ಕಂಡಷ್ಟೂ ಪ್ರಪಂಚ ಕಂಡ ಬಾಗೆ

 


ದಿಗ್ಗಜ ಸಾಹಿತಿ Dr. ಶಾಂತಾ ನಾಗರಾಜ್ ಅವರು " ಕಂಡಷ್ಟೂ ಪ್ರಪಂಚ " ಪುಸ್ತಕದ ಬಗ್ಗೆ 👇 ಹೀಗೆ ಬರೆದಿದ್ದಾರೆ. Feeling ಖುಷಿ ಖುಷಿ....ನಿಮ್ಮ ಪ್ರತಿಗಾಗಿ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ 300/-

" - ‘ ಕಂಡಷ್ಟೂ ಪ್ರಪಂಚ ‘ ಸಕತ್ತಾಗಿಯೇ ಪ್ರಪಂಚ ದರ್ಶನ ಮಾಡಿಸಿತು. ಅದೆಷ್ಟೊಂದು ವಿಚಾರಗಳಲ್ಲಿ ಬೆರಗುಗೊಂಡೆನೆಂದರೆ , ಅದರ ಪಟ್ಟಿ ಮಾಡಬೇಕು. 

ನಿಮ್ಮ ಜೀವನೋತ್ಸಾಹಕ್ಕೆ

ನಿಮ್ಮ ಚಾಲನ ಮತ್ತು ಧಾರಣ ಶಕ್ತಿಗೆ

ನಿಮಗಿರುವ ಅಮೋಘವಾದ ಕುತೂಹಲಗಳಿಗೆ

ನಿಮ್ಮ ಬರವಣಿಗೆಯ ಚೆಂದದ ಶೈಲಿಗೆ

ಅತ್ಯಂತ ಸಣ್ಣವಿಷಯವೆನಿಸುವುದನ್ನೂ ಸ್ವಾರಸ್ಯವಾಗಿ ವಿಸ್ತರಿಸುವ ನಿಮ್ಮ ಕಲ್ಪನಾ ಸಾಮರ್ಥ್ಯಕ್ಕೆ

ಎಲ್ಲಕ್ಕೂ ನಮೋನಮಃ ಎನ್ನದೇ ಬೇರೆ ದಾರಿಯೇ ನನಗೆ ಕಾಣುತ್ತಿಲ್ಲ. 

ನನ್ನ ಇನ್ನೊಂದು ಅನುಭವವನ್ನು ಇಲ್ಲಿ ಹೇಳಲೇ ಬೇಕು. ಒಂದು ಪ್ರಪಂಚದ ಮ್ಯಾಪ್ ಇಟ್ಟುಕೊಂಡು, ಈ ಪುಸ್ತಕದಲ್ಲಿನ ಅಧ್ಯಾಯಗಳ ಊರನ್ನು ಗುರುತಿಸುತ್ತಾ , ಒಂದಕ್ಕೊಂದು ಗೆರೆ ಎಳೆದು ಸೇರಿಸಿದರೆ , ಕೊನೆಯ ಅಧ್ಯಾಯ ಬರುವಹೊತ್ತಿಗೆ ಮ್ಯಾರಿನ ತುಂಬಾ ಗೀಚುಗಳಾಗಿ , ಅದರೊಳಗಿನಿಂದ ಸೈಕಲ್ ರಿಕ್ಷಾ ಹಿಡಿದ ಅಂಜಲಿ ರಾಮಣ್ಣ ನಸುನಗುತ್ತಿರುತ್ತಾರೆ ! ಇಡೀ ಪುಸ್ತಕ ಓದಿದ ಮೇಲೆ ರೋಲರ್ ಕೋಸ್ಟರ್ ನಲ್ಲಿ ಅಡ್ಡಡ್ಡ ಉದ್ದುದ್ದ ತಿರುಗಿದಂತಾಗಿ ತಲೆ ಸುತ್ತುವುದು ಖಂಡಿತಾ! ನಿಮ್ಮ ತುಂಟ ಮನ ಬೇಕೆಂದೇ ಚಾಪ್ಟರ್ ಗಳನ್ನು ಹೀಗೆ ಜೋಡಿಸಿರಬಹುದೆನ್ನುವ ಅನುಮಾನ ನನಗೆ. 

ಅಭಿನಂದನೆಗಳು ಮತ್ತು ಪ್ರೀತಿಯ ಹಗ್! "

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ