ಶಾಲೆಗಳ ಆರಂಭ, ಹೂಂ ಅಂತೀರಾ?!
ಈ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಮಂಡಿಸುವ ದೃಷ್ಟಿಯಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬೇರೆ ಬೇರೆ ತರಗತಿಗಳಲ್ಲಿ , ಬೇರೆ ಬೇರೆ ಸ್ತರದ ಪ್ರೈವೇಟ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 64 ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇನೆ. ಎಲ್ಲರ ಒಟ್ಟಾರೆ ಅಭಿಪ್ರಾಯ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಅನ್ನುವುದೇ ಆಗಿದೆ. ಇದಕ್ಕೆ ಅವರುಗಳು ನೀಡುವ ಕಾರಣ ಆನ್ ಲೈನ್ ಎಜುಕೇಷನ್ ಅನುಕೂಲವಾಗಿದೆ, ತಂದೆ ತಾಯಿಯರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದು ಹೀಗೆ ಕೆಲವಾರು. ಇನ್ನೊಂದು ಗಮನಿಸಬೇಕಾದ ವಿಷಯ ಎಂದರೆ ಬಹಪಾಲು ಮಕ್ಕಳು ಜೂನ್ ಒಂದನೆಯ ತಾರೀಖು ಹೊಸ ಸಮವಸ್ತ್ರ, ಹೊಸ ಪುಸ್ತಕ ಇವೆಲ್ಲವನ್ನು ತೆಗೆದುಕೊಂಡು ಶಾಲೆಗೆ ಹೋಗಬೇಕು ಎನ್ನುವ ಆಕರ್ಷಣೆಯನ್ನು ಹೊಂದಿಲ್ಲ. ಆದರೆ 10 ನೆಯ ತರಗತಿಯ ಮತ್ತು ಎರಡನೆಯ ಪಿಯೂಸಿ ಮಕ್ಕಳು ಪರೀಕ್ಷೆ ಮುಗಿಸಿ ಕಾಲೇಜಿಗೆ ಹೋಗಬೇಕು ಎನ್ನುವ ಉತ್ಸಾಹ ತೋರಿಸಿದ್ದಾರೆ. ದೇಶದಲ್ಲಿ ಈವರೆಗೂ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ವಿರಳ. ಆದರೆ ವಿಶ್ವಸಂಸ್ಥೆಯು ನೀಡಿರುವ ಒಂದು ಅಂಕಿಅಂಶದಲ್ಲಿ ಶಾಲೆಯನ್ನು ಪುನರಾರಂಭ ಮಾಡಿರುವ ಕೆಲವು ದೇಶಗಳಲ್ಲಿ ಮಕ್ಕಳಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಶಾಲೆಗಳ ಪುನರಾರಂಭ ಮಾಡಿದ ನಂತರ ಸೋಂಕಿತರ ಸಂಖ್ಯೆ ಹೆಚ್ಚಿಸ...