ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನೂರಕ್ಕೂ ಹೆಚ್ಚು ಪುಟಗಳ ವಿವರ ಬರೆದಿಟ್ಟು ಅದರ ವೀಡಿಯೊ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಷಯ ಇನ್ನೂ ಮರೆಯಲಾಗಿಲ್ಲ. ಮೇಲ್ನೋಟಕ್ಕೆ ಆತನ ಪತ್ನಿ ಅಪರಾಧಿಯಂತೆ ಕಾಣುತ್ತಿದ್ದಾಳೆ ಹಾಗಾಗಿ ತನಿಖೆ ಆಗಬೇಕು ಎಂದು ಉಚ್ಚನ್ಯಾಯಾಲವೂ ಹೇಳಿತ್ತು. ಈಗ ಆಕೆಗೆ ಜಾಮೀನು ಸಿಕ್ಕಿದೆ. ಈ ಘಟನೆಯ ನಂತರ ನೊಂದ ಗಂಡ ಎಂದು ಹೇಳಿಕೊಂಡು ಮತ್ತೊಂದು ಆತ್ಮಹತ್ಯೆಯೂ ಆಯಿತು. ವಿಷಾದವೆಂದರೆ ನಿನ್ನಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಯರನ್ನು ಬೆದರಿಸಲು ಗಂಡಂದಿರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ರೇವಮ್ಮನ ಅಣ್ಣನ ಮಗ ಜೈಲಿನಲ್ಲಿದ್ದಾನೆ. ಅವನ ಹೆಂಡತಿ ಜಾಮೀನು ಕೊಡಿಸಲು ಇವಳ ಹಿಂದೇರಿದ್ದಾಳೆ. ಆಗುವುದಿಲ್ಲ ಎಂದವಳಿಗೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಒತ್ತಡ ಹಾಕುತ್ತಿದ್ದಾಳೆ. ಹೆದರಿದ ರೇವಮ್ಮ ಆಳುತ್ತಾ ಆಫೀಸಿಗೆ ಬಂದಿದ್ದಳು. ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ, ಬಾಡಿಗೆಗೆ ಮನೆ ಬಿಡಿಸಿದರೆ, ಕೆಲಸ ಕೊಡದಿದ್ದರೆ ಹೀಗೆ ಯಾವುದೇ ಕಾರಣವನ್ನು ಕೊಟ್ಟು “ನ...
ಸವಾಲು ದಾಟುವ ಸಂಭ್ರಮ - ಮಹಿಳಾ ದಿನಾಚಾರಣೆಗಾಗಿ ಈ ದಿನದ ವಿಜಯಕರ್ನಾಟಕದಲ್ಲಿ ನಾ ಬರೆದ ಲೇಖನ ಹೇಗಿದೆ. ದಯವಿಟ್ಟು ಓದಿ 🙏 ******* ಅಭಿರುಚಿಯಿರುವವರಿಗೆ ಪ್ರವಾಸವೆನ್ನುವುದು ಆತ್ಮಸಾಂಗತ್ಯದ ಪರಮಾವಧಿ. ಅದರಲ್ಲೂ ಒಂಟಿಯಾಗಿ, ತಿಳಿಯದ ಜಾಗಕ್ಕೆ ಹೋಗುವ, ಅಪರಿಚಿತರೊಡನೆ ಒಡನಾಡುವ ಪ್ರವಾಸವೆಂದರೆ ಅಂತರಂಗಕ್ಕೆ ಪಯಣಿಸುವ ಕುಂಡಲಿನಿ ಯಾತ್ರೆಯಂತೆ. ’ಜಗದ ಜಂಜಡ ಬೇಡ ನಿನಗೆ ನಾನು ಆಗುವೆ ಕಣ್ಣು ನಿನಗೆ’ ಎನ್ನುತ್ತಾ ಪಾರದರ್ಶಕ ಗೆಳೆಯನೊಬ್ಬ ತನ್ನನ್ನೇ ಪ್ರೇಯಸಿಯಾಗಿಸಿಕೊಂಡಿದ್ದಾನೇನೋ ಎನ್ನುವಂತಹ ಅಮೂಲ್ಯ ಭಾವವನ್ನು ಅನುಭವಿಸಿದ್ದೇನೆ ಪ್ರವಾಸದಲ್ಲಿ. ಉದ್ಯೋಗಸ್ಥ ಮಹಿಳೆ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗುವಾಗ ಇಲ್ಲದ ಕೌತುಕ, ಮೆಚ್ಚುಗೆ, ಒಂದು ತೂಕ ಅಸಹನೆ ಮಹಿಳೆಯೊಬ್ಬಳು ಒಂಟಿ ಪ್ರವಾಸಕ್ಕೆ ಹೊರಟಿದ್ದಾಳೆ ಎಂದರೆ ಇರುತ್ತದೆ ಎನ್ನುವುದು ಸೋಜಿಗ. ಹಾಗೆ ಊರೂರು ಸುತ್ತುವವರು ತಮ್ಮ ಕುಟುಂಬದ ಹೊಣೆಯನ್ನು ಬದಿಗೊತ್ತಿರುವವರೋ, ಮತ್ತ್ಯಾವುದೇ ಯಾವುದೇ ಜವಾಬ್ದಾರಿ ಇಲ್ಲದವರೋ, ವಿಪರೀತ ದುಡ್ಡು ಇರುವವರಾಗಿರುತ್ತಾರೆ ಎನ್ನುವುದೇ ಬಹುಪಾಲು ಜನರ ಆಲೋಚನೆ. ಆದರೆ ಎಲ್ಲವನ್ನೂ ನಿಭಾಯಿಸಿಯೂ ತನ್ನ ಆಸಕ್ತಿಗಾಗಿ ಸಮಯ ಮತ್ತು ಸೌಲಭ್ಯವನ್ನು ಒದಗಿಸಿಕೊಳ್ಳಲು ಮನಸ್ಸು ಮಾಡುವ ಮಹಿಳೆಯ ಬಗ್ಗೆ ಸಮಾಜಕ್ಕೆ ಅಸಡ್ಡೆ ಇರುವಂತೆಯೇ ತಮಗಾಗದ್ದನ್ನು ಮತ್ತೊಬ್ಬರು ಮಾಡುತ್ತಿದ್ದಾರೆ ಎನ್ನುವ ಖುಷಿ ಅನುಭವಿಸುವ...
ಎರಡೂ ಕುಟುಂಬಗಳ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾಳಿಗೆ ವರ್ಷದಲ್ಲೇ ತಿಳಿಯಿತು ಗಂಡ ಮಹಾನ್ ಸೋಮಾರಿಯೆಂದು. ತನ್ನ ವಿದ್ಯೆಯೂ ಎರಡನೆಯ ಪಿಯುಸಿಯಷ್ಟೇ. ಯಾರ ಬೆಂಬಲವೂ ಇಲ್ಲದೆ ಎಲ್ಲಿಂದಲೋ ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿ ಪಾರ್ಲರ್ ತೆರೆದುಕೊಂಡು ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಹೋಲ್ಸೇಲ್ ದರದಲ್ಲಿ ಸೀರೆ ಸಪ್ಲೈ ಮಾಡುತ್ತಿದ್ದ ಮಾರಾಟಗಾರನಿಗೂ ಈಕೆಗೂ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್ಐಆರ್ ಆಗಿದೆ ನೀವು ಠಾಣೆಗೆ ಹಾಜರಾಗಬೇಕು’ ಎಂದಷ್ಟೇ ಇದ್ದ ಪತ್ರವೊಂದು ಕೈಸೇರಿದಾಗ ಗಂಡ, ಅತ್ತೆ, ಮಾವ ಎಲ್ಲರೂ ಇವಳನ್ನೇ ನಿಂದಿಸಿ ಮತ್ತಷ್ಟು ಗಾಬರಿ, ಆತಂಕ ಒಡ್ಡಿದ್ದರು. ಹೀಗೆ ಅವರುಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರಬಹುದು, ಕಷ್ಟದಲ್ಲಿ ಕೈಸಾಲ ತೆಗೆದುಕೊಂಡಿರಬಹುದು, ಯಾರದ್ದೋ ಕಷ್ಟಕ್ಕೆ ಜಾಮೀನು ನಿಂತಿರಬಹುದು, ಮತ್ತ್ಯಾರದ್ದೋ ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಅವರಿವರ ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆಯ ವಿಷಯವೇ ಇರಬಹುದು, ಕುಟುಂಬದ ಆಸ್ತಿ ಪಾಲುದಾರಿಕೆಯ ವಿಷಯವ...
Comments
Post a Comment