Dr.Shubhada HN ಅವರ ಪುಸ್ತಕ

 

13 ರಾಷ್ಟ್ರ ಪ್ರಶಸ್ತಿಗಳು, 2 ರಾಜ್ಯ ಪ್ರಶಸ್ತಿಗಳು, ರಾಷ್ಟ್ರಪತಿಗಳ ಪದಕ ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು, ತಮ್ಮ ವಿಶೇಷ, ಅಪರೂಪದ ಕೆಲಸಕ್ಕಾಗಿ ಪಡೆದುಕೊಂಡಿರುವ ಡಾ.ಶುಭದಾ ಹೆಚ್ ಎನ್ ಅವರು ತಮ್ಮ ವೃತ್ತಿ ಕಥಾನಕ ' ನೆಲದ ನಕ್ಷತ್ರಗಳ ನೆಂಟು ' ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ.


ಮಕ್ಕಳ ಸಾಹಿತ್ಯದಲ್ಲಿ ತೊಡಗಿಕೊಂಡಿರುವವರು ಇನ್ನೂ ಮುಂದೆ ಒಂದೇ ಅಕ್ಷರವನ್ನು ಬರೆಯುವ ಮೊದಲು ಇವರ ಮತ್ತು ಡಾ. ವಿರೂಪಾಕ್ಷ ದೇವರಮನೆ ಅವರ ಪುಸ್ತಕಗಳನ್ನು ಓದಲೇಬೇಕು.


ಮಕ್ಕಳಿಗೆ ಕಲ್ಪನೆಯನ್ನು ವಿಸ್ತರಿಸಿಕೊಳ್ಳಲು ಬೇಕಿರುವ ಕಾಗಕ್ಕ, ಗುಬ್ಬಕ್ಕನ ಕಥೆಯ ಹಾಗೇ ಕಡ್ಡಾಯವಾಗಿ ಅವರುಗಳನ್ನು ವಾಸ್ತವಕ್ಕೆ ಹೊಂದಿಕೊಳ್ಳುವಂತೆ ಮಾಡಬಲ್ಲ ವಸ್ತುವನ್ನು ಬರೆಯಬೇಕು, ಓದಿಸಬೇಕು.


ಬಾಲಿಶವೆಲ್ಲ ಮಕ್ಕಳ ಸರಕು ಅಲ್ಲ.


ಡಾ.ಶುಭದಾ ಅವರ ಅನುಭವ ಓದಿದರೆ ಮಕ್ಕಳಿಗೆ ಏನು ಓದಿಸಬೇಕು ಅವರಿಗಾಗಿ ಏನೆಲ್ಲಾ ಬರೆಯಬಹುದು ಎನ್ನುವ ಹೊಳಹು ಸಿಕ್ಕುವುದು ಖಂಡಿತ.


ಇವರ ಅನುಭವ ಕೇವಲ ಅವರ ವೃತ್ತಿಯಲ್ಲ ಬದುಕು, ಇಂಥವರು ಇದ್ದಾರೆ ಎಂದರೆ ಅವರು ಮಕ್ಕಳ ಪಾಲಿನ ದೇವತೆಯೇ ಆಗಿರಬೇಕು!


ಪುಸ್ತಕದ ಮುಖಪುಟದಲ್ಲಿಯೇ ' ಮಕ್ಕಳನ್ನು ಪ್ರೀತಿಸುವ ತಮಗಾಗಿ ' ಎಂದು ನನಗಾಗಿ ಬರೆದುಕೊಟ್ಟಿದ್ದಾರೆ. ಆ ಸಾಲನ್ನು ಕಾಣುವಾಗಲೆಲ್ಲಾ ಒಳಗು ಅಣಕವಾಡುತ್ತಿದೆ.


ಶುಭದಾ, ಪುಸ್ತಕಕ್ಕಾಗಿ ಧನ್ಯವಾದ ಎನ್ನುವುದು ಬಹಳ ಪೇಲವ, ನಿಮ್ಮ ಚಾರಣ ಸ್ಪರ್ಶ ಅಷ್ಟೇ 🙏🙏🙏


ಪ್ರತಿಯೊಬ್ಬ ಮಗುವೂ champion ಎನ್ನುತ್ತಾ ಮಕ್ಕಳನ್ನು ದಾರಿ ತಪ್ಪಿಸಿ ಒತ್ತಡಕ್ಕೆ ದೂಡುವ ಬದಲಿಗೆ ಪರಸ್ಪರರಲ್ಲಿ ಇರುವ ವ್ಯತ್ಯಾಸವನ್ನು ಗುರುತಿಸಿ, ಗೌರವಿಸುವುದನ್ನು, ಬರಹದ ಮೂಲಕ, ಓದಿಸುವುದರ ಮೂಲಕ, ನಮ್ಮ ನಡವಳಿಕೆಯ ಮೂಲಕ ಕಲಿಸಿದರೆ , ಸಹಬಾಳ್ವೆ ದೂರವಿಲ್ಲ.

23-11-2024

#FamilyCourtಕಲಿಕೆ

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ