Legal awareness JJ Nagar

 ಒಬ್ಬ ಪೊಲೀಸ್ ಅಧಿಕಾರಿ ತನ್ನ ವ್ಯಾಪ್ತಿ ಪ್ರದೇಶದ ಮುಖ್ಯ ಸಮಸ್ಯೆಯನ್ನು ಗುರುತಿಸಿ ಅದರ ಬಗ್ಗೆ ಅಲ್ಲಿನ ಹದಿಹರೆಯದವರಿಗೆ ಕಾನೂನು ಅರಿವು ಮೂಡಿಸುವಂತಹ ಕಾರ್ಯಕ್ರಮ ಏರ್ಪಡಿಸಲು, ಇಲಾಖೆ ಮಟ್ಟದಲ್ಲಿ, ಸಮುದಾಯದೊಡನೆ ಎಷ್ಟೆಲ್ಲಾ ಕೆಲಸ ಮಾಡಿರಬೇಕು ಮತ್ತು ನಿಜಾರ್ಥದಲ್ಲಿ ಸಮಾಜದ ಬಗ್ಗೆ ಅದೆಷ್ಟು ಕಾಳಜಿ ಇಟ್ಟುಕೊಂಡಿರಬೇಕು.

JJ ನಗರ , ಬೆಂಗಳೂರು ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಇಂದಿಗೂ ಇರುವ ದೊಡ್ಡ ಸಮಸ್ಯೆ ಎನ್ನುವುದನ್ನು ಅನುಭವದ ಮೂಲಕ ಕಂಡುಕೊಂಡಿರುವ ಸಬ್ ಇನ್ಸ್ಪೆಕ್ಟರ್ ಲೋಕೇಶ್.ಕೆ ಇವರು ಈ ದಿನ 250ಕ್ಕೂ ಹೆಚ್ಚು ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು.

ಇದು ತುರ್ತಾಗಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಆಗಬೇಕಾದ ಕೆಲಸ.

ಸಬ್ ಇನ್ಸ್ಪೆಕ್ಟರ್ ಲೋಕೇಶ್. ಕೆ ಹಾಗೂ PSI ಹನುಮಂತಪ್ಪ ಇವರುಗಳಿಗೆ ಧನ್ಯವಾದ ಹೇಳಲೇಬೇಕು.

ಇದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಮತ್ತೊಂದು ವಿಷಯ;

ಸಯದ್ ಮೈಮೂನ ಎನ್ನುವ ಮಹಿಳೆಯೊಬ್ಬರು " ನಿಮ್ಮ ಬ್ಲಾಗ್ ಅನ್ನು ಎಲ್ಲಾ ಬರಹಗಳನ್ನು ನಾನು follow ಮಾಡ್ತೀನಿ. ಇವತ್ತಿನ ಲೇಖನವನ್ನೂ ಓದಿದೆ" ಎಂದು ಹೇಳಿದ್ದು.

ಜನರ ನಡುವೆ ಇರುವುದು ನಿತ್ಯವಾದಷ್ಟೂ ಹೊಣೆಗಾರಿಕೆ ಮಾತ್ರ ಅಲ್ಲ ಮನುಷ್ಯ ಪ್ರೀತಿಯೂ ಹೆಚ್ಚಾಗುತ್ತದೆ ಎಂದು ತೋರಿಸಿಕೊಟ್ಟ ಇಂತಹ ದಿನಗಳು ಎಲ್ಲರ ಬದುಕಿನಲ್ಲೂ ಹೆಚ್ಚಾಗಬೇಕು.


27-02-2023


Comments

  1. Yes you are right madam, required to have this kind of awareness and sensitization programmes.

    ReplyDelete
  2. ಬಾಲ್ಯ ವಿವಾಹ ತಡೆಯಲು ಕಾನೂನಿಗಿಂತ ಪೋಷಕರಿಗೆ ಕಾನೂನಿನ ತಿಳುವಳಿಕೆ ಮತ್ತು ಮಕ್ಕಳಿಗೆ ಅವರ ಹಕ್ಕುಗಳನ್ನು ಕುರಿತು ಜಾಗೃತಿ ಮೂಡಿಸುವಿಕೆ ಹೆಚ್ಚು ಫಲಕಾರಿಯಾಗಬಹುದೇನೇ!

    ReplyDelete
  3. Excellent initiative taken by JJR Nagar police and ofcourse it was an immense pleasure of having Madam Anjali to deliver this message to the budding children...... Keep it going way long....

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್