ಸುನೀತಾ ವಿಲಿಯಮ್ಸ್ ಆಕಾಶದಿಂದ ಭೂಮಿಗೆ ಹಿಂದಿರುಗಿ ಬಂದ ರೋಚಕ ಕ್ಷಣದಿಂದ ಬಾಹ್ಯಾಕಾಶ ವಿಷಯದಲ್ಲಿ ಎಲ್ಲರ ಆಸಕ್ತಿಯೂ ಹೆಚ್ಚಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಾಹ್ಯಾಕಾಶ ಪರಿಕಲ್ಪನೆ ಮತ್ತು ವಿಸ್ತಾರ, ರಾಕೆಟ್ ವಿಜ್ಞಾನದ ಇತಿಹಾಸ, ಕಕ್ಷೆಯಲ್ಲಿ ತೂಕ ಇಲ್ಲದಿರುವಿಕೆ ಬಾಹ್ಯಾಕಾಶ ಸ್ಪರ್ಧೆ ಆರಂಭಿಕ ಕಾಲ ಹೇಗಿತ್ತು, ಮಾನವ ಸಹಿತ ಬಾಹ್ಯಾಕಾಶಯಾನಕ್ಕಾಗಿ ನೌಕೆಗಳ ಅಭಿವೃದ್ಧಿಯಾಗಿದ್ದು ಯಾವಾಗ ಮತ್ತು ಹೇಗೆ, ಬಾಹ್ಯಾಕಾಶದ ನಿಲ್ದಾಣ ಎಂದರೇನು, ಬಾಹ್ಯಾಕಾಶದಲ್ಲಿ ಆಘಾತಗಳು ಹೇಗೆ ಆಗುತ್ತವೆ, ಬಾಹ್ಯಾಕಾಶದ ಉಡುಪು ಏನಿರುತ್ತದೆ, ಅಂತರಿಕ್ಷದ ಕಡೆ ನಮ್ಮ ನಡೆಯ ಆರಂಭ ಮತ್ತು ಮುಂದುವರಿಕೆ ಹೇಗೆ, ಮೂಳೆ ಮತ್ತು ಸ್ನಾಯುಗಳ ಮೇಲೆ ಏನೆಲ್ಲಾ ಪರಿಣಾಮಗಳು ಆಗುತ್ತವೆ, ವಿಕಿರಣಗಳ ಪ್ರಭಾವ ಹೇಗೆ, ಬಾಹ್ಯಾಕಾಶದಲ್ಲಿ ಒಟ್ಟಾರೆ ಜೀವನ ಹೇಗಿರುತ್ತದೆ, ಅಂತರಿಕ್ಷದಲ್ಲಿ ಆಹಾರ ಏನು, ಬಾಹ್ಯಾಕಾಶ ನಿರ್ವಹಣೆ ಎಂದರೇನು ಅಂತರಿಕ್ಷದ ಪೂರ್ವ ತರಬೇತಿ ಹೇಗಿರುತ್ತದೆ, ಅಂತರಿಕ್ಷದಲ್ಲಿನ ಪ್ರಯೋಗಗಳು ಹೇಗಿರುತ್ತದೆ ಭವಿಷ್ಯದಲ್ಲಿ ಮಾನವ ಸಹಿತ ಗಗನಯಾನ ಸವಾಲುಗಳು ಮತ್ತು ಸಾಧ್ಯತೆಗಳು ಏನೆಲ್ಲ ಇರಬಹುದು ಹೀಗೆ ಅಂತರಿಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣವಾದ ವಿವರಣೆ ನೀಡುತ್ತದೆ ಈ ಪುಸ್ತಕ. "ಇದುವರೆಗೂ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಯಾವುದೇ ಕಾರಣದಿಂದ ಬಾಹ್ಯಾಕಾಶದಲ್ಲಿ ಮೃತರಾದ ಘಟನೆ ನಡೆದಿಲ್ಲ ಇಂತಹ ದುರ್ಘಟನೆ ...