ಎರಡೂ ಕುಟುಂಬಗಳ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾಳಿಗೆ ವರ್ಷದಲ್ಲೇ ತಿಳಿಯಿತು ಗಂಡ ಮಹಾನ್ ಸೋಮಾರಿಯೆಂದು. ತನ್ನ ವಿದ್ಯೆಯೂ ಎರಡನೆಯ ಪಿಯುಸಿಯಷ್ಟೇ. ಯಾರ ಬೆಂಬಲವೂ ಇಲ್ಲದೆ ಎಲ್ಲಿಂದಲೋ ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿ ಪಾರ್ಲರ್ ತೆರೆದುಕೊಂಡು ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಹೋಲ್ಸೇಲ್ ದರದಲ್ಲಿ ಸೀರೆ ಸಪ್ಲೈ ಮಾಡುತ್ತಿದ್ದ ಮಾರಾಟಗಾರನಿಗೂ ಈಕೆಗೂ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್ಐಆರ್ ಆಗಿದೆ ನೀವು ಠಾಣೆಗೆ ಹಾಜರಾಗಬೇಕು’ ಎಂದಷ್ಟೇ ಇದ್ದ ಪತ್ರವೊಂದು ಕೈಸೇರಿದಾಗ ಗಂಡ, ಅತ್ತೆ, ಮಾವ ಎಲ್ಲರೂ ಇವಳನ್ನೇ ನಿಂದಿಸಿ ಮತ್ತಷ್ಟು ಗಾಬರಿ, ಆತಂಕ ಒಡ್ಡಿದ್ದರು. ಹೀಗೆ ಅವರುಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರಬಹುದು, ಕಷ್ಟದಲ್ಲಿ ಕೈಸಾಲ ತೆಗೆದುಕೊಂಡಿರಬಹುದು, ಯಾರದ್ದೋ ಕಷ್ಟಕ್ಕೆ ಜಾಮೀನು ನಿಂತಿರಬಹುದು, ಮತ್ತ್ಯಾರದ್ದೋ ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಅವರಿವರ ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆಯ ವಿಷಯವೇ ಇರಬಹುದು, ಕುಟುಂಬದ ಆಸ್ತಿ ಪಾಲುದಾರಿಕೆಯ ವಿಷಯವ...
Comments
Post a Comment