ಅವಳ ಇವಳ ಸುತ್ತ - Book read

ಪುಸ್ತಕದ ಹೆಸರು : " ಅವಳ ಇವಳ ಸುತ್ತ " ಲೇಖಕಿ : ಎಸ್ ಸುಶೀಲ ಚಿಂತಾಮಣಿ ಸಪ್ನಾ ಬುಕ್ ಹೌಸ್ ಪ್ರಕಟಣೆ ಮನುಷ್ಯ ನೆಮ್ಮದಿಯಾಗಿ ಇದ್ದಾನೆ ಎನ್ನಲು ಒಂದೇ ಕಾರಣ ಸಾಕು ಆದರೆ ಬದುಕಿನಲ್ಲಿಯ ಅಶಾಂತಿಗೆ ನಾನಾ ಸ್ವರೂಪಗಳು. ಅದರಲ್ಲೂ ಹೆಂಗಸರು ದಾಂಪತ್ಯದೊಳಗೆ ಕತ್ತು ಹಿಸುಕಿಕೊಳ್ಳುತ್ತಲೇ ಕೆಲವೊಮ್ಮೆ ಕಣ್ಣ ನೀರಿಗೂ ತಾವು ಕೊಡಲಾಗದೆ ಬದುಕುವ ಸ್ಥಿತಿ ಬರಹಕ್ಕೆ ನಿಲುಕದು. ಲೇಖಕಿ ಶ್ರೀಮತಿ ಎಸ್ ಸುಶೀಲ ಚಿಂತಾಮಣಿ ಅವರು ರಾಜ್ಯದ ಹಿರಿಯ ವಕೀಲರು. ಮೀಡಿಯೇಷನ್ ಕೇಂದ್ರದ ಮುಖ್ಯ ಸಂಧಾನಕಾರರು. ತಾವು ಕಂಡ, ನಿರ್ವಹಿಸಿದ ಪ್ರಕರಣಗಳನ್ನು 38 ಅಧ್ಯಾಯಗಳಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಅಧ್ಯಾಯಗಳ ಸಂಕ್ಷಿಪ್ತತೆ ನೋಡುವಾಗ ಅನಿಸಿದ್ದು ' ನೋವುಗಳನ್ನು ನಲಿವಿನಷ್ಟು ವಿಸ್ತರಿಸಲು ಅಕ್ಷರಗಳು ಶಕ್ಯವಲ್ಲ'. ಈ ಪುಸ್ತಕದಲ್ಲಿ ಪದಗಳಿಗಿಂತ ಮೌನದ್ದೇ ಹೆಚ್ಚು ಕೆಲಸ. ಓದುಗನ ಕೊರಳುಬ್ಬಿ ಬರದಿದ್ದರೆ ಅಕ್ಷರತೆಯ ಮೇಲಾಣೆ. ಪ್ರತೀ ಹೆಣ್ಣಿನ ಜೀವನ ಯಾನವನ್ನು ಕೈಯಲ್ಹಿಡಿದ ಪುಸ್ತಕದಿಂದ ಕಣ್ಣಿನ ಮೂಲಕವೇ ನಮ್ಮದೇ ಪ್ರಯಾಣವಾಗಿಸಿಕೊಳ್ಳುವ ನಿಡಿದಾದ ನಿಟ್ಟುಸಿರು ' ಅವಳ ಇವಳ ಸುತ್ತ '. ಲೇಖಕಿಯೇ ಹೇಳಿರುವಂತೆ ' ಇದು ಹೆಣ್ಣು ಮಕ್ಕಳ ಸುತ್ತಲಿನ ಕೆಲವು ಘಟನೆಗಳ ಸಂಕಲನ. ಈ ಘಟನೆಗಳಲ್ಲಿ ಹಲವು ನಮ್ಮ ನಿಮ್ಮ ಕಣ್ಣಿಗೆ ಬಿದ್ದ ಅಥವಾ ನಮ್ಮ ನಿಮ್ಮ ಜೀವನದ ಘಟನೆಗಳೇ ಹೌದೇನೋ ಎನ್ನಿಸಲೂಬಹುದು ಎಲ್ಲೋ ಒಂದು ಕಡೆ ಇವು...