Traing to CMPOs of Tumkur and Bengaluru Urban


 ದಿನಾಂಕ 6 ಜನವರಿ 2023 ರಂದು ತುಮಕುರು ಜಿಲ್ಲೆಯ ಬಾಲ್ಯವಿವಾಹ ತಡೆಗಟ್ಟುವಿಕೆ ಅಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಪ್ರಕ್ರಿಯೆ ಬಗ್ಗೆ ತರಬೇತಿ ಕೊಟ್ಟೆ.

ಬಾಲ್ಯವಿವಾಹ 0% ಆದರೆ ನೀವುಗಳು ತೆಗೆದು ಕೊಳ್ಳುತ್ತಿರುವ ಸಂಬಳಕ್ಕಿಂತ ಒಂದುವರೆ ಪಟ್ಟು ಹೆಚ್ಚಿನ ಸಂಬಳ ಪಡೆಯಬಹುದು ಮತ್ತು ಅದಕ್ಕೆ ನೀವು ಅರ್ಹರಿದ್ದೀರ ಎಂದಾಗ ಅವರುಗಳು ಚಕಿತರಾಗಿದ್ದು ಸುಳ್ಳಲ್ಲ.
ಬಾಲ್ಯವಿವಾಹ ಎಂದರೆ ಕೇವಲ ಹೆಣ್ಣು ಮಕ್ಕಳ ದೇಹಕ್ಕೆ ಸಂಬಂಧ ಪಟ್ಟ ವಿಷಯ ಅಲ್ಲ ಈ ದೇಶದ ಆರ್ಥಿಕತೆಗೂ ಸಂಬಂಧ ಪಟ್ಟಿದ್ದಾಗಿದೆ.


ಬೆಂಗಳೂರು ನಗರ ಜಿಲ್ಲೆಯ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಕಾರ್ಯವಿಧಾನದ ತರಬೇತಿ ಕೊಡುವಾಗ ಹಾಜರಿದ್ದ ಯುವ ಪೊಲೀಸ್ ಒಬ್ಬರು ತರಬೇತಿಯ ಕೊನೆಯಲ್ಲಿ "ಮೇಡಮ್, ನಾನು ಪ್ರೊಬೇಷನರಿಯಲ್ಲಿ ಇದ್ದಾಗ ಒಮ್ಮೆ ನಿಮ್ಮ ಬಳಿ ಫೋನ್ ನಲ್ಲಿ ಮಾತನಾಡಬೇಕಾದ ಸಂದರ್ಭ ಬಂತು. ಆಗ ನಮ್ಮ ಇನ್ಸ್ಪೆಕ್ಟರ್ ಆ ಮೇಡಂ ಜೊತೆ ಎಚ್ಚರಿಕೆಯಿಂದ ಮಾತನಾಡು ಅಂತ ಹೇಳಿದ್ದರು. ಈಗಿನಂತೆ ಆಗಲೂ ನಿಮ್ಮ ಮಾತುಗಳು ನನಗೆ ತುಂಬಾ ಸಹಾಯ ಆಯ್ತು" ಎಂದಾಗ ......
ನಿರಾಸೆ ಎನ್ನುವ ಗಂಧ ಗಾಳಿಯಲ್ಲಿ ತೇಲಿ ಬಂದಾಗ ಇಂತಹ ಘಂ ಎನ್ನುವ ಮಾತುಗಳು ಉಚ್ಛ್ವಾಸ ಆಗಿ ಮತ್ತೆ ಮತ್ತೆ ’ರಸ್ತೆಗೆ’ ಇಳಿಸುತ್ತದೆ.
ಮನದ ಭಾವಿಯಿಂದ ನೀರು ಸೇದಿಸುವ ಎಲ್ಲರಿಗೂ ಅದೆಷ್ಟು ಋಣವಿದೆ!

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ