ಮಕ್ಕಳ ಅನುಸರಣಾ ಸಂಸ್ಥೆಗಳು ಮತ್ತು ಮಕ್ಕಳ Family Rights ಹಾಗೂ. . .
ಮ್ಕಕಳ ಅನುಸರಣಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಸುಧಾರಣೆಗಳು ಎಲ್ಲರಿಗೂ ನಮಸ್ಕಾರ! ನೀನಾ ನಾಯಕ್ ಮೇಡಮ್ ಅವರು ಹೇಳಿದಂತೆ ಬದುಕನ್ನು ಕಟ್ಟಕಡೆಯ ಮಗುವಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ನಾವುಗಳು ಈ ಕೆಲಸ ಮಾಡುವುದರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಲಕಿಯರಿಗಾಗಿ ಇರುವ ಮಕ್ಕಳ ಕಲ್ಯಾಣ ಸಮಿತಿಯ, ಅಂದರೆ ನನ್ನ ಸಮಿತಿಯ ಸದಸ್ಯರುಗಳಾದ ಆಶಿಕಾ ಶೆಟ್ಟಿ, ಬಿಂದಿಯಾ ಶಾಜಿಥ್, ಸರಿತಾ ವಾಜ಼, ಲಕ್ಷ್ಮೀಪ್ರಸನ್ನ ಇವರುಗಳ 24 ಗಂಟೆಗಳೂ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ಅವರುಗಳನ್ನು ಅಭಿನಂದಿಸುತ್ತೇನೆ. ನಾವುಗಳು ಎರಡ ದಿನಕ್ಕೊಮ್ಮೆ ಡಿಸಿಪಿಓ ಅವರೊಡನೆ, ಪಿಓಗಳೊಡನೆ ಹಾಗೂ ಸುಪರಿಡೆಂಟ್ ಅವರುಗಳೊಡನೆ ಪರಿಶೀಲಾನ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಈಗ ನಾನು ಮಾತನಾಡಲಿರುವ ವಿಷಯ ಮಕ್ಕಳ ಅನುಸರಣಾ ಸಂಸ್ಥೆಗಳ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಬದಲಾವಣೆಗಳು. ಮಕ್ಕಳ ವಿಷಯದಲ್ಲಿ ಯಾವ ವರ್ತಮಾನವೂ ಅಮುಖ್ಯವಲ್ಲ. ಹಾಗೆಯೇ ಯಾವ ಬದಲಾವಣೆಯೂ ಕೊನೆಯೂ ಅಲ್ಲ. ಮನುಷ್ಯನ ಮೂಲಭೂತ ಗುಣಲಕ್ಷಣಗಳು ಹಾಗೆಯೇ ಉಳಿದಿದ್ದರೂ ಜಾಗತೀಕರಣದ ಪ್ರಭಾವದಿಂದಾಗಿ, ಸಿಗುತ್ತಿರುವ ಎಕ್ಸ್ಪೋಷರ್ ನಿಂದಾಗಿ ಮಕ್ಕಳು ಬದಲಾಗುತ್ತಿದ್ದಾರೆ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಾವುಗಳು ಬೆಳೆಯದಿದ್ದರೆ ಮಕ್ಕಳ ಹಕ್ಕುಗಳ ರಚನೆಯ ಆಶಯವನ್ನೇ ಬುಡಮೇಲು ಮಾಡಿದಂತೆ ಆಗುತ್ತದೆ. ಅದಕ್ಕೇ ರಾಜ್ಯದ