ಬಾಹ್ಯಾಕಾಶ ಯಾನ Book review
ಸುನೀತಾ ವಿಲಿಯಮ್ಸ್ ಆಕಾಶದಿಂದ ಭೂಮಿಗೆ ಹಿಂದಿರುಗಿ ಬಂದ ರೋಚಕ ಕ್ಷಣದಿಂದ ಬಾಹ್ಯಾಕಾಶ ವಿಷಯದಲ್ಲಿ ಎಲ್ಲರ ಆಸಕ್ತಿಯೂ ಹೆಚ್ಚಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಬಾಹ್ಯಾಕಾಶ ಪರಿಕಲ್ಪನೆ ಮತ್ತು ವಿಸ್ತಾರ, ರಾಕೆಟ್ ವಿಜ್ಞಾನದ ಇತಿಹಾಸ, ಕಕ್ಷೆಯಲ್ಲಿ ತೂಕ ಇಲ್ಲದಿರುವಿಕೆ ಬಾಹ್ಯಾಕಾಶ ಸ್ಪರ್ಧೆ ಆರಂಭಿಕ ಕಾಲ ಹೇಗಿತ್ತು, ಮಾನವ ಸಹಿತ ಬಾಹ್ಯಾಕಾಶಯಾನಕ್ಕಾಗಿ ನೌಕೆಗಳ ಅಭಿವೃದ್ಧಿಯಾಗಿದ್ದು ಯಾವಾಗ ಮತ್ತು ಹೇಗೆ, ಬಾಹ್ಯಾಕಾಶದ ನಿಲ್ದಾಣ ಎಂದರೇನು, ಬಾಹ್ಯಾಕಾಶದಲ್ಲಿ ಆಘಾತಗಳು ಹೇಗೆ ಆಗುತ್ತವೆ, ಬಾಹ್ಯಾಕಾಶದ ಉಡುಪು ಏನಿರುತ್ತದೆ, ಅಂತರಿಕ್ಷದ ಕಡೆ ನಮ್ಮ ನಡೆಯ ಆರಂಭ ಮತ್ತು ಮುಂದುವರಿಕೆ ಹೇಗೆ, ಮೂಳೆ ಮತ್ತು ಸ್ನಾಯುಗಳ ಮೇಲೆ ಏನೆಲ್ಲಾ ಪರಿಣಾಮಗಳು ಆಗುತ್ತವೆ, ವಿಕಿರಣಗಳ ಪ್ರಭಾವ ಹೇಗೆ, ಬಾಹ್ಯಾಕಾಶದಲ್ಲಿ ಒಟ್ಟಾರೆ ಜೀವನ ಹೇಗಿರುತ್ತದೆ, ಅಂತರಿಕ್ಷದಲ್ಲಿ ಆಹಾರ ಏನು, ಬಾಹ್ಯಾಕಾಶ ನಿರ್ವಹಣೆ ಎಂದರೇನು ಅಂತರಿಕ್ಷದ ಪೂರ್ವ ತರಬೇತಿ ಹೇಗಿರುತ್ತದೆ, ಅಂತರಿಕ್ಷದಲ್ಲಿನ ಪ್ರಯೋಗಗಳು ಹೇಗಿರುತ್ತದೆ ಭವಿಷ್ಯದಲ್ಲಿ ಮಾನವ ಸಹಿತ ಗಗನಯಾನ ಸವಾಲುಗಳು ಮತ್ತು ಸಾಧ್ಯತೆಗಳು ಏನೆಲ್ಲ ಇರಬಹುದು ಹೀಗೆ ಅಂತರಿಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣವಾದ ವಿವರಣೆ ನೀಡುತ್ತದೆ ಈ ಪುಸ್ತಕ.
"ಇದುವರೆಗೂ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಯಾವುದೇ ಕಾರಣದಿಂದ ಬಾಹ್ಯಾಕಾಶದಲ್ಲಿ ಮೃತರಾದ ಘಟನೆ ನಡೆದಿಲ್ಲ ಇಂತಹ ದುರ್ಘಟನೆ ನಡೆದರೆ ಯಾವ ಕ್ರಮ ಕೈಗೊಳ್ಳಬೇಕೆಂದು ನೀತಿ ನಿಯಮಗಳನ್ನು ತಿಳಿಸಿಲ್ಲ ಒಂದು ವೇಳೆ ಅಂತಹ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣವೇ ಭೂಮಿಗೆ ರವಾನಿಸಲು ನಿಯಮ ಮಾಡಲಾಗಿದೆ"
" ಬಾಹ್ಯಾಕಾಶ ನೌಕೆಯ ಕ್ಯಾಬಿನ್ ಒಳಗೆ ಶೂನ್ಯ ಗುರುತ್ವ ವಿರೋಧ ರಿಂದ ದೇಹದಿಂದ ಹೊರಬರುವ ಬೆವರು ಗುಳ್ಳೆಯ ರೂಪದಲ್ಲಿ ಕ್ಯಾಬಿನ್ ನಲ್ಲಿ ತೇಲಾಡುತ್ತಿರುತ್ತವೆ. ಹಾಗಾಗಿ ಅನೇಕ ಉಪಕರಣಗಳಿಗೆ ತೊಂದರೆ ಉಂಟು ಮಾಡುತ್ತದೆ ಈ ಬೆವರನ್ನು ಹೀರಲು ಮತ್ತು ಅದನ್ನು ನಿರ್ವಹಿಸಲು ಕೆಲವು ವಿಶೇಷ ಸಾಧನಗಳನ್ನು ಉಪಯೋಗಿಸಲಾಗುತ್ತದೆ. ಅದೇ ರೀತಿ ನೌಕೆಯವರೆಗೆ ನಡೆದಾಡುವಾಗ ಗಗನಯಾನಿಗಳಿಂದ ಬರುವ ಬೆವರನ್ನು ಸಹ ವಿಶೇಷವಾಗಿ ಸಂಗ್ರಹಿಸಿ ವಿಸರ್ಜಿಸಲಾಗುತ್ತದೆ"
" ಬಾಹ್ಯಾಕಾಶದಲ್ಲಿ ವಾಸಿಸುವಾಗ ಅತ್ಯಂತ ಪ್ರಮುಖ ಸವಾಲುಗಳಲ್ಲೊಂದು ಹಿನ್ನೆಲೆ ಸದ್ದು ಅದು ಆಸುಪಾಸಿನ ವಾತಾವರಣದಿಂದ ಉತ್ಪತ್ತಿಯಾಗುವ ಹಿನ್ನೆಲೆ ಸದ್ದು ಬಾಹ್ಯಾಕಾಶ ನಿಲ್ದಾಣವು ಅತ್ಯಂತ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಅನೇಕ ಉಪಕರಣಗಳನ್ನು ಅಳವಡಿಸಲಾಗಿರುತ್ತದೆ ಅವುಗಳಿಂದ ಉದ್ಭವಿಸುವ ಸದ್ದು ಹಿನ್ನೆಲೆ ಸದ್ದಿಗೆ ಕಾರಣ. ಜೊತೆಗೆ ಯಾನಿಗಳು ದೇಹದಂಡನೆಗೆ ಬಳಸುವ ಯಂತ್ರೋಪಕರಣಗಳು ಸಹ ಹಿನ್ನೆಲೆ ಶಬ್ದಕ್ಕೆ ಕೊಡುಗೆ ನೀಡುತ್ತವೆ. ಸರಿಸುಮಾರು 65 ರಿಂದ 100 ಡೆಸಿಬಲ್ ನಷ್ಟು ಸದ್ದು ಎಂದು ಲೆಕ್ಕ ಹಾಕಲಾಗಿದೆ. ಈ ಪ್ರಮಾಣದ ಸದ್ದು ಭೂಮಿಯಲ್ಲಿ ಉಂಟಾಗುವ ಸದ್ದಿನ ಪ್ರಮಾಣಕ್ಕೆ ಸಮವಾಗಿದೆ. ಇಂತಹ ಹಿನ್ನೆಲೆ ಶಬ್ದದೊಂದಿಗೆ ಯಾನಿಗಳು ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗಿರುತ್ತದೆ"
"ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಇರುವಾಗ ದೇಶದಲ್ಲಿನ ನೀರಿನ ಅಸಮರ್ಪಕ ಪರಿಚಲನೆಯಿಂದ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮೆದುಳಿನಲ್ಲಿ ನೀರಿನ ಸಂಗ್ರಹ ಕಣ್ಣು ಮತ್ತು ಮೂಗಿನಲ್ಲಿ ನೀರಿನ ಯತೇಚ್ಛತೆ. ಕಿವಿಗಳು ನೀರಿನಿಂದ ತುಂಬುವುದು ಹೀಗೆ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈ ಅಡ್ಡ ಪರಿಣಾಮಗಳು ಕ್ರಮೇಣ 24 ರಿಂದ 78 ಗಂಟೆಗಳಲ್ಲಿ ಸರಿಯಾಗುತ್ತವೆ."
"ಗಗನಯಾನಿಗಳಲ್ಲಿ ಅನೀಮಿಯಾ ಖಾಯಿಲೆ ಹೆಚ್ಚು. ಇದಕ್ಕೆ ಕಾರಣ ಅಸ್ತಿಮಜ್ಜಿಯಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಕಡಿಮೆಯಾಗುವುದು" ಇಂತಹ ಹಲವಾರು ಆಸಕ್ತಿದಾಯಕವಾದ ಕಟು ವಾಸ್ತವವನ್ನು ತೆರೆದಿಡುತ್ತದೆ ಈ ಪುಸ್ತಕ.
ವಿಜ್ಞಾನದ ಪದಗಳನ್ನು ಕನ್ನಡದಲ್ಲಿ , ಕನ್ನಡದ ಪದಗಳಲ್ಲಿ ಓದುವಾಗ ಗಗನಯಾನದಷ್ಟೇ ಖುಷಿಯಾಗುವುದು ಖಂಡಿತಾ.
ಇದನ್ನು ಕನ್ನಡಕ್ಕೆ ತಂದ
ಲೇಖಕ ಶ್ರೀನಾಥ ರತ್ನಕುಮಾರ್ ಅವರು ಪ್ರಸ್ತುತ ಇಸ್ರೋ ನಲ್ಲಿ ಕೆಲಸ ಮಾಡುತ್ತಿದ್ದು, ಚಂದ್ರಯಾನ ಮತ್ತು ಮಂಗಳಯಾನ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇವರು ವಿಜ್ಞಾನ ಸಂವಹನಕ್ಕಾಗಿ ಇಸ್ರೋ ಸ್ಪೇಸ್ ಟ್ಯೂಟರ್ ಮಾನ್ಯತೆಯನ್ನು ಹೊಂದಿರುವ ಕ್ರಿಯೇಟಿವ್ ಎನ್ನುವ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ.
*************
16-04-2025
Comments
Post a Comment