನಿ"
ಎನ್ನುವ ಪೋಷಕರ ಮನೋಸ್ಥಿತಿಯನ್ನು, ಅವರುಗಳ ಪರಿಸ್ಥಿತಿಯನ್ನು ಬದಲು ಮಾಡುವ ಕಡೆಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳುವ ವರೆಗೂ ಸಾಧ್ಯವಿಲ್ಲ #ಆತ್ಮನಿರ್ಭರಭಾರತ
ಎರಡು ತಿಂಗಳಿಂದ ಪಿಂಚಣಿ/ಮಾಸಾಶನ ಬಾರದೆ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ತಿಳಿದು ಬಂದದ್ದು - ಸಧ್ಯಕ್ಕೆ ಪಿಂಚಣಿ ನೀಡಬಾರದು ಎನ್ನುವ ಸರ್ಕಾರೀ ಸುತ್ತೋಲೆ ಇದೆ ಎಂದು.

ಹೀಗೆ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಸರ್ಕಾರ ನೀಡುತ್ತಿರುವ ಹಣಕಾಸು ಬೆಂಬಲವನ್ನು ಏಕಾಏಕಿ ನಿಲ್ಲಿಸಿ ಬಿಟ್ಟರೆ ಪರೋಕ್ಷವಾಗಿ ಅದರ ಮೇಲೆ ಅವಲಂಬಿಸಿರುವ ಮಕ್ಕಳು ಬೀದಿಗೆ ಬರುತ್ತಾರೆ.

#ಆತ್ಮನಿರ್ಭರಭಾರತ ಮಾಡುವಲ್ಲಿ ಸರ್ಕಾರವು ಇಂತಹ ಮಾಸಾಶನಗಳನ್ನು ತಡೆಯದೆ ಮುಂದುವರೆಸಿಕೊಂಡು ಹೋಗುವಲ್ಲಿ ಗಮನ ನೀಡಬೇಕು.

(ಮಾಹಿತಿಗೆ: ಲೈಂಗಿಕ ವೃತ್ತಿಯಲ್ಲಿ ಇದ್ದು ಹೊರ ಬಂದವರಿಗೆ, ಪತಿ ತೀರಿಕೊಂಡವರಿಗೆ, ಅಂಗವಿಕಲರಿಗೆ ಇಂತಹ ಮಾಸಾಶನ ನೀಡಲಾಗುತ್ತಿದೆ. ಮಕ್ಕಳನ್ಯಾಯ ಕಾಯಿದೆ ಅಡಿಯಲ್ಲಿ ಪ್ರಾಯೋಜಕತ್ವ, ಪೋಕ್ಸೋ ಕಾಯಿದೆಯಲ್ಲಿ ನೊಂದ ಮಕ್ಕಳಿಗೆ ಅಭಯನಿಧಿ ಸಹಾಯ ನೀಡಲಾಗುತ್ತಿದೆ)

ಇನ್ನುಮುಂದೆ ದಾನಿಗಳ ಸಂಖ್ಯೆ ಕಡಿಮೆಯಾಗುತ್ತೆ. ಸಂಸ್ಥೆಗಳಿಗೆ ದಾನ ಹಣದ ಒಳಹರಿವು ದುರ್ಬಲ ಆಗುತ್ತೆ.
ಮಕ್ಕಳನ್ನು  ಇಟ್ಟುಕೊಂಡಿರುವ ಸಂಸ್ಥೆಗಳು ಖಾಸಗಿ ಶಾಲೆಗಳು ಮಾತ್ರ ಸಮಾನತೆ ತರುತ್ತೆ ಎನ್ನುವ ಭ್ರಮೆಯಿಂದ ಹೊರಬರಲು ಬೇಕಿದೆ.

ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು #ಆತ್ಮನಿರ್ಭರಭಾರತಕ್ಕೆ ತಳಹದಿ.
ಸ್ವಚ್ಛ ಪರಿಸರ ಮತ್ತು ಆರೋಗ್ಯ ಮಕ್ಕಳ ಮೂಲಭೂತ ಹಕ್ಕು. ಕೊರೋನ ಜೊತೆಗಿನ ನಮ್ಮ ಬಾಳ್ವೆಯನ್ನು ಇನ್ನುಮುಂದೆ ಕಸ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ.

#ಆತ್ಮನಿರ್ಭರಭಾರತ ಯೋಜನೆಗಳಲ್ಲಿ ಕಸ ವಿಲೇವಾರಿಗೆ ಹೊಸ ಪರಿಭಾಷೆ ಮತ್ತು ತಾಂತ್ರಿಕತೆಯನ್ನು ನೀಡಬೇಕಿದೆ.

ಕರೋನ ವಿರುದ್ಧದ ಸಮರ ಕಾಲವು ಮಕ್ಕಳ ಬದುಕಿಗೆ ಬಿಕ್ಕಟ್ಟಾಗಿ ಪರಿಣಮಿಸಿದೆ.

ಕೊಡಲೇ ಬೇಕಾದ ವ್ಯಾಕ್ಸಿನೇಷನ್ ಗಳು ಮಕ್ಕಳನ್ನು ತಲುಪುತ್ತಿಲ್ಲ. ಅಮೆರಿಕಾದಲ್ಲಿ ದಡಾರದ ಚುಚ್ಚುಮದ್ದು ಕೊಡುವುದನ್ನು ನಿಲ್ಲಿಸಲಾಗಿದೆ.

ಕರೋನೋತ್ತರ ಬದುಕು ಮಕ್ಕಳ ಬಲಿ ಕೇಳದಂತೆ ಆಗಲಿ.
ಸದೃಢ ಮಕ್ಕಳ ಹೊರತಾಗಿ
#ಆತ್ಮನಿರ್ಭರಭಾರತ  ಸಾಧ್ಯವಿಲ್ಲ.
13-05-2020

ತೀರಾ ಕೆಳವರ್ಗದ ಕಾರ್ಮಿಕ ಕುಟುಂಬಗಳ ಜೊತೆಯಲ್ಲಿ ಕೆಲಸ ಮಾಡಿ ವಾಸ್ತವದ ಕಷ್ಟಗಳು ತಿಳಿದ ಅನುಭವದ ಹಿನ್ನೆಲೆಯಲ್ಲಿ;
One Nation One Ration Card ಎನ್ನುವುದು ಒಂದು ಒಳ್ಳೆಯ ಯೋಜನೆಯಾಗಬಹುದು. ಆದರೆ ಅದರ side effects ಬಹಳವೇ ಕಷ್ಟಕರವಾಗಿದೆ.

ಮಕ್ಕಳ ಕಾನೂನಿನ ಅಡಿಯಲ್ಲಿ Ration Card ಎನ್ನುವ ದಾಖಲೆ ಕೇವಲ ದಿನಸಿಯನ್ನು ಒದಗಿಸುವ  ಕಾಗದ ಅಲ್ಲ. ಅದೊಂದು ವಂಶವೃಕ್ಷ ದಂತೆ. Child labour, Human trafficking ಇಂತಹ ದೌರ್ಜನ್ಯ ಗಳಿಂದ ರಕ್ಷಿಸಲ್ಪಟ್ಟ ಮಕ್ಕಳು ತಮ್ಮದೇ ಕುಟುಂಬಕ್ಕೆ ಸೇರಲು ಸನ್ನೆ ಕೋಲಾಗಿ ಒದಗಿಬರುವ ದಾಖಲೆ.

 ಹಾಗಾಗಿ ಈ ಯೋಜನೆಯನ್ನು ಸರ್ಕಾರ ಯಾವ "ಪಾರದರ್ಶಕ" ಪ್ರಕ್ರಿಯೆಯ ಮೂಲಕ ಹೇಗೆ ಜಾರಿಗೆ ತರಲಿದೆ ಎನ್ನುವುದನ್ನು "ತುರ್ತಾಗಿ" ಹೇಳಲೇ ಬೇಕಿರುತ್ತದೆ.

ನಮ್ಮ ದೇಶದಲ್ಲಿ ಹಸಿವು ಬಡತನವನ್ನು ಸಾಕಷ್ಟು ಅಂತರದಲ್ಲಿ ಹಿಂದಿಕ್ಕುವ ಸಮಸ್ಯೆ ಭ್ರಷ್ಟಾಚಾರ. ಇದು ನಶಿಸದೆ #ಆತ್ಮನಿರ್ಭರಭಾರತ ಒಂದು ಭ್ರಮೆ.
Ration Card ಒಂದು ಮಕ್ಕಳ ಹಕ್ಕು.
14-05-2020

ಸಂಬಂಧ ಪಟ್ಟ ಪೊಲೀಸ್ ಠಾಣೆಗಳು, ಪೊಲೀಸ್ ಅಧಿಕಾರಿಗಳು " ಮಾಡಲೇ ಬೇಕಾದ ಕೆಲಸ"  ಮಾಡದಿದ್ದಾಗ, commissioner of police ಅವರಿಗೆ ತಿಳಿಸಬೇಕು ಎನ್ನುವುದು ರೂಢಿ ಮತ್ತು ಕಾನೂನು.
ಮಕ್ಕಳ ವಿಷಯದಲ್ಲಿ  ಹೀಗಾದಾಗ commissioner of police ಇವರಿಗೆ ಈಮೇಲ್ ಕಳುಹಿಸಿದರೆ ಅದನ್ನು ACP, DCP ಮತ್ತು ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗೆ forward ಮಾಡಲಾಗುತ್ತದೆ.
ಕ್ರಮವನ್ನು ಮಾತ್ರ ಯಾರೂ ವಹಿಸುತ್ತಿಲ್ಲ. ಇದಕ್ಕೆ commissioner of police ಅವರ ಕಚೇರಿಯಿಂದ ಜವಾಬ್ದಾರಿಯುತ ಉತ್ತರವೂ ಬರುವುದಿಲ್ಲ.ಇಂತಹ ನಿರ್ಲಕ್ಷ್ಯ ಮಕ್ಕಳಿಗೆ ಸಂಬಂಧ ಪಟ್ಟ ವಿಷಯದಲ್ಲಿ ಮಾತ್ರವೇ ಇರಬೇಕು.
ಅಧಿಕಾರ ಇರುವ ಕುರ್ಚಿಯಲ್ಲಿ ಕುಳಿತ ನನ್ನಂತಹವರಿಗೇ ಹೀಗಾದರೆ ಬಡ ಪೋಷಕರ ಪಾಡು ಯಾರು ತಾನೇ ಕೇಳುವರು!!!!
ಇರಲಿ ನಮ್ಮ police commissioner ಸಾಹೇಬರು lockdown ಸಮಯದಲ್ಲಿಯೂ ಪ್ರಾರ್ಥನೆ ಮಾಡುತ್ತಿರುವ ವಿಡಿಯೋ ನೋಡಿದೆ.
ಮಾಸ್ಕ್, social distancing ಏನೂ ಇಲ್ಲದ ಅವರ ಪ್ರಾರ್ಥನೆಯು ನಮ್ಮ ಮಕ್ಕಳನ್ನು ರಕ್ಷಿಸುತ್ತದೆಯೇನೋ ಕಾಡು ನೋಡ್ತೇನೆ!

#ಆತ್ಮನಿರ್ಭರಭಾರತ ದಲ್ಲಿ ಜವಾಬ್ದಾರಿಯುತ ಪೊಲೀಸ್ ವ್ಯವಸ್ಥೆ ಹೊಂದುವುದು ಮಕ್ಕಳ ಹಕ್ಕಾಗಲಿ.
15-05-2020

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್