ಮತ್ತೊಮ್ಮೆ ಕಂಡಷ್ಟೂ ಪ್ರಪಂಚ ಬಗ್ಗೆ

 


ಲಿಮ್ಕಾ ದಾಖಲೆ ಹೊಂದಿರುವ ಸಾಹಿತಿಗಳ ಕುಟುಂಬದ ಉದಯ್ ಕುಮಾರ್ ಹಬ್ಬು ಅವರು ನನ್ನ ಕಂಡಷ್ಟೂ ಪ್ರಪಂಚ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ....


"ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ವಕೀಲರು, ಅಂಲಣಕಾರರು ಮತ್ತು ಲೇಖಕರೂ ಆದ ಅಂಜಲಿ ರಾಮಣ್ಣ ಈ ವಿಶೇಷ್ಟವಾದ ಪ್ರವಾಸಿ ಕಥನ ಸಾಹಿತ್ಯ ಕೃತಿಯನ್ನು ಕಳಿಸಿದ್ದಾರೆ‌ ವಿಶೇಷ್ಟ ಯಾಕೆ ಎಂದರೆ ಇತರ ಪ್ರವಾಸಿ ಕಥನಗಳಂತೆ ಒಂದೇ ದೇಶದ ಪ್ರವಾಸ ಕಥನವಲ್ಲ. ಇಡೀ ಪ್ರಪಂಚಾದ್ಯಂತ ಇರುವ ವಿವಿಧ ದೇಶಗಳ ಹಾಗೂ ನಮ್ಮ‌ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗಿ ತನ್ನದೆ ರೀತಿಯಿಂದ ಆ ಸ್ತಳಗಳನ್ನು ವೀಕ್ಷಿಸಿ ಅಲ್ಲಿನ ವಿಶಿಷ್ಟತೆಗಳ ಕುರಿತು ತನ್ನದೆ ಅನುಭವದ ಮಾತುಗಳಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಿಸುವುದು. ಇದರಿಂದ ಓದುಗರಿಗೆ ಆಗುವ ಪ್ರಯೋಜನವೇನೆಂದರೆ ಆ ತಾಣಗಳಿಗೆ ಹೋಗಿನೋಡುವ ಪ್ರೇರಣೆ ನೀಡುತ್ತದೆ. ಅಷ್ಟೆಲ್ಲ ದೇಶಗಳಿಗೆ ನಮ್ಮದೆ ದೇಶದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಿಲ್ಲದಿರುವವರಿಗೆ  ಮನೆಯಲ್ಲೆ ಕುಳಿತು ಆ ಸ್ಥಳಗಳ ಸ್ವಾರಸ್ಯಕರ ಮಾಹಿತಿಗಳನ್ನು ಆಸ್ವಾದಿಸಿ ನಮ್ಮ ಜ್ಞಾನಸಿಂಧು ಕೋಶಕ್ಕೆ ಸೇರಿಕೊಂಡ ಧನ್ಯತೆ ನಮ್ಮದಾಗುತ್ತದೆ

ಅಂಜಲಿಯು ಏಕಾಂಗಿಯಾಗಿ ತಾನು ಓದಿದ ಸ್ಥಳಗಳಿಗೆ  ಪ್ರವಾಸದ ಅಚ್ಚುಕಟ್ಟು ಯೋಜನೆಗಳೊಂದಿಗೆ ಹೊರಟುಬಿಡುತ್ತಾರೆ. ಅವರು ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ದೇಶ ವಿದೇಶಗಳಿಗೆ ಪ್ರವಾಸ ತಾಣಗಳಿಗೆ ಹೋಗುವವರಿಗೆ ಖಚಿತವಾದ ಮಾರ್ಗದರ್ಶಿ ಸಲಹೆಗಳನ್ನು ತಮ್ಮ ಪ್ರವಾಸಗಳ ಅನುಭವದಿಂದ ಕೊಟ್ಟಿರುತ್ತಾರೆ.

ಇವರು ನೋಡಿದ ಹೆಚ್ಚಿನ ಪ್ರವಾಸಿ ತಾಣಗಳು ಅನೇಕ ರೀತಿಯಿಂದ ವಿಶಿಷ್ಟವೆ.

ಕೆಲವರು tour package ನಲ್ಲಿ ಪ್ರವಾಸ ಮಾಡುತ್ತಾರೆ

‌ಸುರಕ್ಷಿತತೆಯ ದೃಷ್ಟಿಯಿಂದ ಇದು ಒಳ್ಳೆಯದೆ. ಆದರೆ ಟೂರ್ ಪ್ಯಾಕೇಜ್ ಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಇರುವುದಿಲ್ಲ. ನಾವು ಮಹತ್ವದ ಸ್ಥಳ ಎಂದು ಗೂಗಲ್ ನಲ್ಲಿ ಓದಿ ಹೋದರೆ ಆ ಸ್ಥಳ ಅವರ ಪ್ಯಾಕೇಜಿನಲ್ಲಿ ಇರುವುದಿಲ್ಲ.‌ ಹಾಕಿದ ಹುಲ್ಲು ಕಟ್ಟಿದ ಗುಟ್ಡಕ್ಕೆ ನೇತಾಡುವ ದನಗಳಂತೆ.

ಹೀಗೆ ನಮ್ಮಷ್ಟಕ್ಕೆ ನಾವು ಪೂರ್ವ ಯೋಜನೆ ಮಾಡಿ ಹೊರಟರೆ ಹಣವೂ ಉಳಿತಾಯವಾಗಬಹುದು. ಹೆಚ್ಚಿನ‌ ನಾವು ಇಷ್ಟಪಡುವ ತಾಣಗಳನ್ನು ನೋಡಿ ಆನಂದಿಸಬಹುದು.

ಅಂಜಲಿ ದೇಶದ ಹಲವಾರು ತಾಣಗಳಾದ ದಾರ್ಜಲಿಂಗ್,ಗೌಜಾಟಿ, ಲಖನೌ,ಉತ್ತರಪ್ರದೇಶ, ಕೇದಾರ್, ಬದರಿನಾಥ, ಭಾರತದ ಕೊನೆಯ ಹಳ್ಳಿ ಮಾನಾ, ಮತ್ತು ವಿದೇಶಗಳಲ್ಲಿ ವಾಷಿಂಗ್ಟನ್ ಡಿ ಸಿ, ಲಂಡನ್ ನ ಗ್ರಂಥಾಲಯ ಕ್ಕೂ ಹೋಗಿ ಆ ಗ್ರಂಥಾಲಯದ ವೈಶಿಷ್ಡ್ಯವನ್ನು ಬಹಳ ಆಕರ್ಷಕ ಶೈಲಿಯಲ್ಲಿ ಓದುಗರನ್ನು ಹಿಡಿದಿಡುತ್ತಾರೆ. ನನಗೆ ಹೆಚ್ಚು ಖುಶಿ ಕೊಟ್ಟ ಬರಹ ಲಂಡನ್ನಿನ, ಸ್ಯಾಂಟೋಮಾರುಕಟ್ಟೆರಿ ಜೋಧಜ್ ಟೆಲ್ ಅವಿವ್ನ ಗ್ರಂಥಾಲಗಳ ಸೌಕರ್ಯ ನನಗೆ ತುಂಬ ಇಷ್ಟವಾಯ್ತು

ಅಮೃತಸರದ ಗೋಲ್ಡನ್ ಟೆಂಪಲ್ ಅಲ್ಲಿನ ಸೇವೆಯ ವೈಖರಿ ಸೇವೆ ಮಾಡಲು ಮೊದಲೆ ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತಂತೆ. 

ಅಂತೆಯೆ ಅಂಜಲಿ ಮಹಿಳಾ ಪ್ತಪಂಚ ಇದ್ದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಉದಾಹರಣೆಗಾಗಿ " ಕಜ್ಕರ್ ಮಹಿಳೆಯರು- ಪುರಾತನ ಮಾರುಕಟ್ಟೆ ಜೋಧಪುರದಲ್ಲಿ ಅರಮನೆಯಲ್ಲಿ ಕಂಡ ಹೆಮ್ಮಕ್ಕಳ ಹಸ್ತ ಶಿಲ್ಪಚಿತ್ರ. ಈ ಹಸ್ತಚಿತ್ರಗಳು ಸತಿ ಹೋದ ಹೆಮ್ಮಕ್ಕಳ ಹಸ್ತಚಿತ್ರಗಳು. ಇದನ್ನು ಕಂಡು ಅಂಜಲಿ ಕನಲುತ್ತಾರೆ

ಸ್ವಾತಂತ್ರ್ಯ ಹೋರಾಟಗಾರ ರಾಮಣ್ಣ ಅವರ ಮಗಳಾದ ಅಂಜಲಿ ಎಲ್ಲೆಲ್ಲೂ ಗಾಂಧಿಜೀಯ ಪ್ರತಿಮೆಗಳನ್ನೆ ಕಂಡು ಕಣ್ಣೀರಾಗಿತ್ತಾರೆ‌ ಗುಜರಾತ್,ವೇಲ್ಸ್,ಜಿನೇವಾ,ಕೌಸಾನಿ,ಲಂಡನ್, ವಾಷಿಂಗ್ಟನ್ ಬಸ್, ದಕ್ಷಿಣ ಆಫ್ರಿಕಾ ಎಲ್ಲೆಲ್ಲೂ ತನ್ನ ದೇಶದ ಸ್ವತಂತ್ರ ಸೇನಾನಿಯನ್ನು ಕಂಡು ಭಾವೋದ್ವೇಗಗೊಳ್ಳುತ್ತಾರೆ.

ರವಿಂದ್ರನಾಥ ಠಾಕೋರರು ಕುಳಿತು ಗೀತಾಂಜಲಿ ಬರೆದ ಮನೆ ಕೆಲಿಂಗಪಾಂಗ್ ಕಟ್ಟಡ ಈಗ ದೆವ್ವಗಳ‌ ಮನೆಯಂತೆ ವಿನಾಶದಂಚಿನಲ್ಲಿದೆ ಎಂದು ವಿಷಾದಿಸುತ್ತಾರೆ‌

ಇವರು ಈರ್ವರು ಅಧ್ಯಾತ್ಮಿಕ ಗುರುಗಳನ್ನು ಭೇಟಿಯಾದ ಅನುಭವಗಳ‌ನ್ನು ಅದರ ಬಗ್ಗೆ ಪಟ್ಟ ಅವಿರತ ಪ್ರಯತ್ನಗಳನ್ನು ಸವಿವರವಾಗಿ ಬರೆಯುತ್ತಾರೆ.‌ಒಬ್ಬರು ದಲಾಯಿ ಲಾಮಾ,ಇನ್ನೊಬ್ಬರು ಪುಟ್ಟಪರ್ತಿಯ ಸಾಯಿಬಾಬಾ. ಸಾಯಿಬಾಬಾರು ಯುವಕರಿದ್ದಾಗಲೂ ಹೋಗಿದ್ದರು, ಅವರ ವೃದ್ಧಾಪ್ಯದಲ್ಲಿ ತಲೆಯ ಕೂದಲೆಲ್ಲ ಬೋಳಾಗಿ ನಡುಗುತ್ತಿದ್ದ ಜೋಲುಬಿದ್ದ ಸಾಯಿಬಾಬಾರನ್ನು ಕಂಡು ಅಲ್ಲಿದ್ದ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ದಲಾಯಿ ಲಾಮಾರಿಗೆ ಅಂಜಲಿ ಬಳ್ಳಿಯಂತೆ ಲಾಮಾರನ್ನು ಸುತ್ತಿಕೊಂಡಿದ್ದರಂತೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ "I will pray" ಇಷ್ಟೆ ಉತ್ತರ ಅಂಜಲಿಗೆ  ಸಿಕ್ಕಿತಂತೆ

ಅಂಡಮಾನ್ ದ್ವೀಪಗಳಿಗೆ ಮತ್ತು ಲೇಹ್ ಲಡಾಕ್ಕಿನಲ್ಲಿರುವ ಕಾರ್ಗಿಲ್ ಯುದ್ಧದ ಸ್ಮಾರಕವಾದ ಹಾಲ್ ಆಫ್ ಫೇಮ್ ಗೂ ಹೋಗಿ ಹುತಾತ್ಮ ಸೈನಿಕರಿಗೆ ಸಲಾಂ ಹೊಡೆದು ಬಂದಿದ್ದಾರೆ

ಪೂರ್ಣಕುಂಭ ಮೇಳದ ಸ್ವಾರಸ್ಯಕರ ಘಟನೆಗಳು ವಿಚಿತ್ರ ಮತ್ತು ವಿಶಿಷ್ಟವಾಗಿವೆ‌. ದ್ರಾಕ್ಷಾ ರಸದ ಸ್ವರ್ಗ ಸ್ಯಾಂಟೋರಿನಿ, ಗ್ರೀಸಿನಲ್ಲಿದ್ದು ಅಲ್ಲಿ ತಯಾರಾಗುವ ವೈನಿನ ವಿಶಿಷ್ಟತೆಯನ್ನು ರೋಚಕವಾಗಿ ನಿರೂಪಿಸಿದ ಅಂಜಲಿ‌

ಅರುಣಾಚಲಪ್ರದೇಶ ಇಟಾ ನಗರದಲ್ಲಿ ಅಂಜಲಿ ವೈಶ್ಯೆ ದೋರ್ಜಿ ತೊಂಗ್ಚಿ ಎಂಬ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿಯನ್ನು ಭೇಟಿಯಾಗಿ ಅವರ ಸಂದರ್ಧನ ಮಾಡುತ್ತಾರೆ. ಸಾಹಿತಿಯ ಸಂದರ್ಶನ ಅರ್ಥಪೂರ್ಣ ವಾಗಿದೆ. ಸಾಹಿತಿಯ ಮಾತುಗಳು:" ಲಿಪಿ ಇರುವ ಭಾಷೆಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ  ಈ ಕಾಲದಲ್ಲಿ ಲಿಪಿ ಇಲ್ಲದ ಭಾಷೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಸರಿ. ಯಾವುದೆ  ಭಾಷೆಯ ಉಳಿವು ಬರವಣಿಗೆಯಿಂದ ಮಾತ್ರ. ಆಗುವುದಿಲ್ಲ. ಭಾಷೆ ಜೀವಂತವಾಗಿ ಉಳಿಯುವುದು ಅದನ್ನು ಮಾತಾಡುತ್ತಿದ್ದರೆ ಮಾತ್ರ ಆದರೆ ಈಗಿನ ಯುವಕರು ಹೆಚ್ಚುಪಾಲು ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ.‌ಹಾಗಾಗಿ ಅರಿವಿಗೆ ಬಾರದೆಯೇ ಭಾಷೆಗಳು ನಶಿಸಿ ಹೋಗುತ್ತವೆ. ಭಾಷೆಯಲ್ಲಿ ‌ಬದಲಾವಣೆ ಅನಿವಾರ್ಯ‌ ಮತ್ತು ಸ್ವಾಗತಾರ್ಗ. ಆದರೆ ಒಂದು ಭಾಷೆ ಬಳಕೆಯೇ ಇಲ್ಲದೆ ನಶಿಸಿ ಹೋಗುವುದು ನೋವಿನ ಸಂಗತಿ."

"ಪ್ರಪಂಚದ ವೈವಿಧ್ಯತೆಯನ್ನು ನೋಡುವುದು ತಿಳಿಯುವುದು, ಆನಂದಿಸುವುದು ಮತ್ತು ಅದರ ಮೂಲಕ ಕಲಿಯುವುದು - ಕಲಿಸುವುದು ಇವುಗಳು ಬದುಕಿನ ಉದ್ದೇಶವಾದಾಗ ನಮ್ಮ ಪಗ್ರವಾಸಕ್ಕೆ ಬರುವುದು ಹೆಚ್ಚಿನ ಮೆರು.ಗು" ಎಂದು ಅಂಜಲಿ ತನ್ನ ಪ್ರವಾಸದ ಉದ್ದೇಶವನ್ನು ಹೇಳುತ್ತಾರೆ

ಅಂಜಲಿ ಓದುಗರಿಗೆ ಹೊಸ ಬಗೆಯ ಪ್ರವಾಸ ಸಾಹಿತ್ಯ ಕೃತಿಯನ್ನು ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು.

ಇವರ ಹಾಗೆ ಸುಚಿತ್ರಾ ಹೆಗಡೆ ಅವರೂ ಕೂಡ ಅರ್ಥಪೂರ್ಣ ಪ್ರವಾಸ ಸಾಹಿತ್ಯ ಕೃತಿಯನ್ನು ಬರೆದಿದ್ದಾರೆ.

ಓದಿರಿ" - ಉದಯ್ ಕುಮಾರ್ ಹಬ್ಬು




Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್