Posts

Showing posts from November, 2024

Dr.Shubhada HN ಅವರ ಪುಸ್ತಕ

Image
  13 ರಾಷ್ಟ್ರ ಪ್ರಶಸ್ತಿಗಳು, 2 ರಾಜ್ಯ ಪ್ರಶಸ್ತಿಗಳು, ರಾಷ್ಟ್ರಪತಿಗಳ ಪದಕ ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು, ತಮ್ಮ ವಿಶೇಷ, ಅಪರೂಪದ ಕೆಲಸಕ್ಕಾಗಿ ಪಡೆದುಕೊಂಡಿರುವ ಡಾ.ಶುಭದಾ ಹೆಚ್ ಎನ್ ಅವರು ತಮ್ಮ ವೃತ್ತಿ ಕಥಾನಕ ' ನೆಲದ ನಕ್ಷತ್ರಗಳ ನೆಂಟು ' ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ತೊಡಗಿಕೊಂಡಿರುವವರು ಇನ್ನೂ ಮುಂದೆ ಒಂದೇ ಅಕ್ಷರವನ್ನು ಬರೆಯುವ ಮೊದಲು ಇವರ ಮತ್ತು ಡಾ. ವಿರೂಪಾಕ್ಷ ದೇವರಮನೆ ಅವರ ಪುಸ್ತಕಗಳನ್ನು ಓದಲೇಬೇಕು. ಮಕ್ಕಳಿಗೆ ಕಲ್ಪನೆಯನ್ನು ವಿಸ್ತರಿಸಿಕೊಳ್ಳಲು ಬೇಕಿರುವ ಕಾಗಕ್ಕ, ಗುಬ್ಬಕ್ಕನ ಕಥೆಯ ಹಾಗೇ ಕಡ್ಡಾಯವಾಗಿ ಅವರುಗಳನ್ನು ವಾಸ್ತವಕ್ಕೆ ಹೊಂದಿಕೊಳ್ಳುವಂತೆ ಮಾಡಬಲ್ಲ ವಸ್ತುವನ್ನು ಬರೆಯಬೇಕು, ಓದಿಸಬೇಕು. ಬಾಲಿಶವೆಲ್ಲ ಮಕ್ಕಳ ಸರಕು ಅಲ್ಲ. ಡಾ.ಶುಭದಾ ಅವರ ಅನುಭವ ಓದಿದರೆ ಮಕ್ಕಳಿಗೆ ಏನು ಓದಿಸಬೇಕು ಅವರಿಗಾಗಿ ಏನೆಲ್ಲಾ ಬರೆಯಬಹುದು ಎನ್ನುವ ಹೊಳಹು ಸಿಕ್ಕುವುದು ಖಂಡಿತ. ಇವರ ಅನುಭವ ಕೇವಲ ಅವರ ವೃತ್ತಿಯಲ್ಲ ಬದುಕು, ಇಂಥವರು ಇದ್ದಾರೆ ಎಂದರೆ ಅವರು ಮಕ್ಕಳ ಪಾಲಿನ ದೇವತೆಯೇ ಆಗಿರಬೇಕು! ಪುಸ್ತಕದ ಮುಖಪುಟದಲ್ಲಿಯೇ ' ಮಕ್ಕಳನ್ನು ಪ್ರೀತಿಸುವ ತಮಗಾಗಿ ' ಎಂದು ನನಗಾಗಿ ಬರೆದುಕೊಟ್ಟಿದ್ದಾರೆ. ಆ ಸಾಲನ್ನು ಕಾಣುವಾಗಲೆಲ್ಲಾ ಒಳಗು ಅಣಕವಾಡುತ್ತಿದೆ. ಶುಭದಾ, ಪುಸ್ತಕಕ್ಕಾಗಿ ಧನ್ಯವಾದ ಎನ್ನುವುದು ಬಹಳ ಪೇಲವ, ನಿಮ್ಮ ಚಾರಣ ಸ್ಪರ್ಶ ಅಷ್ಟೇ 🙏🙏🙏 ಪ್ರತಿಯೊಬ್ಬ ...

Live - in Relationship

Image
  20-11-2022 ರ ಉದಯವಾಣಿಯಲ್ಲಿ ಲಿವಿನ್ ರೆಲೇಶನ್ಶಿಪ್ ಬಗ್ಗೆ ಬರಹ ;   ಇತ್ತು ಆ ಸಮಯ ಒಮ್ಮೆ, ಪ್ರೀತಿಸುವುದೆಂದರೆ ಮದುವೆಯಾಗುವುದು ಎಂದು. ಈಗ ಹಾಗಲ್ಲ, ಪ್ರೀತಿಸುವುದೆಂದರೆ ವಯೋಬೇಧವಿಲ್ಲದೆ ಪೋಷಕರನ್ನು ಧಿಕ್ಕರಿಸುವುದು, ಮನೆ ಬಿಟ್ಟು ಓಡಿಹೋಗುವುದು, ಕಾಮಾಕರ್ಷಣೆ ಮುಗಿದ ನಂತರ ಬೀದಿಪಾಲಾಗುವುದು. ಆಗೆಲ್ಲಾ, ಇಷ್ಟು exposure ಇರಲಿಲ್ಲ. ಮಕ್ಕಳು ಕುಟುಂಬದಂತೆ ಎನ್ನುವ ವ್ಯಕ್ತಿಗಳಾಗುತ್ತಿದ್ದರು. ಈಗ ಹಾಗಲ್ಲ, ಹೊಟ್ಟೆಯಿಂದಲೂ ಅವರ ನಿರ್ಧಾರ ಅವರದ್ದು.  ಕೆಲವಾರು ವರ್ಷ ಮದುವೆಯಿಲ್ಲದ ಕೂಡುವಿಕೆಯಲ್ಲಿ ಇದ್ದು, ಮಕ್ಕಳನ್ನು ಹೆತ್ತ ನಂತರ ಗಂಡಸು ಬಿಟ್ಟೆದ್ದು ಹೋಗಿರುವ ಏಕಪೋಷಕಿಯರು ಇದ್ದಾರೆ. ಸ್ನೇಹಿತೆಯರ ತಂದೆಯರ ಜೊತೆ ಎಲ್ಲವನ್ನು ತಿಳಿದೂ ಲಿವಿನ್ ರೆಲೇಷನ್ಷಿಪ್‍ನಲ್ಲಿರುವ ಯುವತಿಯರೂ ಇದ್ದಾರೆ. ಯಾಕೆ ಹೀಗೆ, ಹೌದು ಇದು ಎಲ್ಲರೂ ಈಗ ಕೇಳಿಕೊಳ್ಳುತ್ತಿರುವ ಪ್ರಶ್ನೆ. ಒಂದೊಮ್ಮೆ ಪ್ರೀತಿ ಎನ್ನುವ ಹೆಸರಿನಿಂದ ಒಂದಾಗಿ, ಒಪ್ಪಿ ಜೊತೆಯಲ್ಲಿ ನಡೆಸುವ ಜೀವನ, “ತನಗೆ ಬದುಕಲು ಬರುವುದಿಲ್ಲ, ನಿನ್ನನ್ನು ಬಾಳಲು ಬಿಡುವುದಿಲ್ಲ” ಎನ್ನುವ ಹಂತ ಯಾಕಾಗಿ ತಲುಪುತ್ತಿದೆ? ಮೊನ್ನೆಮೊನ್ನೆ ಓದಿದ 32 ಹದಿಹರೆಯದವರ ಬರಹಗಳಲ್ಲಿ ಬಹುಪಾಲು ಕುಟುಂಬದ ಪ್ರೀತಿಗಾಗಿ ಹಪಾಹಪಿಕೆಯದ್ದೇ ಆಗಿತ್ತು. ಆದರೆ ಅದನ್ನು ಮೀರಿದ್ದು ವಾಸ್ತವದಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಕಾಮಾತುರ ಮತ್ತು ಅಸಹನೆ. ಯಾವುದರ ನಿರಂತರತೆಯೂ ಅವರಿಗೆ ಅ...

ಪುರುಷರ ದಿನ - Men Day

Image
  1. ಗಂಡು ಮಕ್ಕಳೇನ್ ಮೇಡಂ ಹೆಂಗಿದ್ರೂ ಆಗತ್ತೆ - ಅವನು ಗಂಡು ಹುಡುಗ ಅವನ್ ಮಾಡಿದ್ದೆಲ್ಲಾ ಇವಳೂ ಮಾಡ್ತೀನಿ ಅಂದ್ರೆ ಆಗತ್ತಾ - ಮನೆ ಹತ್ರ ಸೇಫ್ಟಿ ಇಲ್ಲ ಅದಕ್ಕೆ ಮಗಳನ್ನು ಹಾಸ್ಟೆಲ್ ಗೆ ಹಾಕಿದ್ದೀನಿ ಮೇಡಂ , ಮಗನ್ನ ಮನೇಲೇ ಇಟ್ಟ್ಕೊಂಡಿದ್ದೀನಿ - ಮಗನಿಗೆ ಸ್ಕೂಲ್ ಹೋಗದಿದ್ರೂ ಆಗತ್ತೆ ಮೇಡಂ ಗಂಡು ಹುಡುಗ ಅಲ್ಲವಾ ಜೀವನ ಹೇಗೋ ನಡೆಯತ್ತೆ ಆದರೆ ಮಗಳಿಗೆ ಹಂಗಾಗತ್ತಾ ಮೇಡಂ - ಈ ರೀತಿಯ ಮಾತುಗಳನ್ನು ಆಡುತ್ತಾ ಮುಂದೆ ನಿಲ್ಲುವ ತಾಯಂದಿರನ್ನು ಕಂಡಗೆಲ್ಲಾ ಅನುಭವದಿಂದ ಕಂಡುಕೊಂಡ ಮಾತುಗಳನ್ನು ಅವರಿಗೆ, ಇವರಿಗೆ ಹೇಳಬೇಕು ಅನ್ನಿಸತ್ತೆ! ಇವತ್ತು ಯಾವುದೇ ದೌರ್ಜನ್ಯ ಆದರೂ ಗಂಡಸೇ ಕಾರಣ ಎಂದು ಕೈತೋರಿಸಿ ಕಣ್ಣೊರೆಸಿಕೊಳ್ಳುತ್ತೇವೆ ಆದರೆ ಅವನು ಹಾಗಾಗಲು ಇವಳೇ ಕಾರಣ ಎನ್ನುವ ಮರೆವಿಗೆ ಬಲು ವೇಗ! ವಾಸ್ತವದಲ್ಲಿ ಭಾವನಾತ್ಮಕ ಭದ್ರತೆ ತುಸು ಹೆಚ್ಚು ಬೇಕಿರುವುದು ಗಂಡಸಿಗೆ, ಆದರೆ ಮಗಳಿಗೆ ರಕ್ಷಣೆ ಬೇಕು ಎನ್ನುವ ತಾಯಿ ಮಗ ಹೇಗಿದ್ದರೂ ಆಗತ್ತೆ ಎನ್ನುವ ಮನೋಭಾವ ಇಟ್ಟುಕೊಂಡಿರುವುದು ಅವನನ್ನು ಮನುಷ್ಯನನ್ನಾಗಿ ಮಾಡುವಲ್ಲಿ ದಾರಿ ತಪ್ಪುತ್ತಿದೆ. ಹೆಚ್ಚು ಪ್ರೀತಿ ಎನ್ನುವ ಸೋಗಿನಲ್ಲಿ ಗಂಡು ಮಕ್ಕಳಿಗೆ ಶಿಸ್ತು, ಮಾರ್ಗದರ್ಶನ, ನಡವಳಿಕೆ ಕಲಿಸುವಲ್ಲಿ ಸೋತು ಅವನು ಸ್ಪಷ್ಟ ರೂಪದಲ್ಲಿ ಬೆಳೆಯುವುದಕ್ಕೆ ತಾಯಿತಂದೆಯರೇ ಮುಳುವಾಗಿದ್ದಾರೆ. ಭಾವನಾತ್ಮಕ ಸಂಬಂಧ ಸಿಗದೆ ಅವನು ಭಾವನೆಗಳ ಸರಿವ್ಯಕ್ತದಲ್ಲಿ ಎಡುವುತ್ತಿದ್ದಾನೆ. ನೀ ಮಾಡಿದ್ದೆಲ್ಲಾ ಸರ...

Police Notice in ಪ್ರಜಾವಾಣಿ

Image
 ಎರಡೂ ಕುಟುಂಬಗಳ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾಳಿಗೆ ವರ್ಷದಲ್ಲೇ ತಿಳಿಯಿತು ಗಂಡ ಮಹಾನ್ ಸೋಮಾರಿಯೆಂದು. ತನ್ನ ವಿದ್ಯೆಯೂ ಎರಡನೆಯ ಪಿಯುಸಿಯಷ್ಟೇ. ಯಾರ ಬೆಂಬಲವೂ ಇಲ್ಲದೆ ಎಲ್ಲಿಂದಲೋ ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿ ಪಾರ್ಲರ್ ತೆರೆದುಕೊಂಡು ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಹೋಲ್ಸೇಲ್ ದರದಲ್ಲಿ ಸೀರೆ ಸಪ್ಲೈ ಮಾಡುತ್ತಿದ್ದ ಮಾರಾಟಗಾರನಿಗೂ ಈಕೆಗೂ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್‍ಐಆರ್ ಆಗಿದೆ ನೀವು ಠಾಣೆಗೆ ಹಾಜರಾಗಬೇಕು’ ಎಂದಷ್ಟೇ ಇದ್ದ ಪತ್ರವೊಂದು ಕೈಸೇರಿದಾಗ ಗಂಡ, ಅತ್ತೆ, ಮಾವ ಎಲ್ಲರೂ ಇವಳನ್ನೇ ನಿಂದಿಸಿ ಮತ್ತಷ್ಟು ಗಾಬರಿ, ಆತಂಕ ಒಡ್ಡಿದ್ದರು. ಹೀಗೆ ಅವರುಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರಬಹುದು, ಕಷ್ಟದಲ್ಲಿ ಕೈಸಾಲ ತೆಗೆದುಕೊಂಡಿರಬಹುದು, ಯಾರದ್ದೋ ಕಷ್ಟಕ್ಕೆ ಜಾಮೀನು ನಿಂತಿರಬಹುದು, ಮತ್ತ್ಯಾರದ್ದೋ ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಅವರಿವರ ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆಯ ವಿಷಯವೇ ಇರಬಹುದು, ಕುಟುಂಬದ ಆಸ್ತಿ ಪಾಲುದಾರಿಕೆಯ ವಿಷಯವ...