ಆತ್ಮಹತ್ಯೆ ಬೆದರಿಕೆ - Law Point
ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನೂರಕ್ಕೂ ಹೆಚ್ಚು ಪುಟಗಳ ವಿವರ ಬರೆದಿಟ್ಟು ಅದರ ವೀಡಿಯೊ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಷಯ ಇನ್ನೂ ಮರೆಯಲಾಗಿಲ್ಲ. ಮೇಲ್ನೋಟಕ್ಕೆ ಆತನ ಪತ್ನಿ ಅಪರಾಧಿಯಂತೆ ಕಾಣುತ್ತಿದ್ದಾಳೆ ಹಾಗಾಗಿ ತನಿಖೆ ಆಗಬೇಕು ಎಂದು ಉಚ್ಚನ್ಯಾಯಾಲವೂ ಹೇಳಿತ್ತು. ಈಗ ಆಕೆಗೆ ಜಾಮೀನು ಸಿಕ್ಕಿದೆ. ಈ ಘಟನೆಯ ನಂತರ ನೊಂದ ಗಂಡ ಎಂದು ಹೇಳಿಕೊಂಡು ಮತ್ತೊಂದು ಆತ್ಮಹತ್ಯೆಯೂ ಆಯಿತು. ವಿಷಾದವೆಂದರೆ ನಿನ್ನಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಯರನ್ನು ಬೆದರಿಸಲು ಗಂಡಂದಿರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ರೇವಮ್ಮನ ಅಣ್ಣನ ಮಗ ಜೈಲಿನಲ್ಲಿದ್ದಾನೆ. ಅವನ ಹೆಂಡತಿ ಜಾಮೀನು ಕೊಡಿಸಲು ಇವಳ ಹಿಂದೇರಿದ್ದಾಳೆ. ಆಗುವುದಿಲ್ಲ ಎಂದವಳಿಗೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಒತ್ತಡ ಹಾಕುತ್ತಿದ್ದಾಳೆ. ಹೆದರಿದ ರೇವಮ್ಮ ಆಳುತ್ತಾ ಆಫೀಸಿಗೆ ಬಂದಿದ್ದಳು. ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ, ಬಾಡಿಗೆಗೆ ಮನೆ ಬಿಡಿಸಿದರೆ, ಕೆಲಸ ಕೊಡದಿದ್ದರೆ ಹೀಗೆ ಯಾವುದೇ ಕಾರಣವನ್ನು ಕೊಟ್ಟು “ನ...
Super talk
ReplyDelete