Child Rights Trust

 ಮಕ್ಕಳ ಹಕ್ಕುಗಳು ಎಂದರೆ ಅತ್ಯವಶ್ಯಕವಾಗಿ ಹಾಗೂ ಅನಿವಾರ್ಯವಾಗಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿಗೆ ಬರುವುದು ಸಿಆರ್‌ಟಿ Child Rights Trust - ಈ ಸಂಸ್ಥೆಯ ಒಡನಾಟವನ್ನು ಇಟ್ಟುಕೊಳ್ಳುತ್ತಾ, ಇದರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಆಸೆಗೂ ದುರಾಸೆಗೂ ನಡುವೆ ಇರುವ ತೆಳುವಾದ ಗೆರೆಯನ್ನು ಕಡೆಗಣಿಸಿ, " ಇಂತಹ ಒಂದು ಸಂಸ್ಥೆ ನನ್ನದಾಗಬೇಕು" ಎನ್ನುವ ಕನಸನ್ನು ಮೌನದಲ್ಲಿಯೆ ಕಂಡಿದ್ದೆ.

ಬ್ರಹ್ಮಾಂಡಕ್ಕೆ ಕೇಳಿಸಿರಬೇಕು ಆ ಕನಸು. ಅದಕ್ಕೇ ಇರಬೇಕು ಈ ಕ್ಷೇತ್ರದಲ್ಲಿ ನನ್ನ ಗುರುಗಳು ಮಾರ್ಗದರ್ಶಕರು ಆದ ಡಾಕ್ಟರ್ ವಾಸುದೇವ ಶರ್ಮಾ ಅವರು ನನ್ನನ್ನು ಅತ್ಯಂತ ವಿಶ್ವಾಸದಿಂದ, ಕೆಲವು ತಿಂಗಳುಗಳ ಹಿಂದೆಯಿಂದ CRT ಯ ಟ್ರಸ್ಟೀ ಮಾಡಿಕೊಂಡಿದ್ದಾರೆ.

ತಿಂದುಂಡ ಮನೆಗೆ ಧನ್ಯವಾದ ಹೇಳಲು ಪದಗಳದ್ದು ಅದೆಷ್ಟು ಕೃಪಣತೆ!  

ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ತನ್ನನ್ನು ವಿಭಿನ್ನವಾಗಿ, ವಿಶೇಷವಾಗಿ ಗುರುತಿಸಿಕೊಂಡಿರುವ CRT "ಎಲ್ಲಾ ಮಕ್ಕಳಿಗೂ ಎಲ್ಲಾ ಹಕ್ಕುಗಳು" ಎನ್ನುವ ಧ್ಯೇಯದೊಂದಿಗೆ ಮಕ್ಕಳ ಹಕ್ಕುಗಳಿಗೆ ಕರ್ನಾಟಕದಲ್ಲಿ ತಂದೆಯ ಬೆಂಬಲ, ತಾಯಿಯ ಮಿಡಿತ ನೀಡುತ್ತಾ ಬಂದಿದೆ. 

ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಯಿಂದ ಹೊರಗೆ ತರುವುದು, ಬಾಲ್ಯ ವಿವಾಹಕ್ಕೆ ಒಳಗಾದ ಹದಿಹರಿಯದ ಹೆಣ್ಣು ಮಕ್ಕಳ ಪೋಷಣೆ ಮತ್ತು ಪೌಷ್ಟಿಕಾಂಶ ಹಾಗೂ ಇತರೆ ಅಭಿವೃದ್ಧಿ ಸವಲತ್ತುಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು, ಆ ನಿಟ್ಟಿನಲ್ಲಿ ಕೆಲಸ ಮಾಡಿಸುವುದು, ಮಕ್ಕಳಿಗಾಗಿ ಸಹಾಯವಾಣಿಯ  ಸೌಲಭ್ಯ ಮತ್ತು ಇವೆಲ್ಲದರ ಶಿರಕ್ಕೆ ಸಿಕ್ಕಿಸಿದ ಕೊಹಿನೂರ್ನಂತೆ ಇದೆ ಕರ್ನಾಟಕ ಚೈಲ್ಡ್ ರೈಟ್ಸ್ ಅಬ್ಸರ್ವೇಟರಿ KCRO .

ನೆನ್ನೆ (03-03-02023) ಸದಸ್ಯರುಗಳಿಗೆ ಹೊಸ ಟ್ರಸ್ಟಿಗಳ ಪರಿಚಯ, ಮಾಡಿದ ಕೆಲಸ ಬಗ್ಗೆ ಹಂಚಿಕೆ, ಮುಂದಿನ ದಿನಗಳ ಬಗ್ಗೆ ಯೋಜನೆಯ ಕಾರ್ಯಕ್ರಮ ಇತ್ತು.

CRT - Child Rights Trust 

ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಈ ಲಿಂಕ್ http://www.childrightstrust.in/ ಅನ್ನು ಬಳಸಿ, ಓದಿ ಮತ್ತು ನೀವು ನಮ್ಮ ಜೊತೆಯಾಗಿ.




Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್